AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ ಬದಲಾವಣೆ ಮಾಡದೇ ಹಾಲಿನ ಕೊರತೆ ನೀಗಿಸಲು ಕೆಎಂಎಫ್​ ಮಾಸ್ಟರ್ ಪ್ಲಾನ್

ಹಾಲಿನ ಕೊರತೆ ನೀಗಿಸಲು ಕೆಎಂಎಫ್​ ಪರಿಹಾರ ಹುಡುಕಿಕೊಂಡಿದ್ದು ಹಾಲಿನ ಬೆಲೆಯನ್ನು ಬದಲಾಯಿಸದೆ ಹಾಲಿನ ಪ್ರಮಾಣ ಕಡಿಮೆ ಮಾಡುತ್ತಿದೆ.

ದರ ಬದಲಾವಣೆ ಮಾಡದೇ ಹಾಲಿನ ಕೊರತೆ ನೀಗಿಸಲು ಕೆಎಂಎಫ್​ ಮಾಸ್ಟರ್ ಪ್ಲಾನ್
kmf
ಆಯೇಷಾ ಬಾನು
|

Updated on:Mar 15, 2023 | 1:03 PM

Share

ಬೆಂಗಳೂರು: ರಾಜ್ಯದಲ್ಲಿ ಏಕಾಏಕಿ ನಂದಿನಿ ಹಾಲಿನ ಕೊರತೆ ಎದುರಾಗಿದೆ. ಬೇಡಿಕೆಯಷ್ಟು ಹಾಲು ಪೂರೈಕೆಯಾಗುತ್ತಿಲ್ಲ. ಕೆಲ ದಿನಗಳ ಇಂದಷ್ಟೇ ಈ ಬಗ್ಗೆ ಬಮೂಲ್ ಪ್ರತಿಕ್ರಿಯೆ ನೀಡಿತ್ತು. ಶೇ.10ರಷ್ಟು ರೈತರು ಡೈರಿಗೆ ಹಾಲು ಹಾಕುತ್ತಿಲ್ಲ. ಬೆಂಗಳೂರಿಗೆ ನಿತ್ಯ 15 ಲಕ್ಷ ಲೀಟರ್‌ ಹಾಲಿನ ಬೇಡಿಕೆ ಇದೆ. ಆದರೆ ಕೇವಲ 13 ಲಕ್ಷ ಲೀಟರ್‌ ಹಾಲು ಮಾತ್ರ ಪೂರೈಕೆಯಾಗುತ್ತಿದೆ. ಇನ್ನೂ 2 ಲಕ್ಷ ಲೀಟರ್ ಹಾಲಿನ ಕೊರತೆ ಇದೆ. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಲಿದ್ದು, ಮೇವಿನ ಕೊರತೆ ಸೇರಿದಂತೆ ಮತ್ತಿತರ ಕಾರಣದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಹಾಲಿನ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿತ್ತು. ಸದ್ಯ ಈಗ ಈ ಹಾಲಿನ ಕೊರತೆ ನೀಗಿಸಲು ಕೆಎಂಎಫ್ ಹೊಸ ಪ್ಲಾನ್ ಮಾಡಿದೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಇತ್ತೀಚೆಗೆ ನಂದಿನಿ ಬ್ರಾಂಡ್‌ನಲ್ಲಿ ಮಾರಾಟವಾಗುವ ಪೂರ್ಣ ಕೆನೆ ಹಾಲಿನ ಬೆಲೆಯನ್ನು ಹೆಚ್ಚಿಸಿತ್ತು. 6% ಕೊಬ್ಬು ಮತ್ತು 9% ಘನವಸ್ತುಗಳು-ಕೊಬ್ಬು ಅಲ್ಲದ ಅಥವಾ SNF ಹೊಂದಿರುವ ಈ ಹಾಲು ಹಿಂದೆ ಗ್ರಾಹಕರಿಗೆ ಒಂದು ಲೀಟರ್ (1,000 ಮಿಲಿ) 50 ರೂಪಾಯಿಗೆ ಮತ್ತು ಅರ್ಧ ಲೀಟರ್ (500 ಮಿಲಿ) 24ರೂಗೆ ಮಾರಾಟವಾಗುತ್ತಿತ್ತು. ಆದ್ರೆ ಈಗ ಹಾಲಿನ ಬೆಲೆಯನ್ನು ಬದಲಾಯಿಸದೆ ಹಾಲಿನ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ. 50 ರೂಪಾಯಿ ಬೆಲೆಯ ಒಂದು ಲೀಟರ್ ಹಾಲು ಮತ್ತು 24 ರೂ ಬೆಲೆಯ ಅರ್ಧ ಲೀಟರ್ ಹಾಲನ್ನು ಕ್ರಮವಾಗಿ 900 ಮಿಲಿ ಮತ್ತು 450 ಮಿಲಿ ಪ್ಯಾಕ್‌ಗಳಿಗೆ ಇಳಿಸಲಾಗುತ್ತಿದೆ. ಈ ಮೂಲಕ ಹಾಲಿನ ಕೊರತೆ ನೀಗಿಸಲು ಹೊಸ ಪ್ಲಾನ್ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ಎದುರಾಗಲಿದೆ ಹಾಲಿನ ಕೊರತೆ; ಹಾಲಿನ ಉತ್ಪಾದನೆ ಕಡಿಮೆಯಾಗಿದೆ ಎಂದು ಎಚ್ಚರಿಕೆ ನೀಡಿದ ಬಮುಲ್

ಕಳೆದ ಕೆಲ ವರ್ಷಗಳಿಂದ ಅನೇಕ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಕಂಪನಿಗಳು ಇದೇ ರೀತಿ ಕಡಿಮೆ ಪ್ರಮಾಣದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಸಾಬೂನು, ಶಾಂಪೂಗಳು, ಬಿಸ್ಕೆಟ್‌ಗಳು ಅಥವಾ ತಂಪು ಪಾನೀಯಗಳನ್ನು ಕಡಿಮೆ ಪ್ರಮಾಣದಲ್ಲಿ ಒಂದೇ ದರವನ್ನು ವಿಧಿಸಿ ಮಾರಾಟ ಮಾಡುತ್ತಿವೆ. ಆದ್ರೆ ಈಗ ಹಾಲಿಗೂ ಈ ಯೋಜನೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಹಾಲಿನ ಕೊರತೆ ಹಿನ್ನೆಲೆ KMF ನವೆಂಬರ್ 24 ರಂದು ತನ್ನ ಎಲ್ಲಾ ರೀತಿಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿತ್ತು. KMF ಭಾರತದ ಎರಡನೇ ಅತಿದೊಡ್ಡ ಹಾಲಿನ ಡೈರಿಯಾಗಿದೆ. ಅದರ ಜಿಲ್ಲಾ ಒಕ್ಕೂಟಗಳು 2021-22 ರಲ್ಲಿ ದಿನಕ್ಕೆ ಸರಾಸರಿ 81.64 ಲಕ್ಷ ಕೆಜಿ (LKPD) ಹಾಲನ್ನು ಸಂಗ್ರಹಿಸುತ್ತವೆ. ನಂತರದ ಸ್ಥಾನದಲ್ಲಿ 271.34 LKPD ಹಾಲು ಸಂಗ್ರಹಿಸುವ ಅಮುಲ್ ಎಂದು ಕರೆಯಲ್ಪಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಎಂಎಫ್‌ನ ಸಂಗ್ರಹಣೆಯು 9-10 ಎಲ್‌ಕೆಪಿಡಿ ಕಡಿಮೆಯಾಗಿದೆ. ಹೀಗಾಗಿ ಹೋಟೆಲ್‌ಗಳು ಮತ್ತು ಇತರ ಬೃಹತ್ ಗ್ರಾಹಕರಿಗೆ ಹಾಲು ಸರಬರಾಜು ಮಾಡುವುದನ್ನು ನಿಲ್ಲಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:03 pm, Wed, 15 March 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್