Bengaluru Crime: ರ‍್ಯಾಶ್‌ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ; 9 ಜನರ ವಿರುದ್ಧ ಎಫ್​​ಐಆರ್

ರ‍್ಯಾಶ್‌ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಆರೋಪಿ ಮತ್ತು ಗಾಯಾಳು ವೆಂಕಟೇಶ್ ಒಂದೇ ಕುಟುಂಬದವರು.

Bengaluru Crime: ರ‍್ಯಾಶ್‌ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ; 9 ಜನರ ವಿರುದ್ಧ ಎಫ್​​ಐಆರ್
ಹಲ್ಲೆಗೆ ಒಳಗಾದ ವೆಂಕಟೇಶ್

Updated on: Mar 15, 2023 | 10:27 AM

ಬೆಂಗಳೂರು: ರ‍್ಯಾಶ್‌ ಡ್ರೈವಿಂಗ್‌ ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ವೆಂಕಟೇಶ್ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಗೋಪಾಲಸ್ವಾಮಿ ಸೇರಿ 9 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಸ್ನೇಹಿತನ‌ ಮನೆಗೆ ಕಾರ್ಯಕ್ರಮಕ್ಕೆಂದು ವೆಂಕಟೇಶ್ ಹೊಸಕೋಟೆಗೆ ಹೋಗಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಗೋಪಾಲಸ್ವಾಮಿ ರ‍್ಯಾಶ್‌ ಡ್ರೈವಿಂಗ್‌ ಮಾಡಿದ್ದ. ಈ ವೇಳೆ ಇದನ್ನ ಪ್ರಶ್ನಿಸಿದಕ್ಕೆ ಕೊಡಿಗೇಹಳ್ಳಿಗೆ ಬಾ ನಿನ್ನನ್ನ ನೋಡಿಕೊಳ್ತೀನಿ ಎಂದಿ ಬೆದರಿಕೆ ಹಾಕಿದ್ದ. ನಿನ್ನೆ ಸಂಜೆ ವೆಂಕಟೇಶ್ ಕೊಡಿಗೇಹಳ್ಳಿ ಮನೆಯ ಬಳಿ ಬಂದಾಗ ಗೋಪಾಲಸ್ವಾಮಿ ಹಾಗು ಆತನ ಮಕ್ಕಳು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಗಳ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ವೆಂಕಟೇಶ್ ಕುತ್ತಿಗೆಗೆ ಗೋಪಾಲಸ್ವಾಮಿ ಚಾಕು ಇರಿದಿದ್ದಾನೆ. ಪ್ರಕರಣ ಸಂಬಂಧ ಗೋಪಾಲಸ್ವಾಮಿ, ಮಕ್ಕಳಾದ ಧನುಷ್, ಚಂದ್ರಶೇಖರ್, ಶ್ರೀನಿವಾಸ್ ಸೇರಿ‌ 9 ಜನರ ವಿರುದ್ಧ ದೂರು ದಾಖಲಾಗಿದೆ. ಇನ್ನು ಆರೋಪಿ ಮತ್ತು ಗಾಯಾಳು ವೆಂಕಟೇಶ್ ಒಂದೇ ಕುಟುಂಬದವರು. ಈ ಹಿಂದೆ ಹಲವಾರು ಬಾರಿ ಗಲಾಟೆ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ: Mumbai Crime: ಮನೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ಕೊಳೆತ ಸ್ಥಿತಿಯಲ್ಲಿತ್ತು ಮಹಿಳೆಯ ಶವ, ಪುತ್ರಿಯ ವಿಚಾರಣೆ

ಮಹಿಳೆಗೆ ಚಾಕು ಇರಿದ ಆರೋಪಿ ಅರೆಸ್ಟ್

ಬೆಂಗಳೂರು: ಮಹಿಳೆಗೆ ಚಾಕು ಇರಿದಿದ್ದ ಆರೋಪಿ ರಾಜಣ್ಣನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಜಣ್ಣ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಆಕೆ ಈ ಅಕ್ರಮ ಸಂಬಂಧವನ್ನು ನಿಲ್ಲಿಸಬೇಕು ಎಂದಿದಕ್ಕೆ ಕೋಪಗೊಂಡು ಮಹಿಳೆಗೆ ಚಾಕು ಇರಿದು ಕೊಲೆ ಮಾಡಿದ್ದ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:27 am, Wed, 15 March 23