ಬೆಂಗಳೂರು ಅ.29: ಭಾರತದಲ್ಲಿ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayan Murthy) ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾರಾಯಣ ಮೂರ್ತಿ ಅವರ ಅಭಿಪ್ರಾಯಕ್ಕೆ ಕೆಲವರು ಬೆಂಬಲ ಸೂಚಿಸಿದರೇ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಮೂಲದ ಹೃದ್ರೋಗ ತಜ್ಞ ದೀಪಕ್ ಕೃಷ್ಣಮೂರ್ತಿ, ಯುವಕರು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಕ್ಸ್ (ಹಿಂದಿನ ಟ್ವಿಟರ್) ಅಕೌಂಟ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ದೀರ್ಘಾವಧಿಯ ಕೆಲಸವು ಯುವಜನರಲ್ಲಿ ಹೃದಯಾಘಾತಕ್ಕೆ ಕಾರಣವಾಗಬಹುದು. ಇದು ಸಾಮಾನ್ಯ ಸಂಗತಿಯಾಗಿದೆ. ವಾರಕ್ಕೆ 70 ಗಂಟೆ ಕೆಲಸವನ್ನು ದಿನದ ಲೆಕ್ಕದಲ್ಲಿ ನೋಡುವುವುದಾರೇ, ದಿನದ 24 ಗಂಟೆಗಳು, ನೀವು ವಾರದಲ್ಲಿ 6 ದಿನ 12 ಗಂಟೆ ಕೆಲಸ ಮಾಡುತ್ತೀರಿ. ಉಳಿದ 12 ಗಂಟೆಯಲ್ಲಿ 8 ಗಂಟೆ ನಿದ್ದೆ ಮಾಡುತ್ತೀರಿ. ಉಳಿದಿದ್ದು 4 ಗಂಟೆಗಳು ಮಾತ್ರ.
24 hours per day (as far as I know)
If you work 6 days a week – 12h per day
Remaining 12h
8 hours sleep
4 hours remain
In a city like Bengaluru
2 hours on road
2 hours remain – Brush, poop, bathe, eat
No time to socialise
No time to talk to family
No time to exercise… https://t.co/dDTKAPfJf8— Dr Deepak Krishnamurthy (@DrDeepakKrishn1) October 27, 2023
ಬೆಂಗಳೂರಿನಂತಹ ನಗರದಲ್ಲಿ ಟ್ರಾಫಿಕ್ನಲ್ಲಿ 2 ಗಂಟೆ ಕಳೆಯುತ್ತದೆ. ಉಳಿದಿದ್ದು 2 ಗಂಟೆ ಇದು ಹಲ್ಲುಜ್ಜಲು, ಮಲ, ಸ್ನಾನ, ಆಹಾರ ಸೇವಿಸಲು ಹೋಗುತ್ತದೆ. ಇಷ್ಟಾದ ಮೇಲೆ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಮಾತನಾಡಲು ಸಮಯವಿಲ್ಲ, ವ್ಯಾಯಾಮ ಮಾಡಲು ಸಮಯವಿಲ್ಲ, ಮನರಂಜನೆಗೆ ಸಮಯವಿಲ್ಲ. ಕೆಲಸದ ಸಮಯದ ನಂತರವೂ ಜನರು ಇಮೇಲ್‌ಗಳು ಮತ್ತು ಕರೆಗಳಿಗೆ ಉತ್ತರಿಸಬೇಕೆಂದು ಕಂಪನಿಗಳು ನಿರೀಕ್ಷಿಸುತ್ತವೆ ಎಂಬುವುದು ಇಲ್ಲಿ ಮರೆಯುವಹಾಗಿಲ್ಲ.
ಇದನ್ನೂ ಓದಿ: ಮೋದಿ ಪ್ರತಿದಿನ 16 ಗಂಟೆ ಕೆಲಸ ಮಾಡುತ್ತಾರೆ, ನಾರಾಯಣ ಮೂರ್ತಿ ಹೇಳಿಕೆ ಬೆಂಬಲಸಿದ ಸಜ್ಜನ್ ಜಿಂದಾಲ್
ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಾದರೇ ಮದುವೆಯಾಗಬೇಡಿ, ಮಕ್ಕಳು ಬೇಡ. ಕೆಲಸ ಹೊರತು ಬೇರೆಯಾವುದರ ಬಗ್ಗೆಯೂ ಯೋಚಿಸಬೇಡಿ. ಈಗಾಗಲೆ ಕಂಪನಿಗೋಸ್ಕರ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿದರೇ ಮಾಲಿಕನಿಗೆ ಮಿಲಿಯನ್ಗಟ್ಟಲೆ ಆದಾಯ ಬರುತ್ತದೆ. ಕೆಲಸಗಾರನಿಗೆ ಕಡಲೆಕಾಯಿ ಸಿಪ್ಪೆ ಎಂದು ವ್ಯಂಗ್ಯವಾಡಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ಚೀನಾ ಮತ್ತು ಜಪಾನ್ ದೇಶಗಳೊಂದಿಗೆ ನಾವು ಸ್ಪರ್ಧಿಸಬೇಕೆಂದರೇ ನಾವು ನಮ್ಮ ಕೆಲಸದ ಅವಧಿಯನ್ನು ಹೆಚ್ಚಿಸಿಕೊಳ್ಳಬೇಕು. ಭಾರತದಲ್ಲಿ ಕೆಲಸ ಮಾಡುವ ಸಮಯ ತುಂಬಾ ಕಡಿಮೆಯಾಗಿದೆ. “ನಮ್ಮ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಿದರೇ ವೇಗವಾಗಿ ಅಭಿವೃದ್ಧಿ ಹೊಂದಬಹುದು” ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರೊಂದಿಗಿನ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ನಾರಾಯಣ ಮೂರ್ತಿ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ