ಹಾಂಗ್ ಕಾಂಗ್ ಅಪಾರ್ಟ್ಮೆಂಟ್ ಬೆಂಕಿ ದುರಂತದ ಸಾವಿನ ಸಂಖ್ಯೆ 128ಕ್ಕೆ ಏರಿಕೆ
ಹಾಂಗ್ ಕಾಂಗ್ ಕಟ್ಟಡಗಳಲ್ಲಿ ಸಂಭವಿಸಿದ ಬೆಂಕಿಯಲ್ಲಿ ಮೃತಪಟ್ಟವರ ಸಂಖ್ಯೆ 128 ಕ್ಕೆ ಏರಿಕೆ, ಇನ್ನೂ ಅನೇಕರು ಕಾಣೆಯಾಗಿದ್ದಾರೆ. ತಾಯ್ ಪೊದಲ್ಲಿನ ವಾಂಗ್ ಫುಕ್ ಕೋರ್ಟ್ ಎಸ್ಟೇಟ್‌ನ ಅವಶೇಷಗಳಿಂದ ರಕ್ಷಣಾ ಕಾರ್ಯಕರ್ತರು ಹೆಚ್ಚಿನ ಶವಗಳನ್ನು ಹೊರತೆಗೆದಿದ್ದಾರೆ. ಸುಮಾರು 8 ದಶಕಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ಅಪಘಾತ ಇದಾಗಿದೆ. ಇದರಲ್ಲಿ 128 ಜನರು ಸಾವನ್ನಪ್ಪಿದ್ದಾರೆ. ಬಿದಿರಿನ ಸ್ಕ್ಯಾಫೋಲ್ಡಿಂಗ್‌ನಲ್ಲಿ ಸುತ್ತುವರಿದ ಎಂಟು 32 ಅಂತಸ್ತಿನ ಗೋಪುರಗಳನ್ನು ಬೆಂಕಿ ಆವರಿಸಿದೆ.
ಹಾಂಗ್ಕಾಂಗ್, ನವೆಂಬರ್ 28: ಹಾಂಗ್ ಕಾಂಗ್‌ನಲ್ಲಿ (Hong Kong) ಸಂಭವಿಸಿದ ಬೆಂಕಿ ದುರಂತದ ಸಾವಿನ ಸಂಖ್ಯೆ ಏರುತ್ತಲೇ ಇದೆ. ಬೆಂಕಿ ಹೊತ್ತಿಕೊಂಡು 3 ದಿನವಾದರೂ ಈ ಕಾಂಪ್ಲೆಕ್ಸ್ನಲ್ಲಿ ಸಂಪೂರ್ಣವಾಗಿ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇಂದು ಸಾವಿನ ಸಂಖ್ಯೆ 128ಕ್ಕೆ ಏರಿಕೆ. ಇನ್ನೂ ಹಲವಾರು ಜನರು ನಾಪತ್ತೆಯಾಗಿದ್ದಾರೆ. ನೂರಾರು ಜನರು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಯ್ ಪೊದಲ್ಲಿನ ವಾಂಗ್ ಫುಕ್ ಕೋರ್ಟ್ ಎಸ್ಟೇಟ್‌ನ ಅವಶೇಷಗಳಿಂದ ರಕ್ಷಣಾ ಕಾರ್ಯಕರ್ತರು ಹೆಚ್ಚಿನ ಶವಗಳನ್ನು ಹೊರತೆಗೆದಿದ್ದಾರೆ. ಸುಮಾರು 8 ದಶಕಗಳಲ್ಲಿ ಹಾಂಗ್ ಕಾಂಗ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ಅಪಘಾತ ಇದಾಗಿದೆ. ಇದರಲ್ಲಿ 128 ಜನರು ಸಾವನ್ನಪ್ಪಿದ್ದಾರೆ. ಬಿದಿರಿನ ಸ್ಕ್ಯಾಫೋಲ್ಡಿಂಗ್‌ನಲ್ಲಿ ಸುತ್ತುವರಿದ ಎಂಟು 32 ಅಂತಸ್ತಿನ ಗೋಪುರಗಳನ್ನು ಬೆಂಕಿ ಆವರಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

