Viral: ಕುಡಿಯುವ ನೀರಿನಿಂದ ಕಾರು ತೊಳೆದ ವ್ಯಕ್ತಿಯಿಂದ 10,000 ರೂ ದಂಡ ವಸೂಲಿ
ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ದೊಡ್ಡ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ಸ್ಟೋರಿ. ಹೌದು, ಬಂಜಾರ ಹಿಲ್ಸ್‌ನಲ್ಲಿ ತನ್ನ ಮರ್ಸಿಡಿಸ್ ಜಿ-ವ್ಯಾಗನ್ ಕಾರನ್ನು ಕುಡಿಯುವ ನೀರಿನಿಂದ ತೊಳೆದಿದ್ದಕ್ಕಾಗಿ ಹೈದರಾಬಾದ್‌ನ ವ್ಯಕ್ತಿಯೊಬ್ಬರಿಗೆ 10,000 ರೂ. ದಂಡ ವಿಧಿಸಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಹೈದರಾಬಾದ್, ನವೆಂಬರ್ 26: ನೀರನ್ನು (water) ಹಿತಮಿತವಾಗಿ ಬಳಸುವುದು ಮುಖ್ಯ. ಕೆಲವರು ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಾರೆ. ಆದರೆ ಹೈದರಾಬಾದ್‌ನ ವ್ಯಕ್ತಿಯೊಬ್ಬರು ಬಂಜಾರ ಹಿಲ್ಸ್‌ನಲ್ಲಿ ತನ್ನ ಮರ್ಸಿಡಿಸ್ ಜಿ-ವ್ಯಾಗನ್ (Mercedes G-Wagon) ಕಾರನ್ನು ಕುಡಿಯುವ ನೀರಿನಿಂದ ತೊಳೆದಿದ್ದಾರೆ. ಈ ವ್ಯಕ್ತಿಗೆ 10,000 ರೂ. ದಂಡ ವಿಧಿಸಲಾಗಿದೆ.
ಹೌದು, ಹೈದರಾಬಾದ್ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ರೆಡ್ಡಿ ಅನಿರೀಕ್ಷಿತ ತಪಾಸಣೆ ನಡೆಸಿ ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ಹೆಚ್ಚುತ್ತಿರುವ ಬೇಡಿಕೆಯ ನಡುವೆ ನಗರ ನಿವಾಸಿಗಳು ಸಂರಕ್ಷಿಸುವಂತೆ ಒತ್ತಾಯಿಸುತ್ತಿರುವುದರಿಂದ, ಪೋರ್ಟಬಲ್ ನೀರಿನ ವ್ಯರ್ಥವನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ನಿಯಮಗಳ ಅಡಿಯಲ್ಲಿ ಸ್ಥಳದಲ್ಲೇ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ, ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ವೈರಲ್
ಕಾರುಗಳನ್ನು ಸ್ವಚ್ಛಗೊಳಿಸಲು, ಉದ್ಯಾನವನಗಳಿಗೆ ಹಾಗೂ ವಾಣಿಜ್ಯ ಬಳಕೆಗಳಿಗೆ ನೀರನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ದಂಡ ವಿಧಿಸಲಾಗುತ್ತದೆ. ಕುಡಿಯುವ ನೀರನ್ನು ಜವಾಬ್ದಾರಿಯುತವಾಗಿ ಬಳಸಬೇಕು ಮತ್ತು ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Wed, 26 November 25




