ರಾಜಸ್ಥಾನದ ಗೋಲ್ಡ್ ಮ್ಯಾನ್‌ಗೆ ಬೆದರಿಕೆ ಹಾಕಿದ ರೋಹಿತ್ ಗೋದಾರ ಗ್ಯಾಂಗ್; 5 ಕೋಟಿ ರೂಗೆ ಡಿಮ್ಯಾಂಡ್
ರಾಜಸ್ಥಾನದ ಚಿತ್ತೋರ್‌ಗಢದಲ್ಲಿ 'ಬಪ್ಪಿ ಲಹರಿ' ಹಾಗೂ 'ಗೋಲ್ಡ್‌ಮ್ಯಾನ್' ಪ್ರಸಿದ್ಧರಾಗಿರುವ ಹಣ್ಣಿನ ವ್ಯಾಪಾರಿ ಕನ್ಹಯ್ಯಾ ಲಾಲ್ ಖಾಟಿಕ್‌ಗೆ ದರೋಡೆಕೋರರು ಬೆದರಿಕೆ ಹಾಕಿದ್ದಾರೆ. ದರೋಡೆಕೋರ ರೋಹಿತ್ ಗೋದಾರ ಗ್ಯಾಂಗ್‌ನೊಂದಿಗೆ ಸಂಬಂಧ ಇರುವುದಾಗಿ ಹೇಳಿಕೊಂಡು 5 ಕೋಟಿ ರೂ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ರಾಜಸ್ಥಾನ, ನವೆಂಬರ್ 28: ರಾಜಸ್ಥಾನದ (Rajastan) ‘ಗೋಲ್ಡ್‌ಮ್ಯಾನ್’ ಎಂದು ಚಿರಪರಿಚಿತರಾಗಿರುವ ಉದ್ಯಮಿ ಕನ್ಹಯ್ಯಾ ಲಾಲ್ ಖಾಟಿಕ್‌ಗೆ (Kanhaiyalal Khatik) ಬೆದರಿಕೆಗಳು ಕರೆಗಳು ಬಂದಿವೆ. ದರೋಡೆಕೋರ ರೋಹಿತ್ ಗೋದಾರ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡು ವ್ಯಕ್ತಿಯೊಬ್ಬರು 5 ಕೋಟಿ ರೂ ಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಎರಡು ದಿನಗಳ ಹಿಂದೆಯಷ್ಟೇ ಕನ್ಹಯ್ಯಾ ಲಾಲ್‌ಗೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿದೆ. ಅದಾದ ಬಳಿಕ ಅದೇ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿದ್ದು, ಆದರೆ ಕನ್ಹಯ್ಯಾ ಕರೆಗೆ ಉತ್ತರಿಸಲಿಲ್ಲ. ಅದರ ಪರಿಣಾಮವಾಗಿ 5 ಕೋಟಿ ರೂ.ಗೆ ಬೇಡಿಕೆಯಿರುವ ಆಡಿಯೋ ರೆಕಾರ್ಡಿಂಗ್ ಅವರ ಫೋನ್‌ಗೆ ಕಳುಹಿಸಲಾಗಿದೆ.
ಇದನ್ನೂ ಓದಿ:ಕಿಡ್ನಾಪ್ ಆಗಿದ್ದ ಮಗುವಿಗೆ ಚಾಕೋಲೇಟ್ ಬಾಕ್ಸ್ ನೀಡಿ ಸಂತೈಸಿದ ಪೊಲೀಸರು!
ಯಾರಿಗೂ ಹೇಳದೆ ಇದನ್ನೂ ಇತ್ಯರ್ಥಪಡಿಸಲು ಅವರಿಗೆ ಸೂಚಿಸಲಾಗಿದ್ದು, ಕರೆ ಮಾಡಿ ಬೇಡಿಕೆ ಪೂರೈಸಿಸುವಂತೆ ಅಪರಿಚಿತ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಈ ಬೆನ್ನಲ್ಲೇ ಕನ್ಹಯ್ಯಾ ಲಾಲ್ ಅವರು ಸಿಟಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




