ಪಾಗಲ್‌ ಪ್ರೇಮಿ ಹುಚ್ಚಾಟದಿಂದ ಆ್ಯಸಿಡ್‌ ದಾಳಿಗೊಳಗಾದ ಯುವತಿಯ ಪರಿಸ್ಥಿತಿ ಈಗ ಹೇಗಿದೆ? ವೈದ್ಯರು ನೀಡಿದ ಮಾಹಿತಿ ಏನು? ದಾಳಿಕೋರನ ಬಗ್ಗೆ ಪೊಲೀಸ್ ಮಾಹಿತಿ ಎನಿದೆ?

ಪಾಗಲ್‌ ಪ್ರೇಮಿ ಹುಚ್ಚಾಟದಿಂದ ಆ್ಯಸಿಡ್‌ ದಾಳಿಗೊಳಗಾದ ಯುವತಿಯ ಪರಿಸ್ಥಿತಿ ಈಗ ಹೇಗಿದೆ? ವೈದ್ಯರು ನೀಡಿದ ಮಾಹಿತಿ ಏನು? ದಾಳಿಕೋರನ ಬಗ್ಗೆ ಪೊಲೀಸ್ ಮಾಹಿತಿ ಎನಿದೆ?
ಆ್ಯಸಿಡ್ ದಾಳಿ ನಡೆಸಿದ ಜಾಗ

ಆಸಿಡ್ ದಾಳಿಗೆ ಒಳಗಾದ ಯುವತಿಯ ಸ್ಥಿತಿ ಬಗ್ಗೆ ಸೆಂಟ್ ಜಾನ್ ಆಸ್ಪತ್ರೆಯ CMO ಮಾಹಿತಿ ನೀಡಿದ್ದಾರೆ. ಇದುವರೆಗೂ ಯುವತಿಗೆ ಎರಡು ಬಾರಿ ಆಪರೇಷನ್ ಮಾಡಲಾಗಿದೆ. ಇಂತಹ ಸ್ಥಿತಿಯಲ್ಲಿ ಯುವತಿಗೆ ಜ್ವರ ಬಂದರೆ ಪರಿಸ್ಥಿತಿ ಕ್ರಿಟಿಕಲ್ ಆಗುತ್ತದೆ. ಜ್ವರ ಬಂದರೆ ಯುವತಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ ಎಂದರು.

TV9kannada Web Team

| Edited By: Ayesha Banu

May 09, 2022 | 6:09 PM

ಬೆಂಗಳೂರು: ಪಾಗಲ್‌ಪ್ರೇಮಿ ನಾಗೇಶ್‌ ಯುವತಿ ಮೇಲೆ ಌಸಿಡ್‌ ಎರಚಿ ಎಸ್ಕೇಪ್‌ ಆಗಿ ಎರಡು ವಾರ ಆಗ್ತಾ ಬಂತು ಆದ್ರೆ ಇನ್ನೂ ಆರೋಪಿ ಪೊಲೀಸರ ಬಲೆಗೆ ಬಿದ್ದಿಲ್ಲ. ಯುವತಿ ದೇಹದಲ್ಲಿ ಆ್ಯಸಿಡ್ ಎರಚಿದ ಗಾಯ ಇನ್ನೂ ಹಸಿಹಸಿಯಾಗಿದೆ. ಪೋಷಕರ ಕಣ್ಣಂಚು ಇನ್ನೂ ಒದ್ದೆಯಾಗಿವೆ. ಆಸ್ಪತ್ರೆಯಲ್ಲಿರೋ ಯುವತಿ ಕ್ಷಣ ಕ್ಷಣಕ್ಕೂನರಕ ಯಾತನೆ ಅನುಭವಿಸ್ತಿದ್ದಾಳೆ. ಆದ್ರೆ ಯುವತಿಯ ಈ ಸ್ಥಿತಿಗೆ ಕಾರಣವಾಗಿರೋ ಆರೋಪಿ ಮಾತ್ರ ಇನ್ನೂ ಬಲೆಗೆ ಬಿದ್ದಿಲ್ಲ. ಇದುವರೆಗೂ ಆರೋಪಿಯ ಸುಳಿವು ಕೂಡ ಸಿಕ್ಕಿಲ್ಲ. ಸದ್ಯ ಆಸಿಡ್ ದಾಳಿಗೆ ಒಳಗಾದ ಯುವತಿಯ ಸ್ಥಿತಿ ಬಗ್ಗೆ ಸೆಂಟ್ ಜಾನ್ ಆಸ್ಪತ್ರೆಯ CMO ಮಾಹಿತಿ ನೀಡಿದ್ದಾರೆ.

ಯುವತಿ ಚಿಕಿತ್ಸೆ ಬಗ್ಗೆ ಮಾತನಾಡಿರುವ ಸೆಂಟ್ ಜಾನ್ ಆಸ್ಪತ್ರೆಯ CMO ಅರವಿಂದ್ ಕಸ್ತೂರಿ, ಇದುವರೆಗೂ ಯುವತಿಗೆ ಎರಡು ಬಾರಿ ಆಪರೇಷನ್ ಮಾಡಲಾಗಿದೆ. ಹಾಗೆ ಎರಡು ಬಾರಿ ಡ್ರೆಸ್ ಸಿಂಗ್ ಕೂಡ ಮಾಡಲಾಗಿದೆ. ಪೆಶೆಂಟ್ ಇನ್ನೂ ICU ನಲ್ಲಿಯೇ ಇದ್ದಾರೆ. ಯುವತಿಗೆ ಬಿಪಿ ಎಲ್ಲವೂ ನಾರ್ಮಲ್ ಆಗಿದೆ. ಆದರೆ ಇಂತಹ ಸ್ಥಿತಿಯಲ್ಲಿ ಯುವತಿಗೆ ಜ್ವರ ಬಂದರೆ ಪರಿಸ್ಥಿತಿ ಕ್ರಿಟಿಕಲ್ ಆಗುತ್ತದೆ. ಜ್ವರ ಬಂದರೆ ಯುವತಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಸದ್ಯ ಯುವತಿಗೆ ICU ನಲ್ಲಿಯೇ ಪ್ಲಾಸ್ಟಿಕ್ ಸರ್ಜರಿ ಮತ್ತು ಸರ್ಜರಿಯ ತಂಡ ನೋಡಿಕೊಳ್ಳುತ್ತಿದೆ. ಒಂದು ತಿಂಗಳ ಕಾಲ ಯುವತಿ ಹಾಸ್ಪಿಟಲ್ ನಲ್ಲಿ ಇರಬೇಕಾಗುತ್ತದೆ. ಯುವತಿಗೆ ಆಸಿಡ್ ಅಟ್ಯಾಕ್ ನಿಂದಾಗಿ ದೇಹದಲ್ಲಿ 36% ಬರ್ನ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿ ನಾಗೇಶ್ಗಾಗಿ ಪೊಲೀಸರ ಹುಡುಕಾಟ ಆರೋಪಿ ನಾಗೇಶ್‌ನನ್ನ ಪೊಲೀಸರು ಇನ್ನಿಲ್ಲದಂತೆ ಹುಡುಕಾಡ್ತಿದ್ದಾರೆ. ರಾಜ್ಯ ರಾಜ್ಯ ಸುತ್ತಿ ತಡಕಾಡ್ತಿದ್ದಾರೆ. ಮಠ, ಮಂದಿರ, ರೈಲ್ವೇ ನಿಲ್ದಾಣ ಸೇರಿದಂತೆ ಹುಡುಕಾಡದ ಜಾಗವಿಲ್ಲ. ಆದ್ರೆ ಆತನ ಬಗೆಗಿನ ಒಂದೇ ಒಂದು ಸುಳಿವು ಕೂಡ ಸಿಗ್ತಿಲ್ಲ. ಸದ್ಯ ಆರೋಪಿ ಪತ್ತೆಗಾಗಿ ನಾಗೇಶನ ಭಾವಚಿತ್ರ ಇರುವ ಕರಪತ್ರ ಹಂಚ್ತಿದ್ದು, ಪೊಲೀಸರು ವಿಡಿಯೋ ಮಾಡಿ‌ ಶೇರ್ ಮಾಡ್ತಿದ್ದಾರೆ. ಅಲ್ಲದೇ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ವಾಂಟೆಡ್ ಬೋರ್ಡ್ ಹಾಕ್ತಿದ್ದಾರೆ.

ಯುವತಿ ಫೋಟೋವನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಯುವತಿಯನ್ನ ಏಳು ವರ್ಷದಿಂದ ಒನ್‌ ವೇ ಲವ್ ಮಾಡ್ತಿದ್ದ ನಾಗೇಶ್, ಯುವತಿಯ ಭಾವಚಿತ್ರವನ್ನ ತನ್ನ ಬಳಿ ಇಟ್ಕೊಂಡಿದ್ದ. ಪಾಸ್ ಪೋರ್ಟ್ ಸೈಜ್ ಫೋಟೊವನ್ನು ತನ್ನ ರೂಮ್ ನಲ್ಲಿ ಇಟ್ಕೊಂಡಿದ್ದು ಪೊಲೀಸರು ಆತನ ಮನೆ ಪರಿಶೀಲಿಸಿದಾಗ ಗೊತ್ತಾಗಿದೆ. ಹಾಗಿದ್ರೆ ಈ ಫೋಟೊ ಈತನಿಗೆ ಸಿಕ್ಕಿದ್ದಾದರೂ ಹೇಗೆ? ಈತನಿಗೆ ಕೊಟ್ಟಿದ್ದಾದರೂ ಯಾರು ಅನ್ನೋದು ಆತ ಸಿಕ್ಕ ಬಳಿಕವಷ್ಟೇ ಗೊತ್ತಾಗಲಿದೆ.

ಬೆಂಗಳೂರು ಆ್ಯಸಿಡ್​ ದಾಳಿಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada