Viral: ಎಲ್ಲಿ ಹುಡುಕಿದ್ರೂ ದುಡ್ಡಿಲ್ಲ, ಮುಂದಿನ ಸಲನಾದ್ರೂ ದುಡ್ದು ಇಟ್ಟು ಹೋಗು; ಮನೆ ಮಾಲೀಕರಿಗೆ ಪತ್ರ ಬರೆದ ಕಳ್ಳ
ದುಡ್ಡಿಗಾಗಿ ಕಳ್ಳತನ, ದರೋಡೆ ಮಾಡುವುದನ್ನು ನೀವು ನೋಡುತ್ತೀರಿ. ಆದರೆ ಇಲ್ಲೊಬ್ಬ ಕಳ್ಳನು ಮನೆ ನುಗಿದ್ದು, ಈ ವೇಳೆ ಏನು ಸಿಗದಾಗಿದೆ. ಕೊನೆಗೆ ಮನೆ ಮಾಲೀಕರಿಗೆ ಪತ್ರ ಬರೆದು ಸಲಹೆ ಸಲಹೆ ನೀಡಿದ್ದಾನೆ. ಈ ಕಳ್ಳ ಬರೆದ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ತಮಿಳುನಾಡು, ನವೆಂಬರ್ 26: ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ. ಹೀಗಾಗಿ ಕೆಲವರು ಮೈ ದಂಡಿಸಿ ದುಡಿಯದೇ ಕಳ್ಳತನದ (theft) ಹಾದಿ ಹಿಡಿಯುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನು ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ (Tirunelveli District of Tamil Nadu) ವಿಚಿತ್ರ ಘಟನೆಯೊಂದು ನಡೆದಿದೆ. ಪಲಯಪೆಟ್ಟೈ ಪ್ರದೇಶದ ಮನೆಯೊಂದಕ್ಕೆ ನುಗ್ಗಿದ ಕಳ್ಳನು ಕದಿಯಲು ಏನು ಸಿಗದ ಕಾರಣ ನಿರಾಸೆಗೊಂಡಿದ್ದಾನೆ. ಕೊನೆಗೆ ಮನೆಮಾಲೀಕರಿಗೆ ಪತ್ರ ಬರೆದಿಟ್ಟು ಹೋಗಿದ್ದು, ಈ ಪತ್ರವು ವೈರಲ್ ಆಗಿದೆ.
ಮನೆಗೆ ನುಗ್ಗಿದ ಕಳ್ಳನು ಹಣ, ಆಭರಣದ ಹುಡುಕಾಟದಲ್ಲಿದ್ದಾಗ ಹುಂಡಿಯಲ್ಲಿದ್ದ 2,000 ರೂ ಮಾತ್ರ ಸಿಕ್ಕಿದೆ. ಇದರಿಂದ ಹತಾಶೆಗೊಂದು ಮನೆಮಾಲೀಕರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾನೆ. ಈ ಮನೆಯಲ್ಲಿ ಒಂದು ರೂಪಾಯಿ ಕೂಡ ಇಲ್ಲ, ಮುಂದಿನ ಬಾರಿ ಯಾರಾದರೂ ಕದಿಯಲು ಬಂದಾಗ, ಅವರು ಮೋಸ ಹೋಗದಂತೆ ಹಣವನ್ನು ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾನೆ.
ಇದನ್ನೂ ಓದಿ:ಅಂಗಡಿಗೆ ನುಗ್ಗಿದ ಕಳ್ಳನ ಮನಸ್ಸನ್ನು ಗೆದ್ದು ತಂದೆಯನ್ನು ಕಾಪಾಡಿದ ಪುಟಾಣಿ
ಈ ಮನೆಯ ಭದ್ರತಾ ವ್ಯವಸ್ಥೆಯನ್ನು ಟೀಕಿಸಿದ್ದು, ಒಂದೇ ಒಂದು ರೂಪಾಯಿ ಹಣವಿಲ್ಲ, ಇಷ್ಟೊಂದು ಸಿಸಿಟಿವಿ ಕ್ಯಾಮೆರಾಗಳು ಏಕೆ? ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾನೆ. ಕೊನೆಗೆ ಮುನ್ನೆಚ್ಚರಿಕೆಯಾಗಿ ಈ ಕೃತ್ಯವು ದಾಖಲಾಗದಂತೆ ನೋಡಿಕೊಳ್ಳಲು ಸಿಸಿಟಿವಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ಕದ್ದೋಯ್ದಿದ್ದಾನೆ. ಅಷ್ಟೇ ಅಲ್ಲದೆ, ಪತ್ರ ಬರೆದ ವೇಳೆಯ ಯಾವುದೇ ಪುರಾವೆಗಳನ್ನು ಬಿಟ್ಟಿಲ್ಲ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




