Sign In

By signing in or creating an account, you agree with Associated Broadcasting Company's Terms & Conditions and Privacy Policy.

24/7 ಹೋಟೆಲ್​ ತೆರೆಯಲು ಅನುಮನತಿ ನೀಡುವಂತೆ ಸರ್ಕಾರಕ್ಕೆ ಅಸೋಸಿಯೇಷನ್ ಮನವಿ

ವ್ಯಾಪಾರವನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ, 24/7 ಹೋಟೆಲ್​​ಗಳನ್ನು ತೆರಯಲು ಅವಕಾಶ ನೀಡುವಂತೆ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್ ನೂತನ ಸರ್ಕಾರಕ್ಕೆ ಮತ್ತು ಬೆಂಗಳೂರು ಪೊಲೀಸರಿಗೆ ಮನವಿ ಸಲ್ಲಿಸಿದೆ.

24/7 ಹೋಟೆಲ್​ ತೆರೆಯಲು ಅನುಮನತಿ ನೀಡುವಂತೆ ಸರ್ಕಾರಕ್ಕೆ ಅಸೋಸಿಯೇಷನ್ ಮನವಿ
ಹೋಟೆಲ್​
Follow us
ವಿವೇಕ ಬಿರಾದಾರ
|

Updated on: Jun 05, 2023 | 8:17 AM

ಬೆಂಗಳೂರು: ವ್ಯಾಪಾರವನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ, 24/7 ಹೋಟೆಲ್​​ಗಳನ್ನು (Hotel) ತೆರಯಲು ಅವಕಾಶ ನೀಡುವಂತೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (BBHA) ನೂತನ ಸರ್ಕಾರಕ್ಕೆ (Karnataka Government) ಮತ್ತು ಬೆಂಗಳೂರು ಪೊಲೀಸರಿಗೆ (Bengaluru Police) ಮನವಿ ಸಲ್ಲಿಸಿದೆ. ಸಂಘವು ಕಳೆದ ಒಂದು ವರ್ಷದಿಂದ ಈ ಮನವಿ ಮಾಡುತ್ತಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ಮಲ್ಲೇಶ್ವರಂ, ಇಂದಿರಾನಗರ ಮತ್ತು ಹೆಬ್ಬಾಳದಂತಹ ವಾಣಿಜ್ಯ ಪ್ರದೇಶಗಳಲ್ಲಿ ಕನಿಷ್ಠ 24/7 ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್​​ಗಳನ್ನು ತೆರೆಯುವ ಅಗತ್ಯವಿದೆ ಎಂದು ಎಂದು ಬಿಬಿಎಚ್‌ಎ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ತಡರಾತ್ರಿ 1 ಗಂಟೆವರೆಗೆ ಹೋಟೆಲ್​ಗಳನ್ನು ತೆರೆಯಲು ಹಿಂದೆಯೇ ಅನುಮತಿ ನೀಡಿದೆ. ಆದರೆ, ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಹೋಟೆಲ್, ಬೇಕರಿ, ಸ್ವೀಟ್ ಸ್ಟಾಲ್, ಐಸ್‌ಕ್ರೀಂ ಪಾರ್ಲ‌್ರಗಳಿಗೆ ಇದರಿಂದ ತೊಂದರೆಯಾಗುತ್ತಿದ್ದು, ನಿರೀಕ್ಷಿತ ವ್ಯಾಪಾರ ಮಾರ್ಗಸೂಚಿ ಹೊರಡಿಸಿದ್ದರೂ ಇದರ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಹೊಟೆಲ್ ಉದ್ಯಮಿಗಳಿಗೆ ನೆರವಾಗಬೇಕು ಎಂದಿದ್ದಾರೆ.

ನಾವು ಈಗ ಮತ್ತೊಮ್ಮೆ ಹೊಸ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಮತ್ತು ಪೊಲೀಸರು ನಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂಬ ಭರವಸೆ ಇದೆ. 30 ದಿನಗಳಲ್ಲಿ ನಮಗೆ ಅನುಮತಿ ನೀಡದಿದ್ದರೇ ಕಾನೂನುಬದ್ಧವಾಗಿ ಹೋರಾಟ ನಡೆಸಲು ಸಿದ್ದರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಹೋಟೆಲ್​​​ಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವಂತೆ BBMP ಆದೇಶ, ಹೋಟೆಲ್ ಮಾಲೀಕರು ಗರಂ

ಇದರಿಂದ ವ್ಯಾಪಾರ ಉತ್ತೇಜನವಾಗುತ್ತದೆ, ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸುವ ಜೊತೆಗೆ ಹೋಟೆಲ್​​ಗಳಿಗೆ ಹೆಚ್ಚುವರಿ ಆದಾಯವನ್ನು ತರುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ ಕೆಲಸ ಮಾಡುವ ಅಥವಾ ಪ್ರಯಾಣಿಸುವವರಿಗೆ ಸಾಕಷ್ಟು ಅನುಕೂಲಕವಾಗುತ್ತದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ರಾತ್ರಿಯಿಡೀ ತೆರೆಯಲು ಅನುಮತಿಸಿದರೇ, ಅದು ನಗರದಲ್ಲಿನ ಗೂಂಡಾಗಿರಿಯನ್ನು ಕಡಿಮೆ ಮಾಡಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಬಗ್ಗೆ ಕೆಲವು ರೆಸ್ಟೋರೆಂಟ್‌ಗಳು ಈ ಕಲ್ಪನೆಯನ್ನು ಸ್ವಾಗತಿಸಿದರೆ, ಅನೇಕರು ಇದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ರೆಸ್ಟೋರೆಂಟ್‌ಗಳು 24/7 ತೆರೆದಿರಲು ಅವಕಾಶ ನೀಡುವುದು ಒಳ್ಳೆಯದು ಆದರೆ ಅದು ಗ್ರಾಹಕರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಎಂಜಿ ರಸ್ತೆಯ ಕೆಫೆಯೊಂದರ ವ್ಯವಸ್ಥಾಪಕ ರಾಜು ಹೇಳಿದ್ದಾರೆ.

ರೆಸ್ಟೋರೆಂಟ್ ಅನ್ನು ರಾತ್ರಿಯಿಡೀ ತೆರೆದಿಡುವುದರಿಂದ ಸಂಪನ್ಮೂಲಗಳ ವ್ಯರ್ಥವಾಗಬಹುದು ಏಕೆಂದರೆ ನಾವು ತಡರಾತ್ರಿಯಲ್ಲಿ ಅಂತಹ ಜನಸಂದಣಿ ಇರುವುದಿಲ್ಲ ಎಂದು ಎಂಜಿ ರಸ್ತೆಯ ಮತ್ತೊಂದು ರೆಸ್ಟೋರೆಂಟ್​ನ ಮ್ಯಾನೇಜರ್ ಹೇಳಿದ್ದಾರೆ.

ಹೆಬ್ಬಾಳದ ಉಡುಪಿ ಪಾರ್ಕ್‌ ಇನ್‌ ಮಾಲೀಕ ಸಂತೋಷ್‌ ಶೆಟ್ಟಿ ಈ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣಗಳು ಮತ್ತು ಆಸ್ಪತ್ರೆಗಳ ಹೊರಗೆ ಇದರ ಅಗತ್ಯವಿಲ್ಲದ ಕಾರಣ ಇದು ಮೂರ್ಖತನದ ಕಲ್ಪನೆ. ರಾಜ್ಯ ಸರ್ಕಾರವು ಮನವಿಯನ್ನು ಅನುಮೋದಿಸಿದರೂ ನಾವು ಅದನ್ನು ಅನುಸರಿಸುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ