Video: ದೇವ್ರು ಕಣ್ಬಿಟ್ರೆ ಆನಂದ, ಮನುಷ್ಯ ಕಣ್ಬಟ್ರೆ ಗೋವಿಂದ; ಆಟೋ ಹಿಂಬದಿ ಬರೆದ ಸಾಲುಗಳು ವೈರಲ್
ನೀವು ಆಟೋ ಅಥವಾ ವಾಹನಗಳ ಹಿಂದೆ ಬರೆದ ಸಾಲುಗಳನ್ನು ನೋಡಿರಬಹುದು. ಕೆಲ ಸಾಲುಗಳು ನಿಮ್ಮ ಮೊಗದಲ್ಲಿ ನಗು ತಂದರೆ, ಇನ್ನು ಕೆಲವು ಸಾಲುಗಳು ಜೀವನ ಪಾಠವಾಗಿರುತ್ತದೆ. ಇದೀಗ ಇಂತಹದ್ದೇ ಆಟೋದ ಹಿಂದೆ ಬರೆದ ಅರ್ಥಪೂರ್ಣ ಸಾಲುಗಳು ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸಾಮಾನ್ಯವಾಗಿ ಆಟೋ (auto) ಬೈಕ್‌ಗಳ ಹಿಂಭಾಗದಲ್ಲಿ ಕೆಲವರು ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಗೆ ಸಂಬಂಧಿಸಿದ ಸಾಲುಗಳು ನಿಮ್ಮ ಗಮನ ಸೆಳೆದಿರಬಹುದು. ಇನ್ನು ಕೆಲವು ಅರ್ಥಪೂರ್ಣ ಸಾಲುಗಳು ಜೀವನಕ್ಕೆ ಪಾಠವಾಗಿರುತ್ತದೆ. ಇದೀಗ ಅಂತಹದ್ದೇ ಸಾಲೊಂದು ವೈರಲ್ ಆಗಿದ್ದು, ದೇವ್ರು ಕಣ್ಬಿಟ್ರೆ ಆನಂದ, ಮನುಷ್ಯ ಕಣ್ಬಟ್ರೆ ಗೋವಿಂದ ಎಂದು ಆಟೋದ ಹಿಂದೆ ಬರೆದ ಸಾಲೊಂದು ನೆಟ್ಟಿಗರ ಗಮನ ಸೆಳೆದಿದೆ.
Golden throttle ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಈ ವಿಡಿಯೋದಲ್ಲಿ ಬ್ಲಾಗರ್ ಒಬ್ಬರು ಆಟೋ ಹಿಂಬದಿಯಲ್ಲಿ ಬರೆದ ಸಾಲನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆಟೋ ಚಾಲಕನನ್ನು ಮಾತನಾಡಿಸಿದ್ದು ಸಾಲುಗಳು ಅದ್ಭುತವಾಗಿದೆ ಎಂದು ಹೇಳಿರುವುದನ್ನು ನೋಡಬಹುದು. ಈ ಆಟೋದ ಹಿಂಬದಿ ದೇವರು ಕಣ್ಬಿಟ್ರೆ ಆನಂದ, ಮನುಷ್ಯ ಕಣ್ಬಟ್ರೆ ಗೋವಿಂದ ಎಂದು ಬರೆದಿರುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ:ಸ್ವಾರಿ ಗರ್ಲ್ಸ್, ನನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು; ಸ್ಕೂಟಿ ಹಿಂಬದಿ ಬರೆದ ಸಾಲುಗಳು ವೈರಲ್
ಈ ವಿಡಿಯೋ ಇದುವರೆಗೆ ನಾಲ್ಕೂ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದೇವ್ರು ಗೋವಿಂದ ಎರಡು ಒಂದೇ ಅಲ್ವಾ ಎಂದಿದ್ದಾರೆ. ಮತ್ತೊಬ್ಬರು, ಹೌದು, ಅಣ್ಣಯ್ಯ ಇದು ನಿಜ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಆಟೋ ಡ್ರೈವರ್ಸ್ vs ಡೈಲಾಗ್ ರೈಟರ್ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




