ಸ್ಕೈ-ಡೈನಿಂಗ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಹೋಗಿ 120 ಅಡಿ ಎತ್ತರದಲ್ಲಿ ಸಿಲುಕಿದ ಮಂಗಳೂರಿನ ಪ್ರವಾಸಿಗರು
ಕೇರಳದ ಇಡುಕ್ಕಿಯ ಅಣಚಲ್‌ನಲ್ಲಿರುವ ಖಾಸಗಿ ಸ್ಕೈ ಡೈನಿಂಗ್ ಸೌಲಭ್ಯದಲ್ಲಿ ಇಂದು ಮಧ್ಯಾಹ್ನ ಕ್ರೇನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ನಂತರ ಪ್ರವಾಸಿಗರ ಗುಂಪೊಂದು ನೆಲದಿಂದ 120 ಅಡಿ ಎತ್ತರದಲ್ಲಿ ಸಿಲುಕಿಕೊಂಡಿತ್ತು. ಇದರಲ್ಲಿ ಮಂಗಳೂರು ಮೂಲದ ಮಲಯಾಳಿಗಳು ಕೂಡ ಸೇರಿದ್ದರು. ಅವರು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಒಂದೂವರೆ ಗಂಟೆಗೂ ಹೆಚ್ಚು ಕಾಲ ಅಲ್ಲಿಯೇ ಕಳೆದರು. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.

ಇಡುಕ್ಕಿ, ನವೆಂಬರ್ 28: ಕೇರಳದ (Kerala) ಇಡುಕ್ಕಿ ಬಳಿ ಸ್ಕೈ-ಡೈನಿಂಗ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಹೋಗಿದ್ದ ಐವರು ಪ್ರವಾಸಿಗರು 120 ಅಡಿ ಎತ್ತರದಲ್ಲಿ ಸಿಲುಕಿದ್ದರು. ಕ್ರೇನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ನಂತರ ಮಂಗಳೂರು ಮೂಲದ ಪ್ರವಾಸಿಗರು ಸೇರಿದಂತೆ ಅದರಲ್ಲಿದ್ದ ಎಲ್ಲ ಪ್ರವಾಸಿಗರು 2 ಗಂಟೆಗಳ ಕಾಲ ಮೇಲೆ ಸಿಲುಕಿಕೊಂಡರು. ಇಬ್ಬರು ಮಕ್ಕಳು ಸೇರಿದಂತೆ ಆ ಪ್ರವಾಸಿಗರನ್ನು 120 ಅಡಿ ಎತ್ತರದಿಂದ ಕೆಳಗೆ ಇಳಿಸುತ್ತಿರುವ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ ಆಗಿದೆ.
ಕೇರಳದ ಇಡುಕ್ಕಿಯ ಅಣಚಲ್ ಬಳಿ ಸ್ಕೈ-ಡೈನಿಂಗ್ ಕ್ರೇನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 5 ಜನರು ನೆಲದಿಂದ 120 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಆ ಸ್ಥಳಕ್ಕೆ ತಲುಪುವ ಮೊದಲು ಆ ಪ್ರವಾಸಿಗರು 2 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿತ್ತು.
#WATCH | Munnar, Kerala | Tourists were stranded at a private sky dining setup in Anachal, Idukki, after a technical failure in the crane, today; Rescue operation underway
The incident occurred near Munnar, leaving tourists and staff stranded for over 1.5 hours. Rescue efforts… pic.twitter.com/Pciz0CoLxB
— ANI (@ANI) November 28, 2025
ಇದನ್ನೂ ಓದಿ: ಕಿಡ್ನಾಪ್ ಆಗಿದ್ದ ಮಗುವಿಗೆ ಚಾಕೋಲೇಟ್ ಬಾಕ್ಸ್ ನೀಡಿ ಸಂತೈಸಿದ ಪೊಲೀಸರು!
Tourists were stranded at a 120 feet sky dining centre in #Munnar Idukki area of #Kerala today after a crane developed a technical snag. All the stranded people were rescued using ropes and wires.#skydining #Kerala #Tourist #Rescue #skyrestaurant #SkyHotel #Suffering pic.twitter.com/MkWiBD7wYi
— Sujit Gupta (@sujitnewslive) November 28, 2025
ಈ ವೇಳೆ ರಕ್ಷಣಾ ಕಾರ್ಯಕರ್ತರು ಮೊದಲು ಮಕ್ಕಳು ಮತ್ತು ಅವರ ತಾಯಿಯನ್ನು ಕೆಳಗಿಳಿಸಲಾಯಿತು. ನಂತರ ತಂದೆ ಮತ್ತು ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರು ಕೆಳಗೆ ಬಂದರು. ಮಧ್ಯಾಹ್ನ 1.30 ರ ಸುಮಾರಿಗೆ ಪ್ರವಾಸಿಗರು ಮೇಲೆ ಸಿಲುಕಿಕೊಂಡಿದ್ದರು. ರೆಸ್ಟೋರೆಂಟ್ ಆಡಳಿತಾಧಿಕಾರಿಗಳು ರಕ್ಷಣಾ ಸೇವೆಗಳಿಂದ ಸಹಾಯವನ್ನು ಪಡೆಯಲಿಲ್ಲ. ಅಲ್ಲಿಗೆ ಮುನ್ನಾರ್ ಮತ್ತು ಅಡಿಮಾಲಿಯ ಘಟಕಗಳನ್ನು ಕಳುಹಿಸಲಾಯಿತು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಸ್ಕೈ-ಡೈನಿಂಗ್’ ಅನುಭವವು ಹಿಲ್ ಸ್ಟೇಷನ್ ಆಗಿರುವ ಇಡುಕ್ಕಿ ಜಿಲ್ಲೆಯಲ್ಲಿ ಸಾಹಸ ಪ್ರವಾಸೋದ್ಯಮ ಒಂದು ಭಾಗವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




