ಬಾಯಿಗೆ ಬಂದಂತೆ ಮಾತಾಡಿದ ಧ್ರುವಂತ್: ಹೊಡೆಯಲು ಹೋದ ಸೂರಜ್, ಧನುಷ್
ಇಷ್ಟು ವಾರಗಳ ಕಾಲ ಎಲ್ಲರ ಜತೆ ಜಗಳ ಮಾಡುತ್ತಿದ್ದ ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆದರೆ ಅವರ ಬದಲಿಗೆ ಧ್ರುವಂತ್ ಜಗಳ ಜೋರಾಗಿದೆ. ಧನುಷ್, ಸಂಜನಾ, ಸೂರಜ್ ಮುಂತಾದವರ ಜೊತೆ ಧ್ರುವಂತ್ ಜಗಳ ಮಾಡಿದ್ದಾರೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಈ ಜಗಳ ಹೋಗಿದೆ.
ನಟ ಧ್ರುವಂತ್ ಅವರು ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ನೇರ ನಡೆ-ನುಡಿಯಿಂದ ಗುರುತಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅವರು ಹಲವರ ಜೊತೆಗೆ ಜಗಳ ಮಾಡಿಕೊಂಡಿದ್ದಾರೆ. ಅಲ್ಲದೇ, ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಧ್ರುವಂತ್ ಅವರು ಅತಿರೇಕದ ಪದ ಬಳಕೆ ಮಾಡಿದ್ದಕ್ಕೆ ಸೂರಜ್ (Suraj Singh) ಕೋಪಗೊಂಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಧನುಷ್ ಕೂಡ ಈ ಜಗಳದಲ್ಲಿ ಮಧ್ಯ ಬಂದಿದ್ದಾರೆ. ಇದರಿಂದಾಗಿ ಅವರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಜಗಳದ ವೇಳೆ ಸ್ಪಂದನಾ ಮೇಲೆ ಕೂಡ ಧ್ರುವಂತ್ (Dhruvanth) ಅವರು ಕೂಗಾಡಿದ್ದಾರೆ. ಇಷ್ಟು ವಾರಗಳ ಕಾಲ ಎಲ್ಲರ ಜೊತೆ ಜಗಳ ಮಾಡುತ್ತಿದ್ದ ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆದರೆ ಅವರ ಬದಲಿಗೆ ಧ್ರುವಂತ್ ಜಗಳ ಜೋರಾಗಿದೆ. ನವೆಂಬರ್ 28ರ ಸಂಚಿಕೆಯ ಪ್ರೋಮೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

