30 ವರ್ಷದ ಹಿಂದೆ ನುಂಗಿದ್ದ ಲೈಟರ್ನ್ನು ಕಾಂಡೋಮ್ನಿಂದ ಹೊರತೆಗೆದ ವೈದ್ಯರು: ಅಚ್ಚರಿ ಅನ್ನಿಸಿದರೂ ಸತ್ಯ!
ಚೀನಾದಲ್ಲಿ ವ್ಯಕ್ತಿಯೊಬ್ಬರು 30 ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ನುಂಗಿದ್ದ ಸಿಗರೇಟ್ ಲೈಟರ್ ಅನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಇತ್ತೀಚೆಗೆ ಈ ವ್ಯಕ್ತಿ ಹೊಟ್ಟೆನೋವಿನಿಂದ ಬಳಲುತ್ತಿದ್ದಾಗ ವೈದ್ಯರು ಗ್ಯಾಸ್ಟ್ರೋಸ್ಕೋಪಿ ಮೂಲಕ ಲೈಟರ್ ಪತ್ತೆ ಹಚ್ಚಿದರು. ಫೋರ್ಸ್‌ಪ್ಸ್ ಬದಲಿಗೆ ಕಾಂಡೋಮ್ ಬಳಸಿ ಲೈಟರ್ ಹೊರತೆಗೆದ ವೈದ್ಯರ ಈ ಅಪೂರ್ವ ಸಾಧನೆ ವೈದ್ಯಕೀಯ ಇತಿಹಾಸದಲ್ಲಿ ಮೊದಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಚೀನಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. 30 ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ಸಿಗರೇಟ್ ಲೈಟರ್ (swallowed lighter) ನುಂಗಿದ್ದರು. ಇದೀಗ ವೈದ್ಯರು ಕಾಂಡೋಮ್ ಬಳಸಿ ಹೊಟ್ಟೆಯಿಂದ ಸಿಗರೇಟ್ ಲೈಟರ್ನ್ನು ಹೊರತೆಗೆದಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದೀಗ ಈ ವ್ಯಕ್ತಿ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ವ್ಯಕ್ತಿಯನ್ನು ಡೆಂಗ್ ಎಂದು ಗುರುತಿಸಲಾಗಿದೆ. ವೈದ್ಯರ ಈ ಸಾಧನೆ ವೈದ್ಯಕೀಯ ಇತಿಹಾಸದಲ್ಲಿ ಮೊದಲು ಎಂದು ಹೇಳಲಾಗಿದೆ. ಕಾಂಡೋಮ್ ಬಳಸಿ ಹೊಟ್ಟೆಯಿಂದ ಸಿಗರೇಟ್ ಲೈಟರ್ ತೆಗೆದಿರುವುದು ಎಲ್ಲ ಕಡೆ ಪ್ರಶಂಸೆ ಕಾರಣವಾಗಿದೆ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚಿಸಿದ್ದಾರೆ.
ಮೂರು ದಶಕಗಳ ಹಿಂದೆ ಡೆಂಗ್, ಲೈಟರ್ ನುಂಗಿದ್ದು, ಇದರಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ. ಆದರೆ ಆಗ್ಗಾಗೆ ಸಣ್ಣದಾಗಿ ಹೊಟ್ಟೆ ನೋವು ಬರುತ್ತಿತ್ತು. ತಕ್ಷಣ ಕಡಿಮೆ ಆಗುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಹೊಟ್ಟೆ ಉಬ್ಬರ ಮತ್ತು ನೋವಿನಿಂದ ನರಳುತ್ತಿದ್ದರು. ಈ ಕಾರಣಕ್ಕೆ ವೈದ್ಯರ ಬಳಿ ಹೋಗಿದ್ದಾರೆ . ವೈದ್ಯರು ಗ್ಯಾಸ್ಟ್ರೋಸ್ಕೋಪಿ ಮಾಡುವಾಗ, ಅವರ ಹೊಟ್ಟೆಯ ಆಳದಲ್ಲಿ ಕಪ್ಪು ವಸ್ತು ಪತ್ತೆಯಾಗಿದೆ. ವೈದ್ಯರು ಹೇಳಿರುವ ಪ್ರಕಾರ, ಡೆಂಗ್ ಅವರು 1991-92ರಲ್ಲಿ ಮದ್ಯಪಾನ ಮಾಡುವ ವೇಳೆ ಸ್ನೇಹಿತನೊಂದಿಗೆ ಬೆಟ್ಟಿಂಗ್ ಮಾಡಿಕೊಂಡು ಲೈಟರ್ ನುಂಗಿದ್ದಾರೆ. ಈ ಬಗ್ಗೆ ವೈದ್ಯರು ಡೆಂಗ್ ಅವರ ಪತ್ನಿ ಹಾಗೂ ಮಗನಿಗೆ ಹೇಳಿದಾಗ ಅವರು ಅಚ್ಚರಿಪಟ್ಟಿದ್ದಾರೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಖಾಸಗಿ ವಿಡಿಯೋ ಹಾಕಿ ಸ್ನೇಹಿತನ ಮೇಲೆ ದೂರಿದ ಜೋಡಿ
ಇನ್ನು ವೈದ್ಯರು ಫೋರ್ಸ್‌ಪ್ಸ್ ಬಳಸಿ ಲೈಟರ್ನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ವಸ್ತುವಿನ ಹೊರ ಮೇಲ್ಮೈ ತುಂಬಾ ಸೂಕ್ಷ್ಮವಾಗಿದ್ದರಿಂದ, ಅವರು ಕಾಂಡೋಮ್ ಅನ್ನು ಬಳಸಿದ್ದಾರೆ. ಫೋರ್ಸ್‌ಪ್ಸ್ ಬಳಸಿ ಕಾಂಡೋಮ್ನ್ನು ಬಾಯಿ ಮೂಲಕ ನಿಧಾನವಾಗಿ ಡೆಂಗ್ ಅವರ ಹೊಟ್ಟೆಯೊಳಗೆ ಹಾಕಿ, ನಿಧಾನವಾಗಿ ಲೈಟರ್ನ್ನು ಹೊರೆತೆಗೆದಿದ್ದಾರೆ. ಇನ್ನು ಈ ಕಾರ್ಯಕ್ಕಾಗಿ ವೈದ್ಯರು 20 ನಿಮಿಷಗಳನ್ನು ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಲೈಟರ್‌ನ ಉದ್ದ ಸುಮಾರು 7 ಸೆಂಟಿಮೀಟರ್‌ಗಳಷ್ಟಿತ್ತು ಮತ್ತು ಇದು ತುಕ್ಕು ಹಿಡಿದಂತೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




