ಬೆಂಗಳೂರು: ಬೀದಿ ಬದಿ ಅಂಗಡಿಗಳ ತೆರವು; ಹೃದಯಾಘಾತದಿಂದ ವ್ಯಾಪಾರಿ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 09, 2023 | 3:12 PM

ಜಯನಗರದಲ್ಲಿ ಬೀದಿ ಬದಿ ಅಂಗಡಿಗಳ ತೆರವು ಕಾರ್ಯಾಚರಣೆ ವೇಳೆ ಓರ್ವ ವ್ಯಾಪಾರಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಕೃಷ್ಣ(49) ಮೃತ ವ್ಯಕ್ತಿ. ಜಯನಗರ (Jayanagara) ದಲ್ಲಿ ಕಳೆದ 25 ವರ್ಷಗಳಿಂದ ತಾಯಿ ರತ್ನಮ್ಮ ಜೊತೆ ಮೃತ ಕೃಷ್ಣ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದ.

ಬೆಂಗಳೂರು: ಬೀದಿ ಬದಿ ಅಂಗಡಿಗಳ ತೆರವು; ಹೃದಯಾಘಾತದಿಂದ ವ್ಯಾಪಾರಿ ಸಾವು
ಜಯನಗರ
Follow us on

ಬೆಂಗಳೂರು, ನ.09: ಜಯನಗರದಲ್ಲಿ ಬೀದಿ ಬದಿ ಅಂಗಡಿಗಳ ತೆರವು ಕಾರ್ಯಾಚರಣೆ ವೇಳೆ ಓರ್ವ ವ್ಯಾಪಾರಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಕೃಷ್ಣ(49) ಮೃತ ವ್ಯಕ್ತಿ. ಜಯನಗರ (Jayanagara) ದಲ್ಲಿ ಕಳೆದ 25 ವರ್ಷಗಳಿಂದ ತಾಯಿ ರತ್ನಮ್ಮ ಜೊತೆ ಮೃತ ಕೃಷ್ಣ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದ. ಆದರೆ, ಅಧಿಕಾರಿಗಳು ಇವರ ವ್ಯಾಪಾರಕ್ಕೆ ಅವಕಾಶ ನೀಡದ ಹಿನ್ನಲೆ ಮನನೊಂದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನು ಈ ಘಟನೆ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ವಿವರ

ಹೌದು, ನವೆಂಬರ್​​​​​ 07 ರಂದು ಬಿಬಿಎಂಪಿ ಮಾರ್ಷಲ್‌ಗಳ ತಂಡ ಸ್ಥಳಕ್ಕೆ ಆಗಮಿಸಿ, ಜೆಸಿಬಿ‌ ಮೂಲಕ ಜಯನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಇದ್ದ ಬೀದಿಬದಿ ಅಂಗಡಿಗಳನ್ನು ತೆರವು ಮಾಡಲಾಗಿತ್ತು. ಫುಟ್​​ಪಾತ್​​ನಲ್ಲಿದ್ದ ಅಕ್ರಮ ಶೆಡ್​, ಬಟ್ಟೆ ಅಂಡಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರವುಗೊಳಿಸಿತ್ತು. ಆ ಮೂಲಕ ಪಾದಚಾರಿಗಳ ಮಾರ್ಗ ಸುಗಮಗೊಳಿಸಲಾಗಿತ್ತು. ಈ ಹಿನ್ನಲೆ ಬೀದಿಬದಿ ವ್ಯಾಪಾರಿಗಳು ಅತಂತ್ರ ಸ್ಥಿತಿಯಲ್ಲಿದ್ದು, ಅಂಗಡಿಗಳ ತೆರವು ಕಾರ್ಯಕ್ಕೆ  ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಜಯನಗರ: ಬೀದಿಬದಿ ಅಂಗಡಿಗಳ ತೆರವು: ಬಿಬಿಎಂಪಿ ವಿರುದ್ಧ ವ್ಯಾಪಾರಸ್ಥರ ಆಕ್ರೋಶ

ಬಳಿಕ ಈ ಕುರಿತು ಮಾತನಾಡಿದ್ದ ಉಸ್ತುವಾರಿ ಅಧಿಕಾರಿ ಸೋಮಶೇಖರ್​,  ‘ಸುಮಾರು 200 ಅನಧಿಕೃತ ಮಳಿಗೆಗಳನ್ನು ತೆಗೆದುಹಾಕಲಾಗಿದೆ. ಈ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ತಿಳಿಸಿ ಫುಟ್ ಪಾತ್ ತೆರವು ಮಾಡಬೇಕು ಎಂದು 6 ತಿಂಗಳ ಹಿಂದೆ ಹೇಳಲಾಗಿತ್ತು. ಬಳಿಕ ಸುಮಾರು ಮೂರು ತಿಂಗಳ ಹಿಂದೆ ಮತ್ತೆ ಎಚ್ಚರಿಕೆ ನೀಡಿಲಾಗಿತ್ತು. ಅಷ್ಟೇ ಅಲ್ಲ, ನವೆಂಬರ್ 4 ರಂದು ನಾವು ಈ ಪ್ರದೇಶದಲ್ಲಿ ತೆರೆದ ಮೈಕ್ ಬಳಸಿ, ಅಕ್ರಮ ಮಳಿಗೆಗಳನ್ನು ತೆರವುಗೊಳಿಸುವುದಾಗಿ ಹೇಳಿದ್ದೇವು. ಆ ಹಿನ್ನೆಲೆ ನಾವು ಫುಟ್‌ಪಾತ್‌ಗಳಲ್ಲಿನ ಅಕ್ರಮ ಅಂಗಡಿಗಳನ್ನು ನೆಲಸಮಗೊಳಿಸಿದ್ದೇವೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Thu, 9 November 23