‘ಸ್ಪಂದನಾ ಸಿನಿಮಾ ನೋಡಿದ್ರೆ ಇಷ್ಟಪಡುತ್ತಿದ್ದಳು’; ‘ಕದ್ದ ಚಿತ್ರ’ದ ಬಗ್ಗೆ ವಿಜಯ್ ರಾಘವೇಂದ್ರ ಭಾವುಕ ಮಾತು
ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾ ಇಂದು (ಸೆಪ್ಟೆಂಬರ್ 8) ರಿಲೀಸ್ ಆಗಿದೆ. ಸೆಲೆಬ್ರಿಟಿಗಳಿಗಾಗಿ ಈ ಚಿತ್ರದ ವಿಶೇಷ ಶೋನ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದ ಎಲ್ಲಾ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ವಿಜಯ್ ರಾಘವೇಂದ್ರ ಅವರು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ವಿಜಯ್ ರಾಘವೇಂದ್ರ (Vijay Raghavendra) ನಟನೆಯ ‘ಕದ್ದ ಚಿತ್ರ’ ಸಿನಿಮಾ ಇಂದು (ಸೆಪ್ಟೆಂಬರ್ 8) ರಿಲೀಸ್ ಆಗಿದೆ. ಸೆಲೆಬ್ರಿಟಿಗಳಿಗಾಗಿ ಈ ಚಿತ್ರದ ವಿಶೇಷ ಶೋನ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದ ಎಲ್ಲಾ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ವಿಜಯ್ ರಾಘವೇಂದ್ರ ಅವರು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಜೊತೆಗೆ ಪತ್ನಿ ಸ್ಪಂದನಾ ಅವರನ್ನು ನೆನಪಿಸಿಕೊಂಡಿದ್ದಾರೆ. ‘ಎಲ್ಲರಿಗೂ ಧನ್ಯವಾದ. ಇವತ್ತು ಅದೇ ಪ್ರೀತಿ ತೋರಿಸುತ್ತಿದ್ದೀರಿ. ಸ್ಪಂದನನಾ ಮಿಸ್ ಮಾಡಿಕೊಳ್ಳುತ್ತೇನೆ. ಅವಳು ಈ ಸಿನಿಮಾ ನೋಡಿದ್ರೆ ಖುಷಿಪಡುತ್ತಿದ್ದಳು. ನಾನು ಈ ರೀತಿ ಪಾತ್ರ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಒಳ್ಳೆಯ ರೀತಿಯಲ್ಲಿ ಚಿತ್ರವನ್ನು ಪ್ರೇಕ್ಷಕರ ಎದುರು ಇಡಲಾಗಿದೆ’ ಎಂದಿದ್ದಾರೆ ವಿಜಯ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos