AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್​ ಎರಚಿದ ಪ್ರಕರಣ; ಆಸ್ಪತ್ರೆಗೆ ಡಿ.ಕೆ.ಶಿವಕುಮಾರ್ ಭೇಟಿ

ಆ್ಯಸಿಡ್​ ದಾಳಿಗೊಳಗಾದ ಯುವತಿಯನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್​ ಎರಚಿದ ಪ್ರಕರಣ; ಆಸ್ಪತ್ರೆಗೆ ಡಿ.ಕೆ.ಶಿವಕುಮಾರ್ ಭೇಟಿ
ಆ್ಯಸಿಡ್ ದಾಳಿ, ಡಿ.ಕೆ ಶಿವಕುಮಾರ್​ ಭೇಟಿ
TV9 Web
| Edited By: |

Updated on: Feb 20, 2023 | 7:16 AM

Share

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸುಮಂತ್ ಎಂಬ ಯುವಕ  ಆ್ಯಸಿಡ್​ ಎರಚಿದ್ದ ಘಟನೆ ರಾಮನಗರ ಜಿಲ್ಲೆಯ ಕನಕಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದ್ದು, ಬಾಲಕಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಇನ್ನು ಈ ಘಟನೆ ಸಂಬಂಧ ರಾಮನಗರ ಎಸ್​.ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದರು. ನಿನ್ನೆ(ಫೆ.17) ಸಂಜೆ ಆರು ಗಂಟೆ ಸುಮಾರಿಗೆ ದಾಳಿ ನಡೆದಿದೆ. ಕನಕಪುರ ಟೌನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಆಗಿದೆ. ಪ್ರೀತಿ ಮಾಡುವಂತೆ ಯುವಕ ಬಲವಂತ ಮಾಡಿದ್ದ. ತಮ್ಮನ ಜೊತೆ ವಾಕಿಂಗ್ ಮಾಡುತ್ತಿದ್ದ ವೇಳೆ ಆ್ಯಸಿಡ್ ದಾಳಿ ನಡೆದಿದೆ. ಸಾರ್ವಜನಿಕರು ಮಿಂಟೋ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಡಗಣ್ಣು ಭಾಗಕ್ಕೆ ಗಂಭೀರ ಗಾಯವಾಗಿದೆ. ಇನ್ನು ಆರೋಪಿ ಕನಕಪುರ ಸಿವಾಸಿ, ಕನಕಪುರದ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. 22 ವರ್ಷದ ಆರೋಪಿ ಸುಮಂತ್, ಕಳೆದ ಒಂದು ವರ್ಷದಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಐಪಿಸಿ ಸೆಕ್ಷನ್ 326(ಎ)ಹಾಗೂ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ ಎಂದಿದ್ದರು.

ಇದನ್ನೂ ಓದಿ:ಬೆಂಗಳೂರು: ನನ್ನ ಮಗಳಿಗೆ ಆದ ನೋವು ಬೇರೆ ಯಾರಿಗೂ ಆಗಬಾರದು; ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆಯ ತಾಯಿಯ ಕಣ್ಣೀರು

ಕಣ್ಣಿನ ಪರೀಕ್ಷೆ ಮಾಡುವಾಗ ಕಣ್ಣಿನ ಕಪ್ಪುಗುಡ್ಡೆಗೆ ತೊಂದರೆ ಆಗಿದೆ

ಮಿಂಟೋ ಹಾಸ್ಪಿಟಲ್​ನ ವೈದ್ಯಕೀಯ ಅಧ್ಯಕ್ಷೆ ಡಾಕ್ಟರ್ ಕಲ್ಪನ ಬಾಲಕಿ ಚಿಕಿತ್ಸೆ ಸಂಬಂಧ ಪ್ರತಿಕ್ರಿಯೆ ನೀಡಿದ್ದರು. ನಿನ್ನೆ(ಫೆ.17) ರಾತ್ರಿ ಸುಮಾರು ಒಂಬತ್ತು ಗಂಟೆಯಲ್ಲಿ ಸಂತ್ರಸ್ತೆ ಹುಡುಗಿ ಕಣ್ಣಿನ ಸಮಸ್ಯೆ ಎಂದು ಬಂದಿದ್ದಾರೆ. ಮೊದಲು ರಾಮನಗರ ಹಾಸ್ಪಿಟಲ್​ನಲ್ಲಿ ತೋರಿಸಿ ಬಂದಿದ್ದು, ರಾಸಾಯನಿಕವನ್ನು ಮುಖಕ್ಕೆ ಎಸೆದಿದ್ದಾರೆ ಎನ್ನಲಾಗಿದೆ. ನಾವು ಕಣ್ಣಿನ ಪರೀಕ್ಷೆ ಮಾಡುವಾಗ ಕಣ್ಣಿನ ಕಪ್ಪುಗುಡ್ಡೆಗೆ ತೊಂದರೆ ಆಗಿದೆ ಎಂದು ತಿಳಿದು ಬಂದಿದೆ. ರಾಸಾಯನಿಕ ಪರಿಣಾಮವಾಗಿ ಪಾರದರ್ಶಕತೆ ಕಳೆದು, ಸದ್ಯ ಕಣ್ಣು 20% ಹಾನಿ ಆಗಿದೆ. ಹಾಗೆ ಕಣ್ಣಿನ ಸುತ್ತ ಮುತ್ತ ಚರ್ಮ ಕೂಡ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಸದ್ಯ ಆ್ಯಸಿಡ್ ಅಥವಾ ಯಾವ ರಾಸಾಯನಿಕ ಎನ್ನುವುದು ಗೊತ್ತಾಗ್ತಿಲ್ಲ ಎಂದು ಮಾಹಿತಿ ನೀಡಿದ್ದರು.

ನನ್ನ ಮಗಳಿಗೆ ಆದ ನೋವು ಬೇರೆ ಯಾರಿಗೂ ಆಗಬಾರದು ಎಂದ ಸಂತ್ರಸ್ಥೆ ತಾಯಿ

ಸುಮಂತ್ ಎಂಬಾತ ನನ್ನ ಮಗಳಿಗೆ ಬೆದರಿಕೆ ಹಾಕಿದ್ದನು, ನಿನ್ನೆ(ಫೆ.17) ಬೆಳಗ್ಗೆಯಿಂದಲೂ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದ. ಮಧ್ಯಾಹ್ನ ನಮ್ಮ ಮನೆಗೆ ಬಂದು ಕಲ್ಲಿಂದ ಹೊಡೆದಿದ್ದು, ಅದು ನನ್ನ ಮಗಳಿಗೆ ಜಸ್ಟ್​ ಮಿಸ್​ ಆಗಿತ್ತು. ನನ್ನ ಜೊತೆಗೆ ಇರಬೇಕೆಂದು ನನ್ನ ಪುತ್ರಿಗೆ ಬೆದರಿಕೆ ಹಾಕಿದ್ದನು. ಆಗ ನನ್ನ ಮಗಳು ಮತ್ತು ಮಗ ಹುಡುಗನ ಹತ್ತಿರಕ್ಕೆ ಹೋಗಿದ್ದಾರೆ. ಈ ವೇಳೆ ಕಾಲಿನ ಮೇಲೆ ಬಿದ್ದು ಕ್ಷಮೆ ಕೇಳಬೇಕು ಎಂದು ಆತ ಹೆದರಿಸಿದ್ದಾನೆ, ಹುಡುಗನ ಕಾಲಿಗೆ ಬೀಳುವ ಸಮಯದಲ್ಲಿ ಆ್ಯಸಿಡ್​​ ಹಾಕಿದ್ದಾನೆ. ನನ್ನ ಮಗಳಿಗೆ ಆದ ನೋವು ಬೇರೆ ಯಾರಿಗೂ ಆಗಬಾರದು. ಜೊತೆಗೆ ಆ್ಯಸಿಡ್​ ಎರಚಿದ ಹುಡುಗನಿಗೆ ಕಾನೂನಿನಡಿ ಶಿಕ್ಷೆ ಆಗಬೇಕು ಎಂದು ಆ್ಯಸಿಡ್ ದಾಳಿಗೊಳಗಾದ ಬಾಲಕಿ ತಾಯಿ ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ