ಬೆಂಗಳೂರು: ಐಎಎಸ್ ಮತ್ತ ಐಪಿಎಸ್ ವಾರ್ ಮಧ್ಯೆ ನಾನು ಬರುವುದಿಲ್ಲ. ರವಿಯವರ ಹೆಸರು ಬಂದಿರುವುದರಿಂದ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ಡಿ.ಕೆ.ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ (Kusuma Hanumantharayappa) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅನುಭವಿಸರುವ ನೋವು,ಕಷ್ಟ ಯಾವ ಹೆಣ್ಣಿಗೂ ಆಗಬಾರದು. ಸಿಬಿಐ ರಿಪೋರ್ಟ್ನಲ್ಲಿ ಮೆಸೆಜ್ ಚಾಟ್ ಮಾಡಿರುವ ವಿಚಾರ ಸ್ಪಷ್ಟವಾಗಿದೆ. ನನಗೆ ಸಿಬಿಐ ರಿಪೊರ್ಟ್ ಬಂದಮೇಲೆ ಯಾರೂ ಡಿಸ್ಕಸ್ ಮಾಡಲೇ ಇಲ್ಲ. ತನಿಖೆ ಮಾಡಿದ ಮೇಲೆ ಯಾವ ಅಂಶಗಳಿವೆ ಅನ್ನೋದು ಯಾರೂ ಡಿಸ್ಕಸ್ ಮಾಡಿಲ್ಲ. ಡಿ ರೂಪ (D.Roopa Moudgil) ಅವರ ಮಾಡುತ್ತಿರುವ ಹೋರಾಟ ಗಮನಸಿಕೊಂಡು ಬರುತ್ತಿದ್ದೇನೆ. ಕರ್ಮ ಯಾರನ್ನೂ ಬಿಡುವುದಿ, ಹೀಗಾಗಿ ತಪ್ಪು ಮಾಡಿದವರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.
ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾಡಬಾರದು, ಇನ್ನೊಬ್ಬರ ಜೀವಕ್ಕೆ ಹಾನಿಯಗುತ್ತೆ ಅನ್ನೋ ಕನಿಷ್ಠ ಜ್ಞಾನ ಇರಬೇಕಾಗುತ್ತದೆ. ಯಾರೇ ತಪ್ಪು ಮಾಡಿದರೂ ಆದು ಕ್ಷಣಿಕ, ಶಾಸ್ವತವಾಗಿ ಯಾವುದು ಮುಚ್ಚಿ ಹಾಕಲು ಆಗುವುದಿಲ್ಲ. ಸತ್ಯ ಆಚೆ ಬರಲು ಕಾಯಬೇಕು ಸತ್ಯ ಯಾವಗಲೂ ಆಚೆ ಬಂದೆ ಬುರುತ್ತದೆ. ಆ ವಿಶ್ವಾಸ ನಂಗೆ ಇದೆ. ಡಿಕೆ ರವಿಗೆ ಮಾನಸಿಕ ಅಸ್ವಸ್ಥತನ ಇರಲಿಲ್ಲ. ಬೇರೆ ಅಧಿಕಾರಿಗಳಿಗೆ ಏನು ಕಳಿಸಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನನಗೆ ಆದ ನೋವು ಯಾರಿಗೂ ಆಗಬಾರದು. ಸದ್ಯ ಈಗ ನನಗೆ ಅನಿಸಿರುವುದನ್ನು ನಾನು ಹೇಳಿದ್ದೇನೆ ಅಷ್ಟೇ. ದೇವರ ಮೇಲೆ ನಾನು ಅಪಾರ ನಂಬಿಕೆ ಇಟ್ಟಿಕೊಂಡಿರುವವಳು. ತಪ್ಪು ಸರಿ ಏನು ಮಾಡಿದರೂ ಇದೇ ಜನ್ಮದಲ್ಲಿ ಅನುಭವಿಸುತ್ತೇವೆ ಎಂದರು.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಕುಸುಮಾ ಅವರು, “ಯಾವುದೇ ಕಾರಣಕ್ಕೂ ತಾವು ಮಾಡಿದ ಕರ್ಮ ಬಿಡುವುದಿಲ್ಲ. ನಿಧಾನವಾಗಿ ಅಥವಾ ಬೇಗವಾದರೂ ಕರ್ಮ ನಿಮ್ಮನ್ನು ಬಿಡಲ್ಲ” ಎಂದು ರೋಹಿಣಿ ಸಿಂಧೂರಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಇನ್ನು ಕುಸುಮಾ ಟ್ವೀಟ್ ನೋಡಿದ ರೂಪಾ ಅವರು ರೀಟ್ವೀಟ್ ಮಾಡಿದ್ದು, “ಕುಸುಮಾ, ಒಬ್ಬ ಮಹಿಳೆಯಾಗಿ ನಿಮ್ಮ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಇತರ ಅನೇಕ ಮಹಿಳೆಯರ ನೋವು (ಅವರಲ್ಲಿ ಕೆಲವರು ಐಎಎಸ್ನಲ್ಲಿದ್ದಾರೆ), ಆದರೂ ಅಸಹಾಯಕರಾಗಿದ್ದಾರೆ. ಆದರೆ ಅಂತಿಮವಾಗಿ, ಯಾರಾದರೂ ಅಪರಾಧಿಯ ವಿರುದ್ಧ ನಿಲ್ಲಬೇಕು (ಅವಳು ಮಹಿಳೆಯಾಗಿದ್ದರೂ ಸಹ). ದೇವರು ಅವಳಿಗೆ ಅನುಭೂತಿಯನ್ನು ನೀಡಲಿ ಮತ್ತು ಸದ್ಬುದ್ಧಿಯನ್ನು ಪುನರಾವರ್ತಿಸಲಿ” ಎಂದಿದ್ದಾರೆ.
ಇದನ್ನೂ ಓದಿ: ಐಎಎಸ್, ಐಪಿಎಸ್ ಮಹಿಳಾ ಅಧಿಕಾರಿಗಳಿಬ್ಬರ ವಾರ್ ಮಧ್ಯ ಡಿ.ಕೆ.ರವಿ ಪತ್ನಿ ಎಂಟ್ರಿ, ಕುತೂಹಲ ಮೂಡಿಸಿದ ಕುಸುಮಾ ಟ್ವೀಟ್
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದೆ. ಡಿ. ರೂಪಾ ಮಾಡಿದ್ದ ಆರೋಪಗಳಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ. ಅಲ್ಲದೇ ಆ ಫೋಟೋಗಳನ್ನು ಯಾರಿಗೆ ಕಳುಹಿಸಿದ್ದೆನೆಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ರೂಪಾ ಅವರು ಮತ್ತೆ ಸುದ್ದಿಗೋಷ್ಟಿ ನಡೆಸಿ, ಪದೇಪದೆ ನನ್ನನ್ನು ಕೆಣಕಬೇಡಿ ಎಂದು ರೋಹಿಣಿ ಸಿಂಧೂರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Sun, 19 February 23