ಬೆಂಗಳೂರು: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಆರೋಪ; ಮಾಜಿ ಕಾರ್ಪೊರೇಟರ್​​ನ ಬಂಧನ

| Updated By: ವಿವೇಕ ಬಿರಾದಾರ

Updated on: Jan 20, 2023 | 6:50 AM

ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್​ ವಿ.ಬಾಲಕೃಷ್ಣನನ್ನು ಕಗ್ಗಲೀಪುರ ಪೊಲೀಸರು ಬಂಧಸಿದ್ದಾರೆ.

ಬೆಂಗಳೂರು: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಆರೋಪ; ಮಾಜಿ ಕಾರ್ಪೊರೇಟರ್​​ನ ಬಂಧನ
ಮಾಜಿ ಕಾರ್ಪೊರೇಟರ್​ ವಿ.ಬಾಲಕೃಷ್ಣ
Follow us on

ಬೆಂಗಳೂರು: ಕರ್ತವ್ಯನಿರತ ಸಿಪಿಐ (CPI) ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್​ ವಿ.ಬಾಲಕೃಷ್ಣನನ್ನು (Former Corporator V Balakrishnan) ಕಗ್ಗಲೀಪುರ ಪೊಲೀಸರು ಬಂಧಸಿದ್ದಾರೆ. ವಿ.ಬಾಲಕೃಷ್ಣ ಯಲಚೇನಹಳ್ಳಿ ವಾರ್ಡ್ ನಂ.​185ರ ಮಾಜಿ ಕಾರ್ಪೊರೇಟರ್​ ಆಗಿದ್ದಾನೆ. ನಿನ್ನೆ ಸಂಜೆ (ಜ.19) ವಿ.ಬಾಲಕೃಷ್ಣ ಮತ್ತು ಸಿಪಿಐ ವಿಜಯ್ ಕುಮಾರ್​ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ವಿ.ಬಾಲಕೃಷ್ಣ, ಸಿಪಿಐ ವಿಜಯ್ ಕುಮಾರ್ ಅವರ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿದೆ. ತಕ್ಷಣವೇ​ ಕಗ್ಗಲೀಪುರ ಪೊಲೀಸರು ವಿ. ಬಾಲಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ. ಸಿಪಿಐ ವಿಜಯ್ ಕುಮಾರ್ ದೂರಿನ ಮೇರೆಗೆ, ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 353 ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ಐಪಿಸಿ ಸೆಕ್ಷನ್ 332-ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಂದು (ಜ.20) ಪೊಲೀಸರು ಆರೋಪಿಯನ್ನು ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಘಟನೆ ಸಂಬಂಧ ವಿ.ಬಾಲಕೃಷ್ಣ ಪರ ವಕೀಲ ನಾರಾಯಣಸ್ವಾಮಿ ಟಿವಿ9 ಜೊತೆ ಮಾತನಾಡಿ ನಿನ್ನೆ (ಜ.19) ಸಂಜೆ 7 ಗಂಟೆಗೆ ಘಟನೆ ಬಗ್ಗೆ ಮಾಹಿತಿ ಬಂತು. ಘಟನೆ ಬಗ್ಗೆ ಮಾಹಿತಿ ಪಡೆಯಲು ನಾವು ಠಾಣೆಗೆ ಹೋಗಿದ್ವಿ. ಆದರೆ ಠಾಣೆಯಲ್ಲಿ ನಮಗೆ ಮಾತಾಡಲು ಅವಕಾಶ ನೀಡಲಿಲ್ಲ. ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಬಾಲಕೃಷ್ಣ 3-4 ಬಾರಿ ಕಾರ್ಪೊರೇಟರ್​ ಆಗಿ ಸೇವೆ ಸಲ್ಲಿಸಿದ್ದಾರೆ. ಪೊಲೀಸರು ಬಾಲಕೃಷ್ಣ ಮೇಲೆ ಹಲ್ಲೆ ಮಾಡಿದ್ದಾರಾ? ಅಥವಾ ಬಾಲಕೃಷ್ಣ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರಾ? ನೋಡಬೇಕಿದೆ. ಬಾಲಕೃಷ್ಣ ಹೊರಬಂದರೆ ಏನಾಗಿದೆ ಅನ್ನೋದು ತಿಳಿಯುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ