ರಾಜ್ಯದಲ್ಲಿ 115 ಹೆಚ್​3ಎನ್​2 ಪ್ರಕರಣ ಪತ್ತೆ, ಬೆಂಗಳೂರು ಒಂದರಲ್ಲೇ 30 ಸೋಂಕು ದೃಢ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸದ್ದಿಲ್ಲದೆ ಏರಿಕೆಯಾಗುತ್ತಿದ್ದು, ಇದರ ನಡುವೆ ಹೆಚ್​3ಎನ್​2 ಭೀತಿ ಕೂಡ ಹೆಚ್ಚಿದೆ. ರಾಜ್ಯದಲ್ಲಿ 115 ಹೆಚ್​3ಎನ್​2 ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ 115 ಹೆಚ್​3ಎನ್​2 ಪ್ರಕರಣ ಪತ್ತೆ, ಬೆಂಗಳೂರು ಒಂದರಲ್ಲೇ 30 ಸೋಂಕು ದೃಢ
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:Mar 15, 2023 | 2:19 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Covid) ಪ್ರಕರಣಗಳ ಸಂಖ್ಯೆ ಸದ್ದಿಲ್ಲದೆ ಏರಿಕೆಯಾಗುತ್ತಿದೆ. ಇದರ ನಡುವೆ ಹೆಚ್​3ಎನ್​2 (H3N2) ಭೀತಿ ಕೂಡ ಹೆಚ್ಚಿದೆ. ರಾಜ್ಯದಲ್ಲಿ ಪ್ರಸ್ತುತ ಕಳೆದ 82 ದಿನಗಳಲ್ಲಿ (ಜನವರಿ-ಮಾರ್ಚ್ 15 ರ ತನಕ) 115 ಹೆಚ್​3ಎನ್​2 ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ H3N2 ಸೋಂಕು ಪತ್ತೆಯಾಗಿದ್ದು, ರಾಜಧಾನಿಯೊಂದರಲ್ಲೇ 30 ಪ್ರಕರಣಗಳು ದಾಖಲಾಗಿವೆ.

ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಪ್ರಕರಣಗಳು

ಬೆಂಗಳೂರು ಅಥವಾ ಬಿಬಿಎಂಪಿ ವ್ಯಾಪ್ತಿ-30, ಶಿವಮೊಗ್ಗ-19, ಧಾರವಾಡ-14, ಮೈಸೂರು-09, ವಿಜಯಪುರ-08, ಬೆಳಗಾವಿ-05, ಹಾಸನ-05, ತುಮಕೂರು-03, ದಾವಣಗೆರೆ-03, ಹಾವೇರಿ-03, ದಕ್ಷಿಣ ಕನ್ನಡ-03, ಬೆಂಗಳೂರು ಗ್ರಾಮಾಂತರ-02, ಗದಗ-02, ರಾಮನಗರ-02, ಚಾಮರಾಜನಗರ-01, ಬಾಗಲಕೋಟೆ-01, ಉತ್ತರ ಕನ್ನಡ-01, ಚಿತ್ರದುರ್ಗ-01, ಚಿಕ್ಕಮಗಳೂರು- 01, ಕೊಡಗು- 01, ಮಂಡ್ಯ-01 ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೋವಿಡ್​ ಹೆಚ್ಚಳ, 500ರ ಗಡಿ ದಾಟಿದ ಸೋಂಕಿನ ಪ್ರಕರಣ, ಹೆಚ್ಚಿದ ಆತಂಕ

H3N2 ರೋಗಲಕ್ಷಣ ಮತ್ತು ಚಿಕಿತ್ಸೆ

ವೈದ್ಯರು ತಿಳಿಸಿರುವಂತೆ ಈ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, ಇದು ಸೋಂಕಿತ ಜನರೊಂದಿಗಿನ ಸಂಪರ್ಕದಿಂದ ಅತ್ಯಂತ ವೇಗವಾಗಿ ಹರಡುತ್ತದೆ. ಇದರಿಂದ ರಕ್ಷಣೆ ಪಡೆಯಲು ಕೊರೊನಾ ಮಾದರಿಯ ಕ್ರಮಗಳನ್ನೇ ಅನುಸರಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಈ ಕಾರಣಕ್ಕಾಗಿ ಕೈಗಳನ್ನು ತೊಳೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದು, ಹೆಚ್ಚು ನೀರು ಕುಡಿಯುವುದು, ಜ್ವರಕ್ಕಾಗಿ ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಳ್ಳುವುದು, ಹೀಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

H3N2 ವೈರಸ್​ ರೋಗಲಕ್ಷಣಗಳು ಸುಮಾರು 1 ವಾರದವರೆಗೆ ಇರುತ್ತದೆ. ತಜ್ಞರ ಪ್ರಕಾರ ವೈರಸ್ ಕೆಮ್ಮು, ಸೀನು ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿ ಇರುವುದರಿಂದ ಹರಡುತ್ತದೆ. ಹೀಗಾಗಿ ಜ್ವರ ಇರುವ ವ್ಯಕ್ತಿಯಿಂದ ಅಂತರ ಕಾಪಾಡಿಕೊಳ್ಳುವುದು ಸುರಕ್ಷಿತ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:44 am, Wed, 15 March 23