ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿ ಮೇಲಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ: ತನಿಖೆ ವೇಳೆ ಹೊಸ ಅಂಶ ಬಯಲು

| Updated By: ಆಯೇಷಾ ಬಾನು

Updated on: Nov 09, 2022 | 10:19 AM

ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿ ಮೇಲಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಕೇಸ್​ ಸಂಬಂಧ ಪೊಲೀಸರು ವಿದ್ಯಾರ್ಥಿಯ ಕ್ಲಾಸ್ ಟೀಚರ್, ಅಪಾರ್ಟ್ಮೆಂಟ್ ನ ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ.

ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿ ಮೇಲಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ: ತನಿಖೆ ವೇಳೆ ಹೊಸ ಅಂಶ ಬಯಲು
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಮೋಹಿನ್‌
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ನ.8) ಭೀಕರ, ಎದೆ ಜಲ್ ಅನ್ನಿಸುವ ಘಟನೆಯೊಂದು ನಡೆದಿದೆ. ಬೆಂಗಳೂರಿನ ನಾಗವಾರ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿ ಮೇಲಿಂದ ಹಾರಿ ವಿದ್ಯಾರ್ಥಿ ಮೋಹಿನ್‌ ಪ್ರಾಣಬಿಟ್ಟಿದ್ದ. ಘಟನೆಯ ವಿಡಿಯೋ ನೋಡಿದ ಜನ ಬೆಚ್ಚಿಬಿದ್ದಿದ್ದರು. ಸದ್ಯ ಈಗ ಈ ಪ್ರಕರಣ ಸಂಬಂಧ ಪೊಲೀಸರು ವಿದ್ಯಾರ್ಥಿಯ ಕ್ಲಾಸ್ ಟೀಚರ್, ಅಪಾರ್ಟ್ಮೆಂಟ್ ನ ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ.

ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಚಾರಣೆ ವೇಳೆ ಕೆಲ ಮಾಹಿತಿ ಬಹಿರಂಗವಾಗಿದೆ. ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮೋಹಿನ್‌ ಅಪಾರ್ಟ್‌ಮೆಂಟ್‌ನ 10ನೇ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಖಾಸಗಿ ಶಾಲೆಯ ಸಿಬ್ಬಂದಿ ಮೋಹಿನ್​ನನ್ನ ಬೈದಿದ್ದರು. ಹೀಗಾಗಿ ಇದೇ ಕಾರಣಕ್ಕೆ ಮೋಹಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಸ್ಥಳೀಯರು ಆರೋಪಿಸಿದ್ದರು. ಆದ್ರೆ ತನಿಖೆ ನಡೆಸಿದ ಪೊಲೀಸರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಶಿಕ್ಷಕಿ ವಿದ್ಯಾರ್ಥಿಯನ್ನ ಶಾಲೆಯಿಂದ ಹೊರಗೆ ಕಳುಹಿಸಿರಲಿಲ್ಲ. ಕೊಠಡಿಯ ಮುಂಭಾಗ ನಿಲ್ಲಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಕೊಠಡಿಯ ಹೊರಗೆ ಬಂದು ನೋಡಿದಾಗ ವಿದ್ಯಾರ್ಥಿ ಇರಲಿಲ್ಲ. ಆಗ ಶಾಲೆಯ ಶಿಕ್ಷಕರು ಇಡೀ ಶಾಲೆಯಲ್ಲಿ ಹುಡುಕಾಡಿದ್ದಾರೆ. ವಿದ್ಯಾರ್ಥಿ ಕಾಣದಿದ್ದಾಗ ತಕ್ಷಣವೇ ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಇದನ್ನೂ ಓದಿ: ಬಂಗಾರಪೇಟೆ: ನೇಣುಬಿಗಿದುಕೊಂಡು ನವ ವಿವಾಹಿತೆ ಆತ್ಮಹತ್ಯೆಗೆ ಶರಣು

ಇನ್ನು ಮೃತ ವಿದ್ಯಾರ್ಥಿ ಮೋಹಿನ್‌, ಇಂಗ್ಲಿಷ್ ಕ್ಲಾಸ್ ಟೆಸ್ಟ್ ವೇಳೆ ನಕಲು ಮಾಡುತ್ತಿದ್ದ. ಅಪಾರ್ಟ್ಮೆಂಟ್ ಗೆ ಹೋಗುವಾಗ ಅದೇ ಅಪಾರ್ಟ್ಮೆಂಟ್ ವಿದ್ಯಾರ್ಥಿಯ ಜೊತೆಗೆ ಒಳ ಹೋಗಿದ್ದ. ಆದ್ರೆ ಆ ಅಪಾರ್ಟ್ಮೆಂಟ್​ನ ವಿದ್ಯಾರ್ಥಿಗೂ ಮೋಹಿನ್ ಪರಿಚಯವಿರಲಿಲ್ಲ. ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಈತ ಅಪಾರ್ಟ್ಮೆಂಟ್ ಗೆ ಹೋಗಿದ್ದರಿಂದ ಸೆಕ್ಯೂರಿಟಿ ಗೂ ಡೌಟ್ ಬರಲಿಲ್ಲ. ಮೋಹಿನ್ ಸಮವಸ್ತ್ರ ಧರಿಸಿದ್ದರಿಂದ ಸೆಕ್ಯೂರಿಟಿಗೆ ಕನ್ಫೂಸ್ ಆಗಿತ್ತೆಂದು ಸೆಕ್ಯೂರಿಟಿ ತನಿಖೆ ವೇಳೆ ಮಾಹಿತಿ ನೀಡಿದ್ದಾರೆ.

ಇಂದು ವಿದ್ಯಾರ್ಥಿಯ ಮೃತದೇಹ ಮರಣೋತ್ತರ ಪರೀಕ್ಷೆ

ಇಂದು ಅಂಬೇಡ್ಕರ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಯ ಮೃತದೇಹ ಮರಣೋತ್ತರ ಪರೀಕ್ಷೆ ನಡೆಯಲಿದ್ದು ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತೆ. ವಿದ್ಯಾರ್ಥಿ ಮೋಹಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 306ರ(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರು ನೀಡಿರುವ ದೂರಿನ್ವಯ ಸಂಪಿಗೆಹಳ್ಳಿ ಪೊಲೀಸರು ಟೀಚರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಥಮಿಕವಾಗಿ ಶಾಲೆಯ ಶಿಕ್ಷಕರನ್ನ ವಿಚಾರಣೆ ನಡೆಸಲಾಗಿದೆ.

Published On - 10:04 am, Wed, 9 November 22