AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ಪುರದಲ್ಲಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್; ಕಿಟಕಿ ಒಡೆದು ಪ್ರಯಾಣಿಕರು ಪಾರು

ಕಾನ್ಪುರದಲ್ಲಿ ನಡುರಸ್ತೆಯಲ್ಲಿ ಹೊತ್ತಿ ಉರಿದ ಬಸ್; ಕಿಟಕಿ ಒಡೆದು ಪ್ರಯಾಣಿಕರು ಪಾರು

ಸುಷ್ಮಾ ಚಕ್ರೆ
|

Updated on: Nov 28, 2025 | 8:00 PM

Share

ನವೆಂಬರ್ 28: ಇತ್ತೀಚೆಗೆ ಸಾಲು-ಸಾಲಾಗಿ ಬಸ್ ಬೆಂಕಿ ದುರಂತದ ಘಟನೆಗಳು ನಡೆಯುತ್ತಿವೆ. ಇಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ ವೇಗವಾಗಿ ಹೋಗುತ್ತಿದ್ದುದರಿಂದ ಆ ಬಸ್​ಗೆ ಹೊತ್ತಿದ ಬೆಂಕಿ ಇಡೀ ಬಸ್​​ಗೆ ಆವರಿಸಿ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು. ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಬಸ್ ಇಂದು ಬೆಳಿಗ್ಗೆ 10.30ರ ಸುಮಾರಿಗೆ ನೌಬಸ್ತಾ-ರಾಮದೇವಿ ರಾಷ್ಟ್ರೀಯ ಹೆದ್ದಾರಿಯ ಬಳಿ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಕಾನ್ಪುರ, ನವೆಂಬರ್ 28: ಇತ್ತೀಚೆಗೆ ಸಾಲು-ಸಾಲಾಗಿ ಬಸ್ ಬೆಂಕಿ ದುರಂತದ ಘಟನೆಗಳು ನಡೆಯುತ್ತಿವೆ. ಇಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಚಲಿಸುತ್ತಿದ್ದ ಬಸ್ಸಿಗೆ ಬೆಂಕಿ (Fire Accident) ಹೊತ್ತಿಕೊಂಡಿದೆ. ಬಸ್ ವೇಗವಾಗಿ ಹೋಗುತ್ತಿದ್ದುದರಿಂದ ಆ ಬಸ್​ಗೆ ಹೊತ್ತಿದ ಬೆಂಕಿ ಇಡೀ ಬಸ್​​ಗೆ ಆವರಿಸಿ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು.

ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಬಸ್ ಇಂದು ಬೆಳಿಗ್ಗೆ 10.30ರ ಸುಮಾರಿಗೆ ನೌಬಸ್ತಾ-ರಾಮದೇವಿ ರಾಷ್ಟ್ರೀಯ ಹೆದ್ದಾರಿಯ ಬಳಿ ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಪ್ರಯಾಣಿಕರು ಕಿಟಕಿ ಗಾಜುಗಳನ್ನು ಮುರಿದು ಅಪಾಯದಿಂದ ಪಾರಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ