Video: ದುಡ್ಡೇ ಜೀವನವಲ್ಲ; ಕಾರ್ಪೋರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ಆಟೋ ಓಡಿಸುವ ಬೆಂಗಳೂರಿಗ
ಅಧಿಕ ಒತ್ತಡದ ಕಾರ್ಪೋರೇಟ್ ಉದ್ಯೋಗ ತೊರೆದು ಕೆಲವು ಉದ್ಯಮದತ್ತ ಮುಖ ಮಾಡುತ್ತಾರೆ. ಆದರೆ ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿ ಕಾರ್ಪೋರೇಟ್ ಉದ್ಯೋಗ ತೊರೆದು ಆಟೋ ಓಡಿಸುತ್ತಾ ಅದರಲ್ಲೇ ಖುಷಿ ಕಾಣುತ್ತಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಬೆಂಗಳೂರು, ನವೆಂಬರ್ 28: ಬೆಳಗ್ಗೆಯಿಂದ ಸಂಜೆಯವರೆಗೆ ಆಫೀಸ್ ಕೆಲಸದ ಒತ್ತಡದಿಂದ ಬೇಸತ್ತು ಈ ಕೆಲಸ ತೊರೆಯುವ ಅಂದುಕೊಳ್ತಾರೆ. ಮನಸ್ಸಲ್ಲಿ ಅಂದುಕೊಂಡ್ರು ಗಟ್ಟಿ ಧೈರ್ಯ ಯಾರು ಮಾಡಲ್ಲ.. ಆದರೆ ಬೆಂಗಳೂರಿನ (Bengaluru) ಕಾರ್ಪೋರೇಟ್ ಉದ್ಯೋಗಿ (Corporate employee) ಒತ್ತಡದ ಕೆಲಸಕ್ಕೆ ಗುಡ್ ಬೈ ಹೇಳಿದ್ದು, ಜೀವನ ನಿರ್ವಹಣೆಗಾಗಿ ಆರಿಸಿಕೊಂಡದ್ದು ಆಟೋ. ಹೊಸ ಜೀವನೋಪಾಯವನ್ನು ಕಂಡುಕೊಳ್ಳುವ ನಿರ್ಧಾರವನ್ನು ವಿವರಿಸುವ ವಿಡಿಯೋ ಸದ್ಯ ವೈರಲ್ ಆಗಿದೆ.
ರಾಕೇಶ್ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ಆಟೋ ಓಡಿಸುತ್ತಾ ತಮ್ಮ ಆಯ್ಕೆಯನ್ನು ವಿವರಿಸುವ ವಿಡಿಯೋವನ್ನು @rak.shot ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ. ನಾಳೆಗಾಗಿ ನನ್ನನ್ನು ಪ್ರೇರೇಪಿಸಿಕೊಳ್ಳುತ್ತಿದ್ದೇನೆ. ಕೆಲಸ ಬಿಡಲು ಹೊರಟಿರುವ ಯಾರಿಗಾದರೂ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಆಟೋ ಚಾಲಕ ಇನ್ನು ಮುಂದೆ ಕಾರ್ಪೊರೇಟ್ ಗುಲಾಮನಲ್ಲ ಎನ್ನುವುದರೊಂದಿಗೆ ಈ ಕ್ಲಿಪ್ ಪ್ರಾರಂಭವಾಗುತ್ತದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ನಾನು ಆಟೋ ಓಡಿಸುತ್ತಿದ್ದೇನೆ. ಹೊಸದ್ದನ್ನು ಪ್ರಾರಂಭಿಸಲು ಹೆದರುವುದಿಲ್ಲ. ಜೀವನದ ಅತ್ಯಂತ ಕಠಿಣ ಸಂದರ್ಭವಿದು ಎಂದು ಭಾವಿಸುವ ಜನರಿಗಾಗಿ ನಾನು ವೀಡಿಯೊವನ್ನು ಮಾಡುತ್ತಿದ್ದೇನೆ. ಆಟೋ ಓಡಿಸುವುದರಿಂದ ನನ್ನ ಜೀವನ ಕೊನೆಗೊಳ್ಳುವುದಿಲ್ಲ ಎಂದಿದ್ದಾರೆ.
ಹಣವು ಒಂದು ಅವಶ್ಯಕತೆ ಎಂದು ನನಗೆ ಅರ್ಥವಾಗಿದೆ. ಜೀವನದಲ್ಲಿ ಹಣದ ಹೊರತಾಗಿ ಇತರ ವಿಷಯಗಳು ಮುಖ್ಯವಾಗಿವೆ. ನಿಮ್ಮ ಜೀವನದ ಮೌಲ್ಯ ಹಾಗೂ ಉದ್ದೇಶವನ್ನು ಕಂಡುಕೊಳ್ಳಿ. ಅಡೆತಡೆಗಳು ಎದುರಾದರೆ, ಓಡಿಹೋಗುವ ಅಥವಾ ತಪ್ಪಿಸಿಕೊಳ್ಳುವ ಬದಲು ಎದುರಿಸಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳುವುದನ್ನು ನೋಡಬಹುದು.
ಇದನ್ನೂ ಓದಿ:ಬೆಂಗಳೂರಿನ ರಸ್ತೆ ಗುಂಡಿಯಿಂದ ಕೈ-ಕಾಲು ಮುರಿದುಕೊಂಡ ಬೈಕ್ ಸವಾರ, 6 ಲಕ್ಷ ರೂ. ಆಸ್ಪತ್ರೆ ಬಿಲ್
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ, ಆಟೋ ಓಡಿಸುವ ವ್ಯಕ್ತಿಯನ್ನು ನೋಡುತ್ತಿಲ್ಲ, ಅಹಂ ಇಲ್ಲದ ಸಾಮಾಜಿಕ ವ್ಯಕ್ತಿಯನ್ನು ನೋಡುತ್ತಿದ್ದೇವೆ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಆಯ್ಕೆ ನಿಮಗೆ ತೃಪ್ತಿ ಕೊಟ್ಟರೆ ಸಾಕು, ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




