AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi in Udupi: ಮಕ್ಕಳು ರಚಿಸಿದ ಚಿತ್ರಗಳನ್ನು ಸಂಗ್ರಹಿಸಿ ನೀಡುವಂತೆ ಕೋರಿದ ಪ್ರಧಾನಿ ಮೋದಿ

Modi in Udupi: ಮಕ್ಕಳು ರಚಿಸಿದ ಚಿತ್ರಗಳನ್ನು ಸಂಗ್ರಹಿಸಿ ನೀಡುವಂತೆ ಕೋರಿದ ಪ್ರಧಾನಿ ಮೋದಿ

Ganapathi Sharma
|

Updated on:Nov 28, 2025 | 1:55 PM

Share

ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಕ್ಕಳು ರಚಿಸಿದ ಭಾವಚಿತ್ರಗಳನ್ನು ಸಂಗ್ರಹಿಸುವಂತೆ ಪ್ರಧಾನಿ ಮೋದಿ ಎಸ್‌ಪಿಜಿ ಮತ್ತು ಸ್ಥಳೀಯ ಪೊಲೀಸರಲ್ಲಿ ಕೋರಿದರು. ಭಾವಚಿತ್ರದ ಹಿಂದೆ ವಿಳಾಸಗಳನ್ನು ಬರೆದರೆ ಧನ್ಯವಾದ ಪತ್ರವನ್ನು ಕಳುಹಿಸುವುದಾಗಿ ಭರವಸೆ ನೀಡಿದರು. ಕೃಷ್ಣ ಮಠದಲ್ಲಿ ಪೂಜ್ಯ ಸಂತರು ಮತ್ತು ಗುರುಗಳ ಉಪಸ್ಥಿತಿಯಲ್ಲಿ ಶ್ರೀಮದ್ ಭಗವದ್ಗೀತೆಯ ಮಂತ್ರಗಳ ಆಧ್ಯಾತ್ಮಿಕ ಅನುಭವವ ತಮ್ಮ ದೊಡ್ಡ ಅದೃಷ್ಟ ಎಂದು ಮೋದಿ ಬಣ್ಣಿಸಿದರು.

ಉಡುಪಿ, ನವೆಂಬರ್ 28: ಪ್ರಧಾನಿ ನರೇಂದ್ರ ಮೋದಿ ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಆರಂಭಿಸುವುದಕ್ಕೂ ಮುನ್ನ ಮಕ್ಕಳು ಬಿಡಿಸಿದ ಭಾವಚಿತ್ರಗಳನ್ನು ಸಂಗ್ರಹಿಸಿ ಕಳುಹಿಸುವಂತೆ ಎಸ್​ಪಿಜಿ ಹಾಗೂ ಸ್ಥಳೀಯ ಪೊಲೀಸರಲ್ಲಿ ಮನವಿ ಮಾಡಿದರು. ಚಿತ್ರಗಳ ಹಿಂಭಾಗದಲ್ಲಿ ಮಕ್ಕಳು ತಮ್ಮ ವಿಳಾಸಗಳನ್ನು ಬರೆದರೆ, ತಾವೇ ಅವರಿಗೆ ಧನ್ಯವಾದ ಪತ್ರವನ್ನು ವೈಯಕ್ತಿಕವಾಗಿ ಕಳುಹಿಸುವುದಾಗಿ ಪ್ರಧಾನಿ ತಿಳಿಸಿದರು. ಮಕ್ಕಳ ಪ್ರಯತ್ನಗಳನ್ನು ಶ್ಲಾಘಿಸಿದ ಮೋದಿ, ಅವರಿಗೆ ಅನ್ಯಾಯವಾದರೆ ತಮಗೆ ದುಃಖವಾಗುತ್ತದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 28, 2025 01:54 PM