ಮಂಗಳಮುಖಿಯರ ವಿರುದ್ಧ ಹೆಚ್ಚಾದ ಸಾರ್ವಜನಿಕರ ದೂರು: ಠಾಣೆಗೆ ಕರೆಸಿ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ನೆಲಮಂಗಲ ಇನ್ಸ್‌ಪೆಕ್ಟರ್
ರಾಬರಿ, ಗಿರಾಕಿಗಳ ಬಳಿ ಮೊಬೈಲ್ ಕಸಿದು ಗೂಗಲ್ ಪೇ, ಪೋನ್ ಪೇ ಮುಖಾಂತರ ಹಣ ಸುಲಿಗೆ, ಗೃಹ ಪ್ರವೇಶ ಸಂಭ್ರಮಕ್ಕೆ ಅಡ್ಡಿ, ಹಣ ಕೊಡದಿದ್ರೆ ಮಾಲೀಕರ ಮೇಲೆ ಹಲ್ಲೆ, ಬಟ್ಟೆ ಎತ್ತಿ ತೋರಿಸುವುದು, ಇದೆಲ್ಲ ಸ್ಟಾಪ್ ಆಗಿಲ್ಲ ಅಂದ್ರೆ ಮುಲಾಜಿಲ್ಲದೆ ಕೇಸ್ ಜಡಿದು ಜಾಗ ಖಾಲಿ ಮಾಡಿಸುವೆ. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರುವುದು. ಹದ್ದು ಬಸ್ತು ಮೀರಿದ್ರೆ ಹುಷಾರು ಎಂದು ಇನ್ಸ್‌ಪೆಕ್ಟರ್ ಶಶಿಧರ್ ಅವರು ಖಡಕ್ ವಾರ್ನ್ ಮಾಡಿದರು.
ನೆಲಮಂಗಲ, ಸೆಪ್ಟೆಂಬರ್ 8: ಮಂಗಳಮುಖಿಯರ (Transgenders) ಹಾವಳಿ ಹೆಚ್ಚಾಗಿದ್ದು, ಅದರ ವಿರುದ್ಧ ಸಾರ್ವಜನಿಕರ ದೂರು (Complaints) ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳಮುಖಿಯರ ಲೀಡರುಗಳನ್ನು ಠಾಣೆಗೆ ಕರೆಸಿಕೊಂಡಿದ್ದ ನೆಲಮಂಗಲ ಇನ್ಸ್‌ಪೆಕ್ಟರ್ ಶಶಿಧರ್ (Nelamangala Police) ಹಿಗ್ಗಾಮುಗ್ಗ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಬರಿ, ಗಿರಾಕಿಗಳ ಬಳಿ ಮೊಬೈಲ್ ಕಸಿದು ಗೂಗಲ್ ಪೇ, ಪೋನ್ ಪೇ ಮುಖಾಂತರ ಹಣ ಸುಲಿಗೆ, ಗೃಹ ಪ್ರವೇಶ ಸಂಭ್ರಮಕ್ಕೆ ಅಡ್ಡಿ, ಹಣ ಕೊಡದಿದ್ರೆ ಮಾಲೀಕರ ಮೇಲೆ ಹಲ್ಲೆ, ಬಟ್ಟೆ ಎತ್ತಿ ತೋರಿಸುವುದು, ಇದೆಲ್ಲ ಸ್ಟಾಪ್ ಆಗಿಲ್ಲ ಅಂದ್ರೆ ಮುಲಾಜಿಲ್ಲದೆ ಕೇಸ್ ಜಡಿದು ಜಾಗ ಖಾಲಿ ಮಾಡಿಸುವೆ. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಇರುವುದು. ಹದ್ದು ಬಸ್ತು ಮೀರಿದ್ರೆ ಹುಷಾರು (Warning) ಎಂದು ಇನ್ಸ್‌ಪೆಕ್ಟರ್ ಶಶಿಧರ್ ಅವರು ಖಡಕ್ ವಾರ್ನ್ ಮಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ವ್ಯಾಪ್ತಿಯ 60ಕ್ಕೂ ಹೆಚ್ಚು ಮಂಗಳಮುಖಿ ಹಮಾಮ್ ಲೀಡರುಗಳಿಗೆ ಪೊಲೀಸರು ಖಡಕ್ ವಾರ್ನಿಂಹಗ್ ಕೊಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ