Bengaluru Chennai Expressway: ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​​ ವೇ ರಸ್ತೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್​​

| Updated By: ವಿವೇಕ ಬಿರಾದಾರ

Updated on: Sep 08, 2023 | 10:53 AM

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ​​ವೇ ಸುಮಾರು 262 ಕಿಮೀ ​ಉದ್ದದ ಬೆಂಗಳೂರು ಕೈಗಾರಿಕಾ ಕಾರಿಡಾರ್​ನ ಭಾಗವಾಗಿದೆ. ಎಕ್ಸ್​ಪ್ರೆಸ್​ ವೇಯಿಂದ ಪ್ರಯಾಣದ ಅವಧಿ ಎರಡು ಗಂಟೆ ಕಡಿಮೆಯಾಗಲಿದೆ. ಸದ್ಯ ಉಭಯ ನಗರಗಳ ನಡುವಣ ಸಂಚಾರಕ್ಕೆ ಸಾಮಾನ್ಯವಾಗಿ 5-6 ಗಂಟೆ ಬೇಕಾಗುತ್ತಿದೆ.

Bengaluru Chennai Expressway: ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​​ ವೇ ರಸ್ತೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್​​
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ಸೆ.08: ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​​​ ವೇ (Bengaluru Chennai Expressway) ಡಿಸೆಂಬರ್ ಅಥವಾ ಜನವರಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಸುಮಾರು 262 ಕಿಮೀ ​ಉದ್ದದ ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್​​ವೇ ಬೆಂಗಳೂರು ಕೈಗಾರಿಕಾ ಕಾರಿಡಾರ್​ನ ಭಾಗವಾಗಿದೆ. ಎಕ್ಸ್​ಪ್ರೆಸ್​ ವೇಯಿಂದ ಪ್ರಯಾಣದ ಅವಧಿ ಎರಡು ಗಂಟೆ ಕಡಿಮೆಯಾಗಲಿದೆ. ಸದ್ಯ ಉಭಯ ನಗರಗಳ ನಡುವಣ ಸಂಚಾರಕ್ಕೆ ಸಾಮಾನ್ಯವಾಗಿ 5-6 ಗಂಟೆ ಬೇಕಾಗುತ್ತಿದೆ ಎಂದು ತಿಳಿಸಿದರು.

ಅಶೋಕ್ ಲೇಲ್ಯಾಂಡ್‌ನ 75ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್​​ ವೇ ಈ ವರ್ಷಾಂತ್ಯ ಅಥವಾ ಜನವರಿ 2024 ರ ವೇಳೆಗೆ ಪ್ರಾರಂಭವಾಗಲಿದೆ. ಆದ್ದರಿಂದ, ನೀವು ರಸ್ತೆಯಲ್ಲಿ ನಿಮ್ಮ ಐಷಾರಾಮಿ ಬಸ್‌ಗಳು ಮತ್ತು ಸ್ಲೀಪರ್ ಕೋಚ್‌ಗಳನ್ನು ಪ್ರಾರಂಭಿಸಬಹುದು. ದೇಶಾದ್ಯಂತ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದ್ದು, ಭಾರತ ಮಾಲಾ ಯೋಜನೆ ಅಡಿ ಚೆನ್ನೈ ಶೀಘ್ರದಲ್ಲೇ ದೆಹಲಿಗೆ ರಸ್ತೆ ಸಂಪರ್ಕ ಸಾಧಿಸಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಶೀಘ್ರ ಸಿದ್ಧವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ವೇ; ದೂರ, ಸಮಯ, ಇತರ ಮಾಹಿತಿ ಇಲ್ಲಿದೆ

ದೆಹಲಿಯಿಂದ ಸೂರತ್, ನಾಸಿಕ್, ಅಹ್ಮದ್‌ನಗರ, ಕರ್ನೂಲ್, ಚೆನ್ನೈ, ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್‌ಗೆ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದೇವೆ. ಮತ್ತು ದೆಹಲಿ ಮತ್ತು ಜೈಪುರ ನಡುವಿನ ಹೆದ್ದಾರಿಯಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಪ್ರಕ್ರಿಯೆಯಲ್ಲಿದೆ ಎಂದು ಮಾಹಿತಿ ನೀಡಿದರು.

ಅಶೋಕ್ ಲೇಲ್ಯಾಂಡ್‌ ಮತ್ತು ಇತರ ವಾಹನ ತಯಾರಿಕಾ ಕಂಪನಿಗಳು ಮೆಥನಾಲ್​ ಆಧಾರಿತ ಅಥವಾ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ತಯಾರಿಸಬೇಕೆಂದು ಕರೆಕೊಟ್ಟರು. ಬೆಂಗಳೂರಿನಲ್ಲಿ ನಾನು ಅಶೋಕ್ ಲೇಲ್ಯಾಂಡ್‌ ಕಂಪನಿಯ ಮೆಥನಾಲ್ ಮಿಶ್ರಿತ ಇಂಧನದಿಂದ ಚಲಿಸಬಲ್ಲ ವಾಹನವನ್ನು ಅನಾವರಣಗೊಳಿಸಿದ್ದೆ. ಭಾರತದ ರಸ್ತೆಗಳಲ್ಲಿ ಮೆಥೆನಾಲ್ ಟ್ರಕ್‌ಗಳನ್ನು ಸಂಚರಿಸುವಂತೆ ಮಾಡುವುದು ನನ್ನ ಕನಸು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ