ಇನ್‌ಸ್ಟಾಗ್ರಾಮ್‌ನಲ್ಲಿ ಖಾಸಗಿ ವಿಡಿಯೋ ಹಾಕಿ ಸ್ನೇಹಿತನ ಮೇಲೆ ದೂರಿದ ಜೋಡಿ
ಇನ್ಸ್ಟಾಗ್ರಾಮ್ ಖ್ಯಾತಿಯ ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ಅವರ ಖಾಸಗಿ ವಿಡಿಯೋ ಸೋರಿಕೆಯಾಗಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಜೋಡಿಗಳು ವಿಡಿಯೋವನ್ನು ಸ್ನೇಹಿತನೊಬ್ಬ ಬ್ಲಾಕ್‌ಮೇಲ್ ಮಾಡಲು ದುರುಪಯೋಗಪಡಿಸಿಕೊಂಡಿದ್ದಾನೆಂದು ಆರೋಪಿಸಿ ಸೈಬರ್ ಅಪರಾಧ ಘಟಕಕ್ಕೆ ದೂರು ನೀಡಿದ್ದಾರೆ. ಇದೀಗ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದ ಸೋಗಿನಲ್ಲಿ, ಜೋಡಿಗಳಿಬ್ಬರ ದೈಹಿಕ ಸಂಪರ್ಕದ ವಿಡಿಯೋ ಇನ್ಸ್ಟಾಗ್ರಾಮ್ (Instagram) ನಲ್ಲಿ ಸೋರಿಕೆಯಾಗಿದೆ. ಇದೀಗ ಈ ಜೋಡಿಗಳು ಪೇಚಿಗೆ ಸಿಲುಕಿಕೊಂಡಿದ್ದಾರೆ. ಸೋಫಿಕ್ ಎಸ್‌ಕೆ ಮತ್ತು ಡಸ್ತು ಸೋನಾಲಿ ಎಂಬ ಇನ್ಸ್ಟಾಗ್ರಾಮ್ ಕ್ರಿಯೆಟರ್ ಇದೀಗ ವಿವಾದಕ್ಕೆ ಸಿಲುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಈ ವಿಡಿಯೋವನ್ನು ಅವರೇ ಹಂಚಿಕೊಂಡು, ಸ್ನೇಹಿತನ ಮೇಲೆ ದೂರಿದ್ದಾರೆ ಎಂದು ಹೇಳಲಾಗಿದೆ. ಇನ್ಸ್ಟಾಗ್ರಾಮ್ ಕಂಟೆಂಟ್ ಕ್ರಿಯೆಟರ್ಗಳಾಗಿರುವ ಬಂಗಾಳಿಯ ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ಸುಮಾರು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇದರಲ್ಲಿ ಸೋಫಿಕ್ ಎಸ್‌ಕೆ 5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ದುಸ್ತು ಸೋನಾಲಿ ಜತೆ ಸೇರಿ ಹಲವು ವೈರಲ್ ಕಂಟೆಂಟ್ಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಬೇರೆ ಬೇರೆ ವೇದಿಕೆಯಲ್ಲೂ ಇವರು ಕೆಲವೊಂದು ಟ್ರೆಂಡ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ದುಸ್ತು ಸೋನಾಲಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ 312,000 ಅನುಯಾಯಿಗಳನ್ನು ಹೊಂದಿದ್ದು, ಇಲ್ಲಿಯವರೆಗೆ ಇನ್ಸ್ಟಾದಲ್ಲಿ 130 ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ದುಸ್ತು ಸೋನಾಲಿ ಹಂಚಿಕೊಳ್ಳುವ ಎಲ್ಲ ವಿಡಿಯೋದಲ್ಲೂ ಸೋಫಿಕ್ ಎಸ್‌ಕೆ ಕಾಣಿಸಿಕೊಳ್ಳುತ್ತಾರೆ. ಇನ್ನು ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ಅವರ ಖಾಸಗಿ ವಿಡಿಯೋವೊಂದನ್ನು ಉದ್ದೇಶಪೂರಕವಾಗಿ ಅವರೇ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆದ್ಮೇಲೆ, ತಮ್ಮ ಸ್ನೇಹಿತನ ಮೇಲೆ ದೂರಿದ್ದಾರೆ.
ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ತಮ್ಮ ಖಾಸಗಿ ವಿಡಿಯೋವನ್ನು ವೈರಲ್ ಮಾಡಿದ ಸ್ನೇಹಿತನ ಮೇಲೆ ಸೈಬರ್ ಅಪರಾಧ ಘಟಕ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ. ಆತನ ಸಹೋದರಿ ಮತ್ತು ಆಕೆಯ ಪತಿ ಸೇರಿದಂತೆ ಆತನ ಕುಟುಂಬದ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿಯೂ ಅವರು ಹೇಳಿದ್ದಾರೆ. ಇದಲ್ಲದೆ, ಆ ವೀಡಿಯೊ ತನ್ನ ಜೀವನವನ್ನು ಹಾಳುಮಾಡಿದೆ. ಹೊರಗಡೆ ಮುಖ ತೋರಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಯಿಂದ ಕೈ-ಕಾಲು ಮುರಿದುಕೊಂಡ ಬೈಕ್ ಸವಾರ, 6 ಲಕ್ಷ ರೂ. ಆಸ್ಪತ್ರೆ ಬಿಲ್
ಸೋಶಿಯಲ್ ಮೀಡಿಯಾದಲ್ಲಿ ಸೋಫಿಕ್ ಎಸ್‌ಕೆ ಹೀಗೆ ಹೇಳಿದ್ದಾರೆ. “ಈ ವಿಡಿಯೋ ನನ್ನ ಬಳಿಯೂ ಇರಲಿಲ್ಲ. ನನ್ನ ಗೆಳತಿ ದುಸ್ತು ಸೋನಾಲಿ ಬಳಿ ಇತ್ತು. ನಮ್ಮ ಫೋನ್ನ ಪಾಸ್‌ವರ್ಡ್‌ಗಳನ್ನು ತಿಳಿದಿದ್ದ ಸ್ನೇಹಿತರೊಬ್ಬರು ಇದನ್ನು ಮಾಡಿದ್ದಾರೆ. ಅವರು ನಂಬಿಕೆ ದ್ರೋಹ ಮಾಡಿದ್ದಾರೆ. ಫೋನ್ನಿಂದ ವಿಡಿಯೋ ತೆಗೆದು ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿದ್ದಾರೆ. ನಮ್ಮ ಮೇಲಿನ ಕೋಪಕ್ಕೆ ಅವರು ಹೀಗೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Fri, 28 November 25




