Viral: ಇದು ಭಾರತದ ದುಬಾರಿ ನಂಬರ್ ಪ್ಲೇಟ್; ಬರೋಬ್ಬರಿ 1.17 ಕೋಟಿ ರೂಗೆ ಖರೀದಿಸಿದ ಯುವ ಉದ್ಯಮಿ
ಹರ್ಯಾಣದಲ್ಲಿ ಕಾರಿನ ನಂಬರ್ ಪ್ಲೇಟ್‌ಗೆ ಸಂಬಂಧಿಸಿದ್ದಂತೆ ಆನ್‌ಲೈನ್ ಹರಾಜು ನಡೆದಿದೆ. ಈ ಹರಾಜಿನಲ್ಲಿ 'HR88B8888' ಎನ್ನುವ ವಾಹನ ನೋಂದಣಿ ಸಂಖ್ಯೆಯು ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಹರ್ಯಾಣದ ಯುವ ಉದ್ಯಮಿಯೊಬ್ಬರು ಈ ನಂಬರ್ ಪ್ಲೇಟ್ ಖರೀದಿ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹರ್ಯಾಣ, ನವೆಂಬರ್ 28: ಭಾರತದಲ್ಲಿ ಕೋಟಿಗಟ್ಟಲೇ ಬೆಲೆ ಬಾಳುವ ದುಬಾರಿ ಕಾರುಗಳಿವೆ. ಅದೇ ರೀತಿ ದುಬಾರಿ ರಿಜಿಸ್ಟ್ರೇಶನ್ ನಂಬರ್‌ಗಳು ಇವೆ. ಇದೇ ಸಾಲಿಗೆ ಈ ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ (Number plate) ಸೇರಿದೆ. 30 ವರ್ಷದ ಹರಿಯಾಣ ಮೂಲದ ಯುವ ಉದ್ಯಮಿ ಸುಧೀರ್ ಕುಮಾರ್ (Sudheer Kumar) 1.17 ಕೋಟಿ ನೀಡಿ HR88B8888 ನಂಬರ್ ಪ್ಲೇಟ್ ಖರೀದಿಸಿದ್ದಾರೆ.
ಟ್ರಾನ್ಸ್‌ಪೋರ್ಟ್ ಬ್ಯೂಸಿನೆಸ್, ಸಾಫ್ಟ್‌ವೇರ್ ಕಂಪನಿ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿರುವ ಸುಧೀರ್ ಕುಮಾರ್ ಭಾರತದಲ್ಲೇ ದುಬಾರಿ ಬೆಲೆಯ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಮಾಲೀಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಇದನ್ನೂ ಓದಿ:ಕುಡಿಯುವ ನೀರಿನಿಂದ ಕಾರು ತೊಳೆದ ವ್ಯಕ್ತಿಯಿಂದ 10,000 ರೂ ದಂಡ ವಸೂಲಿ
ಹರ್ಯಾಣದಲ್ಲಿ HR88B8888 ರಿಜಿಸ್ಟ್ರೇಶನ್ ನಂಬರ್ ಹರಾಜು ಹಾಕಲಾಗಿತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸುಧೀರ್ ಕುಮಾರ್ 11,000 ರೂ ರೂಪಾಯಿ ಪಾವತಿಸಿದ್ದಾರೆ. ಈ ಪೈಕಿ 1,000 ರೂಪಾಯಿ ಹರಾಜು ಪ್ರಕ್ರಿಯೆ ರಿಜಿಸ್ಟ್ರೇಶನ್ ಶುಲ್ಕ 10,000 ರೂಪಾಯಿ ಭದ್ರತಾ ಠೇವಣಿಯಾಗಿದೆ. ಉಳಿದ ಮೊತ್ತವನ್ನು ಐದು ದಿನಗಳ ಒಳಗೆ ಹರ್ಯಾಣ ಆರ್‌ಟಿಒಗೆ ಪಾವತಿಸಬೇಕಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Fri, 28 November 25




