AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ವಿಳಂಬ: ರೋಸ್‌ಮೆರ್ಟಾ ಸಂಸ್ಥೆಗೆ 5,000 ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ!

HSRP ನಂಬರ್ ಪ್ಲೇಟ್ ನೀಡಲು ಬರೋಬ್ಬರಿ ಒಂದು ವರ್ಷ ವಿಳಂಬ ಮಾಡಿ ಗ್ರಾಹಕರನ್ನು ಅಲೆದಾಡಿಸಿದ 'ರೋಸ್‌ಮೆರ್ಟಾ ಸೇಫ್ಟಿ ಸಿಸ್ಟಮ್ಸ್' ಸಂಸ್ಥೆಗೆ ಬೆಂಗಳೂರು ಗ್ರಾಹಕ ನ್ಯಾಯಾಲಯವು 5,000 ರೂಪಾಯಿ ದಂಡ ವಿಧಿಸಿದೆ. ಸೇವಾ ಲೋಪ ಮತ್ತು ಮಾನಸಿಕ ಕಿರುಕುಳಕ್ಕಾಗಿ ಸಂತ್ರಸ್ತ ಗ್ರಾಹಕನಿಗೆ ಈ ಪರಿಹಾರ ಮೊತ್ತವನ್ನು ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.

ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ವಿಳಂಬ: ರೋಸ್‌ಮೆರ್ಟಾ ಸಂಸ್ಥೆಗೆ 5,000 ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ!
ಸಾಂದರ್ಭಿಕ ಚಿತ್ರImage Credit source: The Hindu
ಭಾವನಾ ಹೆಗಡೆ
|

Updated on: Aug 23, 2026 | 8:29 AM

Share

ಮುಖ್ಯಾಂಶಗಳು

  • HSRP ನಂಬರ್ ಪ್ಲೇಟ್ ನೀಡಲು ವಿಳಂಬಿಸಿದ್ದಕ್ಕೆ ಗ್ರಾಹಕ ನ್ಯಾಯಾಲಯದಿಂದ ದಂಡ.
  • ರೋಸ್‌ಮೆರ್ಟಾ ಸಂಸ್ಥೆಗೆ 5,000 ರೂಪಾಯಿ ಪರಿಹಾರ ಪಾವತಿಸುವಂತೆ ಕೋರ್ಟ್ ಆದೇಶ.
  • ಒಂದು ವರ್ಷ ಅಲೆದಾಡಿಸಿ ಮಾನಸಿಕ ಕಿರುಕುಳ ನೀಡಿದ್ದಕ್ಕೆ ಗ್ರಾಹಕನಿಗೆ ಗೆಲುವು.

ಬೆಂಗಳೂರು, ಆಗಸ್ಟ್ 23: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಹೈ ಸೆಕ್ಯುರಿಟಿ ರಜಿಸ್ಟ್ರೇಷನ್ ಪ್ಲೇಟ್ (HSRP) ನೀಡಲು ಉದ್ಧಟತನ ಮತ್ತು ನಿರ್ಲಕ್ಷ್ಯ ತೋರಿದ ‘ರೋಸ್‌ಮೆರ್ಟಾ ಸೇಫ್ಟಿ ಸಿಸ್ಟಮ್ಸ್’ ಸಂಸ್ಥೆಗೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯವು 5,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಸಂಸ್ಥೆಯು ಸುಳ್ಳು ಭರವಸೆ

ಯಲಹಂಕ ನಿವಾಸಿ ಅಮೋಘ್ ಜಿ.ಎಂ. ಎಂಬುವರು 2024ರ ಮಾರ್ಚ್ 2 ರಂದು 761 ರೂಪಾಯಿ ಪಾವತಿಸಿ ಆನ್‌ಲೈನ್‌ನಲ್ಲಿ HSRP ನಂಬರ್ ಪ್ಲೇಟ್‌ಗಾಗಿ ಆರ್ಡರ್ ಮಾಡಿದ್ದರು. ಆದರೆ, ಡೀಲರ್ ಬಳಿ ತೆರಳಿದಾಗ ಪ್ಲೇಟ್ ತಲುಪಿಲ್ಲವೆಂದು ವಾಪಸ್ ಕಳುಹಿಸಲಾಯಿತು. ಮುಂದಿನ ಕೆಲವು ತಿಂಗಳುಗಳ ಕಾಲ ಅಮೋಘ್ ಅವರು ನಿರಂತರವಾಗಿ ಗ್ರಾಹಕ ಸೇವಾ ಕೇಂದ್ರ ಮತ್ತು ಡೀಲರ್‌ಗಳನ್ನು ಸಂಪರ್ಕಿಸಿದರೂ, ಸಂಸ್ಥೆಯು ಬರಿ ಸುಳ್ಳು ಭರವಸೆಗಳನ್ನು ನೀಡುತ್ತಾ ಸಮಯ ವ್ಯರ್ಥ ಮಾಡಿತು.

ಸರ್ಕಾರ ನಿಗದಿಪಡಿಸಿದ್ದ HSRP ಅಳವಡಿಕೆಯ ಗಡುವು ಮುಗಿದರೂ ಮತ್ತು ಆರ್ಡರ್ ಮಾಡಿ 16 ತಿಂಗಳುಗಳು ಕಳೆದರೂ ಸಂಸ್ಥೆಯಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಕೊನೆಗೆ ಬೇಸತ್ತ ಗ್ರಾಹಕರು ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಬಳಿಕ, 2025ರ ಜುಲೈ 12 ರಂದು ಸಂಸ್ಥೆಯು ನಂಬರ್ ಪ್ಲೇಟ್ ತಲುಪಿಸಿತು.

ರೋಸ್‌ಮೆರ್ಟಾ ಸಂಸ್ಥೆಗೆ ದಂಡ

ಸೇವೆಯಲ್ಲಾದ ಈ ಲೋಪ ಮತ್ತು ವಿಳಂಬದ ವಿರುದ್ಧ ಅಮೋಘ್ ಅವರು ‘ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ’ಕ್ಕೆ ದೂರು ಸಲ್ಲಿಸಿದರು. ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಅನುರಾಧ ವಿ. ಹಾಗೂ ಸದಸ್ಯೆ ಸವಿತಾ ಐರಾಣಿ ಅವರಿದ್ದ ಪೀಠವು, ಗ್ರಾಹಕರನ್ನು ಅಲೆದಾಡಿಸಿ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ರೋಸ್‌ಮೆರ್ಟಾ ಸಂಸ್ಥೆಗೆ 3,000 ರೂ. ಪರಿಹಾರ ಹಾಗೂ 2,000 ರೂ. ಕೋರ್ಟ್ ವೆಚ್ಚ ಸೇರಿದಂತೆ ಒಟ್ಟು 5,000 ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ