ನೀರಿನ ಪೈಪ್ ರಿಪೇರಿ ಮಾಡುತ್ತಿದ್ದ ವೇಳೆ ಹೆಬ್ಬಾವು ದಾಳಿ: 10 ನಿಮಿಷಗಳ ಕಾಲ ಒದ್ದಾಡಿದ ವ್ಯಕ್ತಿ
ರಾಜಸ್ಥಾನದ ಕೋಟಾದ ಉಷ್ಣ ವಿದ್ಯುತ್ ಸ್ಥಾವರದಲ್ಲಿ ನಂದ್ ಸಿಂಗ್ ಎಂಬುವವರ ಮೇಲೆ ಹೆಬ್ಬಾವು ದಾಳಿ ಮಾಡಿದೆ. ನೀರಿನ ಪೈಪ್‌ಲೈನ್ ಪರಿಶೀಲಿಸುತ್ತಿದ್ದ ವೇಳೆ, ಹೆಬ್ಬಾವು ಕಾಲಿಗೆ ಸುತ್ತಿಕೊಂಡಿದ್ದು, 10 ನಿಮಿಷಗಳ ಕಾಲ ಒದ್ದಾಡಿದ್ದಾರೆ. ಸಹೋದ್ಯೋಗಿಗಳ ಸಮಯೋಚಿತ ನೆರವಿನಿಂದ ಅವರು ಪಾರಾಗಿದ್ದಾರೆ. ಈ ಭಯಾನಕ ಘಟನೆಯ ವೈರಲ್ ವಿಡಿಯೋ ಇಲ್ಲಿದೆ ನೋಡಿ.

ಹೆಬ್ಬಾವು ಸಾಧು ಹಾವು ಎಂದು ಅನೇಕರು ಅಂದುಕೊಂಡಿದ್ದಾರೆ. ಅದು ತಕ್ಷಣಕ್ಕೆ ಮನುಷ್ಯರಿಗೆ ಏನು ಮಾಡುವುದಿಲ್ಲ ಎಂಬ ತಪ್ಪು ಕಲ್ಪನೆ ಅನೇಕರಿಗೆ ಇದೆ. ಹೆಬ್ಬಾವು ಮನುಷ್ಯರನ್ನು ಕೂಡ ಬಿಡುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ನೋಡಿ. ರಾಜಸ್ಥಾನದ ಕೋಟಾದಲ್ಲಿ ವ್ಯಕ್ತಿಯೊಬ್ಬರನ್ನು ಹೆಬ್ಬಾವು (Python Attack) 10 ನಿಮಿಷಗಳ ಕಾಲ ಲಾಕ್ ಮಾಡಿದೆ. ನವೆಂಬರ್ 24ರಂದು (ಸೋಮವಾರ) ನಂದ್ ಸಿಂಗ್ ಎಂಬುವವರು ಉಷ್ಣ ವಿದ್ಯುತ್ ಸ್ಥಾವರದಲ್ಲಿ ನೀರಿನ ಪೈಪ್‌ಲೈನ್ ಪರಿಶೀಲಿಸುತ್ತಿದ್ದ ವೇಳೆ, ಹತ್ತಿರದಲ್ಲಿ ಕುಳಿತಿದ್ದ ಹೆಬ್ಬಾವೊಂದು ದಾಳಿ ಮಾಡಿದೆ. ನಂದ್ ಸಿಂಗ್ ಅವರ ಕಾಲುಗಳಿಗೆ ಹೆಬ್ಬಾವು ಸುತ್ತಿಕೊಂಡಿದ್ದು, ಸುಮಾರು 10 ನಿಮಿಷಗಳ ಕಾಲ ಅದರಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.
ಇನ್ನು ನಂದ್ ಸಿಂಗ್ ಒದ್ದಾಡುತ್ತಿರುವುದನ್ನು ನೋಡಿ, ಸಹೋದ್ಯೋಗಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಹೆಬ್ಬಾವಿನಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಇದೀಗ ಈ ವಿಡಿಯೋ @kotacityraj ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಇದು ತುಂಬಾ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. “ಕೋಟಾ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಸ್ಥಾವರದ ಬಿಳಿ ನೀರಿನ ಪೈಪ್‌ಲೈನ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಅದನ್ನು ರಿಪೇರಿ ಮಾಡಲು ಹೋದಾಗ, ಅಲ್ಲೇ ಇದ್ದ ಹೆಬ್ಬಾವು ನನ್ನ ಮೇಲೆ ದಾಳಿ ಮಾಡಿದೆ. ಕಾಲನ್ನು ಬಿಗಿಯಾಗಿ ಹಿಡಿದು ಸುಮಾರು 10 ನಿಮಿಷಗಳ ಕಾಲ ಉಸಿರುಗಟ್ಟಿಸಿದೆ. ನಂತರ ನನ್ನ ಸಹೋದ್ಯೋಗಿಗಳು ಬಂದು ಬಿಡಿಸಿದ್ದಾರೆ” ಎಂದು ನಂದ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: 34 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ: ಆದ್ರೂ ಒಂದು ದಿನವೂ ಸುಖದ ಜೀವನ ನಡೆಸಿಲ್ಲ
ವೈರಲ್ ವಿಡಿಯೋ ಇಲ್ಲಿದೆ :
View this post on Instagram
ಇನ್ನು ಅಧಿಕಾರಿಗಳು ಈ ಬಗ್ಗೆ ವರದಿಯೊಂದನ್ನು ನೀಡಿದ್ದಾರೆ. ನಂದ್ ಸಿಂಗ್ ಅವರ ಮೇಲೆ ಹೆಬ್ಬಾವು ದಾಳಿ ಮಾಡಿದೆ, ಆದರೆ ಯಾವುದೇ ಅಪಾಯ ಆಗಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ. ಇದೀಗ ಅವರು ಎಂಬಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ನಂದು ಸಿಂಗ್, ಇಬ್ಬರು ಉಷ್ಣ ವಿದ್ಯುತ್ ಸ್ಥಾವರ ಅಧಿಕಾರಿಗಳೊಂದಿಗೆ ಸ್ಥಾವರದ ನೀರಿನ ಪೈಪ್‌ಲೈನ್ ಪರಿಶೀಲಿಸಲು ಹೋಗಿದ್ದರು. ಈ ಸಮಯದಲ್ಲಿ, ಪೈಪ್‌ಲೈನ್ ಬಳಿ ಕುಳಿತಿದ್ದ ಹೆಬ್ಬಾವು ಅವರಿಗೆ ಕಾಣಿಸಲಿಲ್ಲ. ಇದ್ದಕ್ಕಿದ್ದಂತೆ, ಹೆಬ್ಬಾವು ದಾಳಿ ಮಾಡಿ ಅವರ ಕಾಲನ್ನು ಹಿಡಿದಿದೆ. ಇದನ್ನು ನೋಡಿ ಅಧಿಕಾರಿಗಳು ಇತರ ಕೆಲಸಗಾರಿಗೆ ಫೋನ್ ಮಾಡಿ ಬರಲು ಹೇಳಿದ್ದಾರೆ. ಸುಮಾರು ಪ್ರಯತ್ನದ ನಂತರ ಸಿಬ್ಬಂದಿ ನಂದಕಿಶೋರ್ ಅವರು ಹೆಬ್ಬಾವಿನ ಹಿಡಿತದಿಂದ ನಂದ್ ಸಿಂಗ್ ಅವರನ್ನು ಬಿಡಿಸಿದ್ದಾರೆ. ಅಲ್ಲಿಂದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಇದಕ್ಕೂ ಮುನ್ನ ಸಿಬ್ಬಂದಿ ಹೆಬ್ಬಾವನ್ನು ಕೋಲುಗಳಿಂದ ಹೊಡೆದಿದ್ದಾರೆ. ಅದರೂ ಅದು ಬಿಟ್ಟಿಲ್ಲ, ಇನ್ನು ಸಿಬ್ಬಂದಿಗಳು ಹೇಳಿರುವ ಪ್ರಕಾರ ಈ ಸ್ಥಾವರದ ಸುತ್ತಮುತ್ತ ಹಲವು ಹೆಬ್ಬಾವುಗಳು ಇದೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Wed, 26 November 25




