AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 34 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ: ಆದ್ರೂ ಒಂದು ದಿನವೂ ಸುಖದ ಜೀವನ ನಡೆಸಿಲ್ಲ

ಜಪಾನ್‌ನ 66 ವರ್ಷದ ವ್ಯಕ್ತಿಯೊಬ್ಬರು 34 ಕೋಟಿ ರೂ. ಲಾಟರಿ ಗೆದ್ದರೂ, ಪತ್ನಿಗೆ ಭಯಪಟ್ಟು ರಹಸ್ಯವಾಗಿಟ್ಟಿದ್ದಾರೆ. ಈ ಹಣವನ್ನು ಐಷಾರಾಮಿ ಜೀವನಕ್ಕೆ ಖರ್ಚು ಮಾಡಿ, ಗುಪ್ತವಾಗಿ ಕಾರು ಖರೀದಿಸಿ, ಪ್ರವಾಸ ಮಾಡಿದ್ದಾರೆ. ಕೊನೆಗೆ ಏಕಾಂಗಿತನ ಮತ್ತು ಅಪರಾಧಿ ಪ್ರಜ್ಞೆ ಕಾಡಿ, 500 ಮಿಲಿಯನ್ ಯೆನ್ ಹಣವನ್ನು ಕುಟುಂಬದ ಭದ್ರತೆಗಾಗಿ ವಿಮೆಯಲ್ಲಿ ಹೂಡಿಕೆ ಮಾಡಿದ್ದಾರೆ.

Viral: 34 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ: ಆದ್ರೂ ಒಂದು ದಿನವೂ ಸುಖದ ಜೀವನ ನಡೆಸಿಲ್ಲ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Nov 26, 2025 | 2:30 PM

Share

ಲಾಟರಿಯಲ್ಲಿ ಬಂದ ಹಣವನ್ನು ಹೇಗೆಲ್ಲ ಖರ್ಚು ಮಾಡಬೇಕು ಎಂಬೆಲ್ಲ ಯೋಚನೆ ಇರುತ್ತದೆ. ಅದರಲ್ಲೂ ಲಾಟರಿ ಬಂದಿದೆ ಎಂದು ಮನೆಯವರಿಗೆ, ಸ್ನೇಹಿತರಿಗೆ ಎಲ್ಲರಿಗೂ ಹೇಳಬೇಕು ಎಂಬ ಕಾತುರ ಇರುತ್ತದೆ. ಆದರೆ ಇಲ್ಲೊಬ್ಬರು ತಮಗೆ ಲಾಟರಿ ಬಂದ ಹಣದ ಬಗ್ಗೆ ಮನೆಯಲ್ಲೇ ಹೇಳಲು ಭಯಪಟ್ಟಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಜಪಾನ್‌ನ 66 ವರ್ಷದ ವ್ಯಕ್ತಿಯೊಬ್ಬರಿಗೆ 600 ಮಿಲಿಯನ್ ಯೆನ್ (34 ಕೋಟಿ ರೂ.) ಲಾಟರಿ (Japanese Man Wins Lottery) ಬಂದಿದೆ. ಆದ್ರೆ ಇಷ್ಟೊಂದು ಹಣ ಬಂದಿರುವ ಖುಷಿ ಇವರಿಗಿಲ್ಲ, ಮನೆಯಲ್ಲಿ ಈ ವಿಷಯ ತಿಳಿದರೆ ಕಷ್ಟ. ಅದರಲ್ಲೂ ಪತ್ನಿಗೆ ಗೊತ್ತಾದ್ರೆ ಕಥೆನೇ ಬೇರೆ. ಈ ಕಾರಣಕ್ಕೆ ಲಾಟರಿಯಲ್ಲಿ ಬಂದ ಹಣವನ್ನು ಗುಟ್ಟಾಗಿ ಖರ್ಚು ಮಾಡಿ, ರಹಸ್ಯವಾಗಿ ಐಷಾರಾಮಿ ಜೀವನವನ್ನು ನಡೆಸಿದ್ದರು. ಈ ವ್ಯಕ್ತಿ ಕಾಫಿ ಕುಡಿಯುವ ಅಂಗಡಿಯಲ್ಲಿ ಲಾಟರಿಯನ್ನು ಖರೀದಿ ಮಾಡಿದ್ದಾರೆ. ಖರೀದಿಸಿದ ಕೆಲವೇ ದಿನದಲ್ಲಿ ಮೆಗಾ ಲಾಟರಿ ಗೆದ್ದಿದ್ದಾರೆ. ಆದರೆ ಪತ್ನಿಗೆ ತಾವು 34 ಕೋಟಿ ರೂ. ಗೆದ್ದಿರುವ ಬಗ್ಗೆ ಹೇಳಿಲ್ಲ. ಬದಲಿಗೆ 5 ಮಿಲಿಯನ್ ಯೆನ್ (50,00,000 ರೂ.) ಗೆದಿದ್ದೇನೆ ಎಂದು ಹೇಳಿದ್ದಾರೆ.

ಈ ವ್ಯಕ್ತಿಯ ಪತ್ನಿ ಹಣಕಾಸಿನ ವಿಷಯದಲ್ಲಿ ಕಟ್ಟುನಿಟ್ಟು, ಒಂದು ವೇಳೆ 34 ಕೋಟಿ ರೂ, ಗೆದ್ದಿರುವ ಬಗ್ಗೆ ಪತ್ನಿಗೆ ಹೇಳಿದ್ರೆ ಎಲ್ಲಿ ಅಷ್ಟು ಹಣವನ್ನು ಕೇಳುತ್ತಾಳೋ ಎಂಬ ಭಯದಿಂದ ಸುಳ್ಳು ಹೇಳಿದ್ದಾರೆ. ಇನ್ನು 34 ಕೋಟಿಯನ್ನು ನೀರಿನಂತೆ ಖರ್ಚು ಮಾಡಿದ್ದು, ತಿಂಗಳಲ್ಲಿ ಸುಮಾರು 1 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದರಲ್ಲಿ ಒಂದು ಐಷಾರಾಮಿ ಕಾರು ಖರೀದಿಸಿದ್ದಾರೆ. ರೆಸಾರ್ಟ್‌ ಲೈಫ್​​​, ಜಪಾನ್‌ನಾದ್ಯಂತ ಐಷಾರಾಮಿ ಪ್ರವಾಸವನ್ನು ಕೂಡ ಮಾಡಿದ್ದಾರೆ. ಇದು ಯಾವುದೂ ಪತ್ನಿಗೆ ಗೊತ್ತಾಗದಂತೆ ಮಾಡಿದ್ದಾರೆ. ಇನ್ನು ಈ ಕಾರಿನ ಬಗ್ಗೆ ಹೆಂಡತಿಗೆ ತಿಳಿಯಬಾರದೆಂದು, ರಹಸ್ಯ ಸ್ಥಳದಲ್ಲಿ ಪಾರ್ಕಿಂಗ್​​ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿಯನ್ನು ಇಷ್ಟಪಟ್ಟಿದ್ದ ಅಮೆರಿಕದ ಮಹಿಳೆ ಅಲ್ಲಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇಕೆ?

ಆದರೆ ಸ್ವಲ್ಪ ದಿನಗಳ ನಂತರ ಈ ಜೀವನ ಅವರಿಗೆ ತುಂಬಾ ನೋವು ನೀಡುತ್ತಿತ್ತು. ಇದರಿಂದ ಅಪರಾಧಿ ಪ್ರಜ್ಞೆ ಮತ್ತು ಒಂಟಿತನ ಕಾಡಲು ಶುರುವಾಗಿದೆ. “ನಾನು ಈ ಹಣವನ್ನು ನನ್ನ ಸ್ವಂತ ಶ್ರಮದಿಂದ ಗಳಿಸಿದ್ದರೆ ನನಗೆ ಹೆಮ್ಮೆಯಾಗುತ್ತಿತ್ತು. ಆದರೆ ಪ್ರಯತ್ನವಿಲ್ಲದೆ ಬಂದ ಸಂಪತ್ತು ಎಲ್ಲ ಕಹಿ ಅನುಭವಗಳನ್ನು ನೀಡಿದೆ” ಎಂದು ಹೇಳಿದ್ದಾರೆ. ಇದು ಯಾವುದು ಬೇಡ ಎಂದು ಕೊನೆಗೆ ಸುಮಾರು 500 ಮಿಲಿಯನ್ ಯೆನ್ ಅನ್ನು ವಿಮೆಯಲ್ಲಿ ಹೂಡಿಕೆ ಮಾಡಿ, ಈ ಹಣಕ್ಕೆ ತನ್ನ ಮಕ್ಕಳು ಹಾಗೂ ಹೆಂಡತಿ ಜವಾಬ್ದಾರರು ಎಂದು ಹೇಳಿದ್ದಾರೆ. ತಾನು ಸತ್ತ ನಂತರ ಈ ಹಣವು ನನ್ನ ಕುಟುಂಬಕ್ಕೆ ಭದ್ರತೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ