
ಬೆಂಗಳೂರು, ನವೆಂಬರ್ 28: ಆತನ ವಯಸ್ಸು ಇನ್ನೂ 23. ಚಿಕ್ಕ ವಯಸ್ಸಿಗೆ ಕುಡಿತಕ್ಕೆ ದಾಸನಾಗಿದ್ದಲ್ಲದೇ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇತ್ತು. ಇಂತ ಯುವಕನನ್ನ (boy) ಪೊಲೀಸರು ಅಕ್ರಮವಾಗಿ ಬಂಧಿಸಿ ಮೂರು ದಿನ ಸ್ಟೇಷನ್ನಲ್ಲಿ ಇಟ್ಟಿದ್ದರು. ಬಳಿಕ ರಿಯಾಬ್ ಸೆಂಟರ್ಗೆ ಸೇರಿಸಿದ್ದರು. ಆದರೆ ರಿಯಾಬ್ ಸೆಂಟರ್ಗೆ ಸೇರಿದ ಹತ್ತು ದಿನದೊಳಗೆ ಆತನ ಪ್ರಾಣ (death) ಹೋಗಿದೆ. ಯುವಕನ ಈ ಸಾವು ಕೇವಲ ಸಾವಲ್ಲ, ಕೊಲೆ ಅಂತ ಪೋಷಕರು ಆರೋಪ ಮಾಡಿದ್ದು, ಪೊಲೀಸರ ಮೇಲೆ ಕೊಲೆ ಕೇಸ್ ದಾಖಲಾಗಿದೆ.
ವಿವೇಕನಗರದ ಸೊಣ್ಣೆನಹಳ್ಳಿಯ ದರ್ಶನ್ ಎಂಬ 23 ವರ್ಷದ ಯುವಕನದ್ದು ಅಸಹಜ ಸಾವಲ್ಲ ಕೊಲೆ ಎಂಬ ಆರೋಪ ಪೊಲೀಸ್ ಇಲಾಖೆಯನ್ನ ದಿಗ್ರ್ಬಾಂತಿಗೊಳಿಸಿದೆ. ಇದಕ್ಕೆ ಕಾರಣ ಬೆಂಗಳೂರಿನ ಕೇಂದ್ರ ವಿಭಾಗದ ವಿವೇಕನಗರ ಪೊಲೀಸರ ವಿರುದ್ಧ ಕೊಲೆ ಕೇಸ್ ದಾಖಲಾಗಿರೋದು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ತಡೆಗೆ ದಿಟ್ಟ ನಿರ್ಧಾರ; ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ IPS ಅಧಿಕಾರಿ
ನ.12ರಂದು ದರ್ಶನ್ನನ್ನು ಅಕ್ರಮವಾಗಿ ಬಂಧಿಸಿದ್ದ ಪೊಲೀಸರು, ಆತನನ್ನ ಮೂರು ದಿನ ವಶದಲ್ಲಿಟ್ಟುಕೊಂಡು ಲಾಠಿ, ಪೈಪ್ನಿಂದ ಹಲ್ಲೆ ಮಾಡಿದ್ದರಂತೆ. ಈ ಹಲ್ಲೆಯನ್ನು ಮರೆಮಾಚಲು ರಿಯಾಬ್ ಸೆಂಟರ್ಗೆ ಸೇರಿಸಿದ್ದರು. ಆದರೆ ರಿಯಾಬ್ನವರು ಕೂಡ ಸರಿಯಾದ ಚಿಕಿತ್ಸೆ ನೀಡಿಲ್ಲ. ಹೀಗಾಗಿ 8 ದಿನದ ಬಳಿಕ ದರ್ಶನ್ ಸಾವನ್ನಪ್ಪಿದ್ದು, ಇದೊಂದು ಕೊಲೆ ಎಂದು ಆತನ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕನಗರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಪವನ್ ಸೇರಿದಂತೆ ನಾಲ್ಕು ಪೊಲೀಸರು ಮತ್ತು ಯೂನಿಟಿ ರಿಯಾಬ್ ಸೆಂಟರ್ ಮಾಲೀಕರ ವಿರುದ್ಧ ಕೊಲೆ ಮತ್ತು ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಸದ್ಯ ವಿವೇಕನಗರ ಪೊಲೀಸರ ಮೇಲೆ ದಾಖಲಾದ ಕಸ್ಟೋಡಿಯಲ್ ಡೆತ್ ಕೇಸ್ ಸಿಐಡಿಗೆ ವರ್ಗಾವಣೆ ಆಗಿದ್ದು, ತನಿಖೆ ಶುರುವಾಗಿದೆ. ಇತ್ತ ದರ್ಶನ್ ಮರಣೋತ್ತರ ಪರೀಕ್ಷೆ ಮುಗಿಸಿ ಪೋಷಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಇನ್ನು ಘಟನೆ ಬಗ್ಗೆ ಕೇಂದ್ರ ವಿಭಾಗದ ಹಿರಿಯ ಅಧಿಕಾರಿಗಳು ಕೂಡ ಮಾಹಿತಿ ಪಡೆಯುತ್ತಿದ್ದಾರೆ. ದರ್ಶನ್ ರಿಯಾಬ್ ಸೆಂಟರ್ಗೆ ಸೇರಿಸಿದ 8 ದಿನಗಳ ಬಳಿಕ ಮೃತಪಟ್ಟಿರೋದ್ರಿಂದ ಆಂತರಿಕ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ದರ್ಶನ್ ನಂಬಿ ಮದುವೆಯಾಗಿ ಒಂದು ಮಗುವಿಗೂ ಜನ್ಮ ನೀಡುರುವ ಆತನ ಪತ್ನಿ ಚಿಕ್ಕ ವಯಸ್ಸಿಗೆ ಕಣ್ಣೀರಲ್ಲೇ ಕೈತೊಳೆಯುವಂತಾಗಿದೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9, ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.