ಬೆಂಗಳೂರು: 35 ಪೈಸೆ ಬಾಕಿಗಾಗಿ ಕಿರುಕುಳ ನೀಡಿದ ಬ್ಯಾಂಕ್, ಗ್ರಾಹಕರ ಕೋರ್ಟ್​ನಲ್ಲಿ 5 ಸಾವಿರ ಪರಿಹಾರ ಗೆದ್ದ ವ್ಯಕ್ತಿ

|

Updated on: Sep 07, 2023 | 8:33 AM

ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವಂತೆ ಮನವಿ ಮಾಡಿದರೂ ಕ್ಲೋಸ್ ಮಾಡದೆ 35 ಪೈಸೆ ಬಾಕಿಗಾಗಿ ಎರಡು ವರ್ಷ ಕಿರುಕುಳ ನೀಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಖಾಸಗಿ ಬ್ಯಾಂಕ್ ವಿರುದ್ಧ ವ್ಯಕ್ತಿಯೊಬ್ಬರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಗ್ರಾಹಕನಿಗೆ 5 ಸಾವಿರ ಪರಿಹಾರ ನೀಡುವಂತೆ ಬ್ಯಾಂಕ್​ಗೆ ಆದೇಶಿಸಿದೆ.

ಬೆಂಗಳೂರು: 35 ಪೈಸೆ ಬಾಕಿಗಾಗಿ ಕಿರುಕುಳ ನೀಡಿದ ಬ್ಯಾಂಕ್, ಗ್ರಾಹಕರ ಕೋರ್ಟ್​ನಲ್ಲಿ 5 ಸಾವಿರ ಪರಿಹಾರ ಗೆದ್ದ ವ್ಯಕ್ತಿ
35 ಪೈಸೆ ಬಾಕಿಗಾಗಿ ಕಿರುಕುಳ ನೀಡಿದ ಬ್ಯಾಂಕ್​​ ವಿರುದ್ಧ ದೂರು ನೀಡಿದ ವ್ಯಕ್ತಿಗೆ ಗ್ರಾಹಕರ ನ್ಯಾಯಾಲಯದಲ್ಲಿ ಗೆಲುವು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು, ಸೆ.7: ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವಂತೆ ಮನವಿ ಮಾಡಿದರೂ ಕ್ಲೋಸ್ ಮಾಡದೆ 35 ಪೈಸೆ ಬಾಕಿಗಾಗಿ ಎರಡು ವರ್ಷ ಕಿರುಕುಳ ನೀಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಖಾಸಗಿ ಬ್ಯಾಂಕ್ ವಿರುದ್ಧ ವ್ಯಕ್ತಿಯೊಬ್ಬರು ಬೆಂಗಳೂರಿನ (Bengaluru) ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಗ್ರಾಹಕನಿಗೆ 5 ಸಾವಿರ ಪರಿಹಾರ ನೀಡುವಂತೆ ಬ್ಯಾಂಕ್​ಗೆ ಆದೇಶಿಸಿದೆ.

ರಮೇಶ್ ಕುಮಾರ್ ಪಿವಿ (68) ಎಂಬುವವರು ಹಲವು ವರ್ಷಗಳಿಂದ ಬಳಸುತ್ತಿದ್ದ ತಮ್ಮ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡಲು ನಿರ್ಧರಿಸಿದ್ದರು. ಎಲ್ಲಾ ಬಿಲ್‍ಗಳನ್ನು ಸರಿಯಾದ ಸಮಯಕ್ಕೆ ಕಟ್ಟಿದ್ದ ರಮೇಶ್ ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವಂತೆ 2019 ರ ನವೆಂಬರ್ 20 ರಂದು ಬ್ಯಾಂಕ್​ಗೆ ಮನವಿ ಮಾಡಿದರು.

ಆದರೆ, ಬ್ಯಾಂಕ್ ಸಿಬ್ಬಂದಿ ಕ್ಲೋಸ್ ಮಾಡದೇ ಕಲೆಕ್ಷನ್ ಏಜೆಂಟ್‍ಗಳ ಮೂಲಕ ದೂರವಾಣಿ ಕರೆ ಮಾಡಿ ಎರಡು ವರ್ಷಗಳ ಕಾಲ ಕಿರುಕುಳು ನೀಡಿದ್ದಾರೆ. ಕಾರ್ಡ್‍ಗೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಹೊರತುಪಡಿಸಿ 35 ಪೈಸೆಯ ಕ್ರೆಡಿಟ್ ಬ್ಯಾಲೆನ್ಸ್ ಬಾಕಿ ಉಳಿದಿದೆ ಎಂದು ರಮೇಶ್ ಅವರಿಗೆ ಬ್ಯಾಂಕ್ ಸಿಬ್ಬಂದಿ 2021ರ ಸೆಪ್ಟೆಂಬರ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್ಸ್‍ಗೆ ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ

ಬ್ಯಾಂಕ್ ಸಿಬ್ಬಂದಿ ಮಾಹಿತಿ ಮೇರೆಗೆ ರಮೇಶ್ ಅವರು ಸೆ.17 ರಂದು 595 ರೂಪಾಯಿಗಳನ್ನು ಪಾವತಿಸಿ ಕಾರ್ಡ್ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಬ್ಯಾಂಕ್ ಸಿಬ್ಬಂದಿ ಇನ್ನೂ 6,000 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇದರಿಂದ ಮನನೊಂದ ರಮೇಶ್, ಬ್ಯಾಂಕ್​ಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ಬೇಗೂರು ಹೋಬಳಿಯ ಬೊಮ್ಮನಹಳ್ಳಿ ಶಾಖೆಯಲ್ಲಿರುವ ಬ್ಯಾಂಕ್ ಮತ್ತು ಅದರ ಕ್ರೆಡಿಟ್ ಕಾರ್ಡ್ ವಿಭಾಗದ ಪ್ರಭಾರಿ ಅಧಿಕಾರಿ ವಿರುದ್ಧ 2022ರ ಏಪ್ರಿಲ್‍ನಲ್ಲಿ ಶಾಂತಿನಗರದಲ್ಲಿರುವ ಬೆಂಗಳೂರು 3ನೇ ಹೆಚ್ಚುವರಿ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಗ್ರಾಹಕರ ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಾಗ, ರಮೇಶ್ ಪರ ವಕೀಲರು ವಾದ ಮಂಡಿಸದರೆ, ಬ್ಯಾಂಕ್ ಪರ ವಕೀಲರು, ವಾರ್ಷಿಕ ಶುಲ್ಕದೊಂದಿಗೆ ಗ್ರಾಹಕನ ಕ್ರೆಡಿಟ್ ಕಾರ್ಡ್​ನಲ್ಲಿ 35 ಪೈಸೆ ಬಾಕಿ ಉಳಿದಿದೆ ಎಂದು ಒಪ್ಪಿಕೊಂಡಿದ್ದಾರೆ. ವಾದ ಪ್ರತಿವಾದ ಆಲಿಸಿದ ಗ್ರಾಹಕರ ಕೋರ್ಟ್, ರಮೇಶ್ ಅವರಿಗೆ ಕಿರುಕುಳ ನೀಡಿದ್ದಕ್ಕೆ ಅವರಿಗೆ 5 ಸಾವಿರ ಪರಿಹಾರ ನೀಡುವಂತೆ ಬ್ಯಾಂಕ್​ಗೆ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ