Bengaluru: ಪ್ರೇಯಸಿ ಹುಟ್ಟಿದ ಹಬ್ಬ ಆಚರಣೆ ಬಳಿಕ ಕೊಲೆ ಪ್ರಕರಣ; ಪ್ರಿಯಕರ ಮಾಡಿದ್ದ ಪ್ಲಾನ್​ ಏನು ಗೊತ್ತಾ?

ಪ್ರೇಯಸಿ ಹುಟ್ಟಿದ ಹಬ್ಬ ಆಚರಣೆ ಬಳಿಕ ಕೊಲೆ ಮಾಡಿ, ಐದು ಗಂಟೆಗಳ ಕಾಲ ಮೃತದೇಹದ ಜೊತೆಗಿದ್ದನಂತೆ ಆರೋಪಿ ಪ್ರಶಾಂತ್​. ಬಳಿಕ ಏನು ಮಾಡಲು ಪ್ಲಾನ್​ ಹಾಕಿದ್ದ ಗೊತ್ತಾ? ವಿಚಾರಣೆ ವೇಳೆ ಇತನ ಪ್ಲಾನ್​ ಕೇಳಿ ಪೊಲೀಸರೇ ಶಾಕ್​ ಆಗಿದ್ದಾರೆ.

Bengaluru: ಪ್ರೇಯಸಿ ಹುಟ್ಟಿದ ಹಬ್ಬ ಆಚರಣೆ ಬಳಿಕ ಕೊಲೆ ಪ್ರಕರಣ; ಪ್ರಿಯಕರ ಮಾಡಿದ್ದ ಪ್ಲಾನ್​ ಏನು ಗೊತ್ತಾ?
ಆರೋಪಿ ಪ್ರಶಾಂತ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 16, 2023 | 8:02 AM

ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬವನ್ನ ಆಚರಿಸಿ, ಖುಷಿಯಲ್ಲಿ ಕೇಕ್ ಕತ್ತರಿಸಿ ಬಳಿಕ ಆಕೆಯ ಕುತ್ತಿಗೆಯನ್ನ ಕೊಯ್ದು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿತ್ತು. ಬಳಿಕ ಆರೋಪಿಯನ್ನ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದರು. ಇದೀಗ ವಿಚಾರಣೆ ಬಳಿಕ ಮತ್ತಷ್ಟು ಸತ್ಯಗಳು ಹೊರಬಿದ್ದಿದ್ದು, ಪೊಲೀಸರೇ ಶಾಕ್​ ಆಗಿದ್ದಾರೆ. ಹೌದು ಪ್ರಿಯಕರ ಪ್ರಶಾಂತ್​ ನನ್ನ ಮಗಳಿಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಮೂರು ತಿಂಗಳ‌ ಹಿಂದೆ ನವ್ಯಳ ತಾಯಿ ದೂರು ದಾಖಲಿಸಿದ್ದರಂತೆ. ನಂತರ ಪೊಲೀಸರು ಪ್ರಶಾಂತ್ ಕರೆದು ಬುದ್ದಿವಾದ ಹೇಳಿದ್ದು, ನವ್ಯ ಸಹವಾಸಕ್ಕೆ ಹೋಗೋದಿಲ್ಲ ಎಂದಿದ್ದನಂತೆ. ಆದರೆ ಪ್ರೀತಿಯಲ್ಲಿ ಜಗಳ,ವಿರಹ ಎಲ್ಲಾ ಮಾಮೂಲಿ ಹಾಗಾಗಿ ಮತ್ತೆ ಪರಸ್ಪರ ಇಬ್ಬರು ಸಂಪರ್ಕದಲ್ಲಿದ್ದರು.

ಹುಟ್ಟುಹಬ್ಬ ಆಚರಣೆ ನೆಪಮಾಡಿ ಕರೆಯಿಸಿ ಕೊಲೆ

ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ, ಕಳೆದ ಆರು ವರ್ಷಗಳಿಂದ ಪ್ರಶಾಂತ್ ಎಂಬುವವನನ್ನ ಪ್ರೀತಿಸುತ್ತಿದ್ದಳು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದ ದೂರ ಸಂಬಂಧಿಕರು. ಕಳೆದ ಮಂಗಳವಾರ ನವ್ಯ ಬರ್ತಡೇ ಇತ್ತು. ಅಂದು ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ(ಏ.14ಬರ್ತಡೇ ಸೆಲೆಬ್ರೇಷನ್​ಗೆ ಪ್ಲಾನ್ ಮಾಡಿ ಅದರಂತೆ ರಾತ್ರಿ ಕೇಕ್ ಕಟ್ಟು ಮಾಡಿ ಕೇಕ್‌ ತಿನ್ನಿಸಿದ್ದ. ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ. ಬಳಿಕ ಮೃತ ಯುವತಿಯ ಶವವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ:ಅತಿಥಿ ಉಪನ್ಯಾಸಕನ ಹತ್ಯೆ: ಬೈಕಿನಿಂದ ಗುದ್ದಿದ ದುಷ್ಕರ್ಮಿಗಳು, ಮಾರಕಾಸ್ತ್ರದಿಂದ ಇರಿದು ಬರ್ಬರವಾಗಿ ಕೊಲೆ ಮಾಡಿಬಿಟ್ಟರು!

ಕೊಲೆ‌ ಮಾಡಿ ನಂತರ ಪ್ರಶಾಂತ್ ತಲೆಗೆ ಹೊಳೆದಿದ್ದು ಏನು?

ನವ್ಯ ರೆಸ್ಟ್ ರೂಮ್​ಗೆ ಮೊಬೈಲ್ ತೆಗೆದುಕೊಂಡು ಹೋದಾಗಲೇ ಇತನಿಗೆ ಅನುಮಾನ ಶುರುವಾಗಿದೆ. ಹೊರ ಬಂದ ಬಳಿಕ ಮೊಬೈಲ್ ಕೊಡುವಂತೆ ಕೇಳಿದ್ದ. ಕೊಡದಿದ್ದಾಗ ತಾನೇ ಚಾಕುವಿನಿಂದ ಚುಚ್ಚಿಕೊಳ್ಳೋದಾಗಿ ಬೆದರಿಸಿದ್ದನಂತೆ. ಕೊನೆಗೆ ನವ್ಯಳ ಕತ್ತು ಕೊಯ್ದು ಕೊಲೆ ಮಾಡಿದ್ದ. ಇನ್ನು ನವ್ಯ ಕೊಂದು ಐದು ಗಂಟೆ ಮೃತದೇಹದ ಜೊತೆಗಿದ್ದ ಆರೋಪಿ. ಈ ವೇಳೆ ನವ್ಯ ಮೃತದೇಹ ತುಂಡು ತುಂಡಾಗಿ ಮಾಡಿ ಎಸೆಯುವ ಪ್ಲಾನ್ ಮಾಡಿಕೊಂಡಿದ್ದನಂತೆ. ಅಷ್ಟೇ ಅಲ್ಲ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದ. ಆದರೆ ಅದ್ಯಾವುದನ್ನೂ ಮಾಡದೇ ಪೊಲೀಸರ ಮುಂದೆ ಶರಣಾಗಿದ್ದಾನೆ.

ನವ್ಯ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ ಪ್ರಶಾಂತ್

ಹೌದು ಪ್ರಿಯಕರ ಪ್ರಶಾಂತ್ ನವ್ಯ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ. ಮೈಮೇಲೆ ನವ್ಯ ಫೋಟೊ ಹಚ್ಚೆ ಹಾಕಿಸಿಕೊಂಡಿದ್ದ. ಆಕೆಯ ಹೆಸರನ್ನ ದೇಹದ ತುಂಬೆಲ್ಲ ಬರೆಸಿಕೊಂಡಿದ್ದ. ಕೊನೆಗೆ ಆಕೆಯ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ