ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್: ಸಾವಿಗೂ ಮುನ್ನ ಸ್ನೇಹಿತನಿಗೆ ಕಳಿಸಿದ್ದ ಸಂದೇಶದಲ್ಲಿತ್ತು ಕಾರಣ

| Updated By: ಆಯೇಷಾ ಬಾನು

Updated on: Oct 25, 2022 | 2:44 PM

ಆತ್ಮಹತ್ಯೆ ಮಾಡಿಕೊಂಡ ಸಂತೋಷ್, ಮೋಸದ ಸುಳಿಗೆ ಸಿಲುಕಿ ನೊಂದಿದ್ದ. ಸಾವಿಗೂ ಮುನ್ನ ತನ್ನ ಗೆಳೆಯನಿಗೆ "ಐ ಹೇಟ್ ಮೈ ಲೈಫ್" ಎಂದು ಸಂದೇಶ ಕಳಿಸಿದ್ದ.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್: ಸಾವಿಗೂ ಮುನ್ನ ಸ್ನೇಹಿತನಿಗೆ ಕಳಿಸಿದ್ದ ಸಂದೇಶದಲ್ಲಿತ್ತು ಕಾರಣ
Follow us on

ಬೆಂಗಳೂರು: ನಗರದಲ್ಲಿ ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿತ್ತು. ಸದ್ಯ ಈಗ ಈ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್ ಸಿಕ್ಕಿದೆ. ವಾಟ್ಸಾಪ್ ಸಂದೇಶದ ಮೂಲಕ ಆತ್ಮಹತ್ಯೆಯ ಕಾರಣ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಸಂತೋಷ್, ಮೋಸದ ಸುಳಿಗೆ ಸಿಲುಕಿ ನೊಂದಿದ್ದ. ಸಾವಿಗೂ ಮುನ್ನ ತನ್ನ ಗೆಳೆಯನಿಗೆ “ಐ ಹೇಟ್ ಮೈ ಲೈಫ್” ಎಂದು ಸಂದೇಶ ಕಳಿಸಿದ್ದ. ಮೊಸದ ಸುಳಿಗೆ ಸಾಕ್ಷಿಯಾದ 30 ಲಕ್ಷದ ಬಗ್ಗೆ ಉಲ್ಲೇಖ ಮಾಡಿದ್ದ. ಸಾವಿನ ಹಿಂದೆ ಹಣಕಾಸಿನ ವ್ಯವಹಾರದ ವಿಚಾರ ಇರುವುದಾಗಿ ಸಂದೇಶದಲ್ಲಿ ತಿಳಿಸಿದ್ದ. ಸಾಯುವುದಕ್ಕೂ ಮುನ್ನ ಸ್ನೇಹಿತನಿಗೆ ಕಳಿಸಿದ ಆ ಭಾವನಾತ್ಮಕ ಮೆಸೇಜ್​ನಿಂದ ಕುಟುಂಬದ ಆತ್ಯಹತ್ಯೆಯ ಸತ್ಯ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ಘಟನೆಗೂ ಮುನ್ನ ಸಂತೋಷ್ ಮುಂಜಾನೆ 5 ಗಂಟೆಗೆ ತನ್ನ ಸ್ನೇಹಿತನಿಗೆ ಕಳಿಸಿದ್ದ ಸಂದೇಶದಲ್ಲಿ ತನ್ನ ಜೀವನವನ್ನೇ ದ್ವೇಷಿಸಿದ್ದ. “ಐ ಹೇಟ್ ಮೈ ಲೈಫ್” ಮೂವತ್ತು ಲಕ್ಷ ಲಾಸ್ ಆಗಿದೆ. ಹದಿನೈದು ಲಕ್ಷ ಬೇರೆಯವರಿಗೆ ಕೊಟ್ಟಿದ್ದೇನೆ. ಎಲ್ಲರೂ ಮೋಸ ಮಾಡಿದ್ರು. ನನ್ನ ಪೂರ್ತಿ ಜೀವನ ಬೇರೆಯವ್ರಿಗೆ ಸಹಾಯ ಮಾಡಿದೆ. ನನ್ನ ಹೆಂಡ್ತಿ ಮಗಳು ತುಂಬಾ ಒಳ್ಳೆಯವ್ರು. ನನಗೆ ಸಹಾಯ ಮಾಡಿದ್ರು. ನನಗೆ ಒಂದೂವರೆ ಕೋಟಿ ಆಸ್ತಿ ಇದ್ದು, ಜೀವನ‌ ತುಂಬಾ ಬೇಜಾರ್ ಆಗಿದೆ. ಹಳೇ ಮನೆ ಓನರ್ ನಮಗೆ ಮೋಸ ಮಾಡಿದ. ನನಗೆ ಎಲ್ಲರೂ ಮೋಸ ಮಾಡಿದ್ರು. ಅದಕ್ಕೆ ನಾನು ಜೀವನವನ್ನು ದ್ವೇಷಿಸುತ್ತೇನೆಂದು ಸಂತೋಷ್ ತನ್ನ ಸ್ನೇಹಿತ ಮೋಹನ್​ಗೆ ವಾಟ್ಸಾಪ್ ಸಂದೇಶ ಕಳಿಸಿದ್ದ. ಆದ್ರೆ ಮೋಹನ್ ಈ ಸಂದೇಶವನ್ನು ಬೆಳಗ್ಗೆ 8ಗಂಟೆ ಸುಮಾರಿಗೆ ಗಮನಿಸಿದ್ದಾರೆ. ಎಂದು ಹೆಚ್​ಎಸ್​ಆರ್ ಲೇಔಟ್ ಠಾಣೆಯಲ್ಲಿ ದಾಖಲಾದ ಎಫ್​ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಟ್ರಕ್ಕನ್ನು ಜಮೀನು ಬಳಿ ಒಯ್ದು ಹಸಿಶುಂಠಿ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:44 pm, Tue, 25 October 22