AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMTC MD15: ಬೆಂಗಳೂರಲ್ಲಿ ಸಂಚರಿಸುತ್ತಿವೆ ಎಮ್​ಡಿ 15 ಹೆಸರಿನ ಬಿಎಂಟಿಸಿಯ 20 ಬಸ್​ಗಳು

ರಾಜಧಾನಿಯಲ್ಲಿ ಎಮ್​ಡಿ 15 ಹೆಸರಿನ ಬಿಎಂಟಿಸಿಯ 20 ಬಸ್​ಗಳು ಪ್ರಾಯೋಗಿಕ ಸಂಚಾರ ನಡೆಸಿವೆ. ಶೇ 15 ಪ್ರತಿಶತದಷ್ಟು ಮೆಥನಾಲ್​ನ್ನು ಡೀಸೆಲ್​ನಲ್ಲಿ ಮಿಶ್ರಣ ಮಾಡಲಾಗಿರುವ ಬಸ್​ಗಳಿಗೆ ಇತ್ತೀಚಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಚಾಲನೆ ನೀಡಿದ್ದರು.

BMTC MD15: ಬೆಂಗಳೂರಲ್ಲಿ ಸಂಚರಿಸುತ್ತಿವೆ ಎಮ್​ಡಿ 15 ಹೆಸರಿನ ಬಿಎಂಟಿಸಿಯ 20 ಬಸ್​ಗಳು
ಎಮ್​ಡಿ 15 ಬಸ್​​
Follow us
ವಿವೇಕ ಬಿರಾದಾರ
|

Updated on:Mar 15, 2023 | 11:25 AM

ಬೆಂಗಳೂರು: ರಾಜಧಾನಿಯಲ್ಲಿ ಎಮ್​ಡಿ 15 ಹೆಸರಿನ ಬಿಎಂಟಿಸಿಯ (BMTC) 20 ಬಸ್​ಗಳು ಪ್ರಾಯೋಗಿಕ ಸಂಚಾರ ನಡೆಸಿವೆ. ಶೇ 15 ಪ್ರತಿಶತದಷ್ಟು ಮೆಥನಾಲ್​ನ್ನು ಡೀಸೆಲ್​ನಲ್ಲಿ ಮಿಶ್ರಣ (Methanol-Diesel MD 15) ಮಾಡಲಾಗಿರುವ ಬಸ್​ಗಳಿಗೆ ಇತ್ತೀಚಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ (Nitin Gadkari) ಚಾಲನೆ ನೀಡಿದ್ದರು. ನಗರದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಮೂರು ತಿಂಗಳ ಅವಧಿಗೆ ಬಿಎಂಟಿಸಿಯ ಕೆಲವು ಬಸ್‌ಗಳನ್ನು ಅಶೋಕ್ ಲೇಲ್ಯಾಂಡ್‌ಗೆ ನೀಡಲಾಗಿದೆ ಎಂದು ಹೇಳಿದರು.

ಮೆಥನಾಲ್ ಬಳಕೆಗೆ ಉತ್ತೇಜನ ನೀಡುವುದರಿಂದ 16 ಲಕ್ಷ ಕೋಟಿ ರೂಪಾಯಿ ವೆಚ್ಚದ ಇಂಧನ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಅಲ್ಲದೆ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಪ್ರತಿ ಲೀಟರ್‌ ಮೆಥೆನಾಲ್‌ಗೆ 25 ರಿಂದ 26 ರೂ., ಡೀಸೆಲ್‌ಗೆ 110 ರೂ.ಗಳಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ತಿಳಿದರು.

ಇದನ್ನೂ ಓದಿ: ಮಾ.​ 21ರಿಂದ ಸಾರಿಗೆ ನೌಕರರ ಮುಷ್ಕರ, ರಸ್ತೆಗೆ ಇಳಿಯಲ್ಲ KSRTC ಬಸ್​ಗಳು

“MD15 ಅನ್ನು ಯಾವುದೇ ಮಾರ್ಪಾಡು ಇಲ್ಲದೆ ಡೀಸೆಲ್ ವಾಹನಗಳು ಅಳವಡಿಸಿಕೊಳ್ಳಬಹುದು ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಬಳಸಬಹುದು. ಭಾರತದಲ್ಲಿ ಸದ್ಯ 34 ಕೋಟಿ ವಾಹನಗಳಿದ್ದು, ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಶೇಕಡಾ 12 ರಷ್ಟು ಇದೆ. ಇದಕ್ಕೆ ಎಲ್ಲ ರೀತಿಯಲ್ಲೂ ಮೆಥನಾಲ್ ಬಳಕೆ ಅವಶ್ಯವಾಗಿದೆ. ಕಡಿಮೆ ಗುಣಮಟ್ಟದ ಕಲ್ಲಿದ್ದಲನ್ನು ಬಳಸಿ ಮೆಥೋನಾಲ್, ಅಮೋನಿಯಂ ನೈಟ್ರೇಟ್, ಯೂರಿಯಾವನ್ನು ಉತ್ಪಾದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಂಗಾಲದ ಹೊರಸೂಸುವಿಕೆ ತಡೆಯಲು ಮೆಥನಾಲ್ ಬಳಕೆ

ಇಂಗಾಲದ ಹೊರಸೂಸುವಿಕೆಯು ದೊಡ್ಡ ಸಮಸ್ಯೆಯಾದ ಹಿನ್ನೆಲೆ ಭಾರತವು ಮೆಥನಾಲ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ಮೆಥನಾಲ್ ಎಥೆನಾಲ್ ತಂತ್ರಜ್ಞಾನವು ಸ್ಥಳೀಯವಾಗಿದ್ದು. ಇದರ ಬಳಕೆಯ ವಾಹನಗಳನ್ನು ವಿದೇಶಕ್ಕೆ ರಫ್ತು ಮಾಡಲಿದ್ದೇವೆ ಈ ಎಲ್ಲ ವಿಚಾರದಲ್ಲಿ ನೀತಿ ಆಯೋಗಗಳ ಕೊಡುಗೆ ಮತ್ತು ಸಮರ್ಪಣೆ ಅಪಾರ ಎಂದರು.

ವಿಶ್ವದಲ್ಲಿ ಅನಿಲ ಸೂಸುವಿಕೆಯಲ್ಲಿ ಭಾರತದ ಪಾಲು ಶೇ 7 ರಷ್ಟಿದೆ ಅದರಲ್ಲಿ 14 ರಷ್ಟು ಸಾರಿಗೆಯ ಪಾಲಿದೆ. ಮಾಲಿನ್ಯದ ಪರಿಣಾಮವು ತೀವ್ರವಾಗಿದೆ. ಆದರೆ ಮೆಥನಾಲ್ ಶೇ 28 ರಷ್ಟು ಕಡಿಮೆ ಮಾಲಿನ್ಯಕಾರಕವಾಗಿದೆ. ಎಂ.ಡಿ 15 ಭಾರತವನ್ನು ಹೊಸ ದಿಕ್ಕಿನೆಡೆಗೆ ಮುನ್ನೆಡಸಲಿದೆ. ಒಟ್ಟು ದೇಶದ 15 ಸಂಸ್ಥೆಗಳು ಈ ತಂತ್ರಜ್ಞಾನದ ಬಳಕೆಗೆ ಪ್ರಮುಖ ಪಾತ್ರ ವಹಿಸಿವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:10 am, Wed, 15 March 23

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್