ಬೆಂಗಳೂರಿನ ಹೃದಯ ಭಾಗದಲ್ಲೇ ಬಾಲ್ಯ ವಿವಾಹ? 16 ವರ್ಷದ ಬಾಲಕಿಗೆ ಬಲವಂತದ ಮದುವೆ ಆರೋಪ, ಕೇಸ್ ದಾಖಲು

ಬಾಲ್ಯ ವಿವಾಹ ಕಾನೂನು ಬಾಹಿರ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಪದ್ದತಿಯನ್ನು ಈ ಸಮಾಜದಿಂದ ಹೊರ ಹಾಕಬೇಕು ಎಂದು ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಅದೆಷ್ಟೇ ಹೋರಾಟ ಮಾಡಿದರೂ, ಕಾನೂನುನ್ನು ಕಠಿಣ ಮಾಡಿದರೂ ಬಾಲ್ಯ ವಿವಾಹ ನಿಲ್ಲುವ ರೀತಿ ಕಾಣಿಸುತ್ತಿಲ್ಲ. ಬೆಂಗಳೂರಿನಂತಹ ಪ್ರಮುಖ ನಗರದಲ್ಲಿಯೇ ಅಂಥದ್ದೊಂದು ಘಟನೆ ನಡೆದ ಬಗ್ಗೆ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಹೃದಯ ಭಾಗದಲ್ಲೇ ಬಾಲ್ಯ ವಿವಾಹ? 16 ವರ್ಷದ ಬಾಲಕಿಗೆ ಬಲವಂತದ ಮದುವೆ ಆರೋಪ, ಕೇಸ್ ದಾಖಲು
ಸಾಂದರ್ಭಿಕ ಚಿತ್ರ
Edited By:

Updated on: Oct 02, 2025 | 7:23 AM

ಬೆಂಗಳೂರು, ಅಕ್ಟೋಬರ್ 2: ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಅದರಲ್ಲೂ ಬೆಂಗಳೂರು (Bengaluru) ನಗರ ವಿಶ್ವದಲ್ಲಿಯೇ ದೊಡ್ಡ ಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಆದರೆ, ಕೆಲವೊಂದು ಮಂದಿ ಮಾತ್ರ ನಮಗೂ ಇದಕ್ಕು ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಸೆಪ್ಟೆಂಬರ್ ತಿಂಗಳ 26 ನೇ ತಾರೀಖಿನಂದು ಆನೇಪಾಳ್ಯದಲ್ಲಿ 16 ವರ್ಷದ ಯುವತಿಯನ್ನು ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ವಕೀಲ ಹುಸೇನ್ ಎಂಬುವವರು ಆರೋಪಿಸಿದ್ದಾರೆ.

ಇನ್ನು ಮುಸ್ಲಿಂ ಮುಖಂಡರ ನೇತೃತ್ವದಲ್ಲಿಯೇ 16 ವರ್ಷದ ಬಾಲಕಿಗೆ ಬಾಲ್ಯ ವಿವಾಹ ನಡೆದಿದೆ ಎನ್ನಲಾಗಿದೆ. ಹೀಗಾಗಿ ಈ ವಿಚಾರ ಇದೀಗ‌ ಸಾಕಷ್ಟು ಚರ್ಚೆಗೆ‌ ಗ್ರಾಸವಾಗುತ್ತಿದೆ. ಬಾಲಕಿಯು ಗರ್ಭಿಣಿಯಾಗಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸುವಂತೆ ಇದೀಗ ಕೆಲವರು ಒತ್ತಾಯಿಸುತ್ತಿದ್ದಾರೆ.

ಪೋಕ್ಸೊ ಕಾಯ್ದೆ, ಇತರ ಸೆಕ್ಷನ್​ಗಳ ಅಡಿ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಇದೀಗ ಬಾಲಕಿಯ ಪೋಷಕರು ಮತ್ತು ಯುವಕನ ಪೋಷಕನ್ನು ವಿಚಾರಣೆ ಮಾಡುತ್ತಿದ್ದಾರೆ. ಮುಸ್ಲಿಂ ಮುಖಂಡರ ಕೈವಾಡವೂ ಇದರಲ್ಲಿ ಇದೆ ಎಂಬಾ ಸಂಶಯ ವ್ಯಕ್ತವಾಗಿದ್ದು, ಇದರಿಂದ ಆ ದೃಷ್ಟಿಯಲ್ಲಿಯೂ ತನಿಖೆಗೆ ಅಶೋಕನಗರ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಪರಿಚಯವಾದ ಮಹಿಳೆ ಜತೆ ಸಲುಗೆ, ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್​ಮೇಲ್: ಲಕ್ಷಾಂತರ ರೂ. ವಂಚನೆ

ಈ ವಿಚಾರವು ಇದೀಗ ಸಾಕಷ್ಟು ವಿರೋಧಕ್ಕೆ ಕಾರಣ ವಾಗುತ್ತಿದ್ದು, ಮಕ್ಕಳ ಕಲ್ಯಾಣ ಆಯೋಗಕ್ಕೂ ದೂರು ಸಲ್ಲಿಕೆಯಾಗಿದೆ. ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ