ಬೆಂಗಳೂರು, ನ.26: ರಾಜ್ಯ ರಾಜಧಾನಿಯಲ್ಲಿ ನಿನ್ನೆಯಿಂದ ಆರಂಭವಾದ ಬೆಂಗಳೂರು ಕಂಬಳವು (Bengaluru Kambala) ಇಂದು ಕೊನೆಗೊಳ್ಳಲಿದೆ. ಭಾನುವಾರ ರಜಾದಿನವಾಗಿರುವುದರಿಂದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಬಳ ವೀಕ್ಷಣೆಗೆ ಆಗಮಿಸುತ್ತಿದ್ದು, ಭರ್ಜರಿ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಹೊಟೆಲ್ ಅಸೋಸಿಯೇಷನ್ ಉಪಧ್ಯಕ್ಷ ಮಧುಕರ್ ಶೆಟ್ಟಿ, ಕೊನೆಯ ದಿನಕ್ಕೆ ಭರ್ಜರಿ ಚಿಕನ್ ಊಟದ ವ್ಯವಸ್ಥೆ ಮಾಡಲಾಗಿದೆ. ಕಂಬಳ ಓಡಿಸುವ ಕ್ರಿಡಾಪಟುಗಳಿಗೆ ನಾನ್ ವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ. ನೆನ್ನೆ ಒಂದೇ ದಿನ 1 ಲಕ್ಷ ಜನ ಊಟ ಮಾಡಿದ್ದಾರೆ. ಇವತ್ತು ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ. ಹೀಗಾಗಿ ಹೆಚ್ಚಿನ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರು ಕಂಬಳ 2ನೇ ದಿನ: ನಟ ದರ್ಶನ ಭಾಗಿ ಸಾಧ್ಯತೆ, ಅರ್ಜುನ್ ಜನ್ಯರಿಂದ ಸಂಗೀತ ರಸ ಸಂಜೆ
ಇಂದು ಮಧ್ಯಹ್ನಕ್ಕೆ ಕುಂದಾಪುರ ಚಿಕನ್, ದೋಸೆ, ಬಾಲ್ಡ್ ರೈಸ್, ವೈಟ್ ರೈಸ್ ಇರಲಿದೆ. ಮಧ್ಯರಾತ್ರಿಯವರೆಗೂ ಊಟದ ವ್ಯವಸ್ಥೆ ಇರಲಿದೆ. ಇವತ್ತು ಊಟಕ್ಕೆ ಬರುವ ಜನರಿಗೆ ಗೊಂದಲ ಆಗದಂತೆ ಸ್ವಯಂ ಸೇವಕರನ್ನ ನೇಮಿಸಿದ್ದೇವೆ ಎಂದರು.
ಬೆಂಗಳೂರು ಕಂಬಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಾಖಲೆಯ ಪ್ರಮಾಣದಲ್ಲಿ ವೀಕ್ಷಕರು ಆಗಮಿಸುತ್ತಿದ್ದಾರೆ. ನಿನ್ನೆ ಒಂದೇ ದಿನ 2.30 ಲಕ್ಷ ಜನರು ಕೋಣಗಳ ಓಟದ ಸ್ಪರ್ಧೆಯನ್ನು ವೀಕ್ಷಣೆ ಮಾಡಿದ್ದಾರೆ. ನಿನ್ನೆ ಬೆಳಿಗ್ಗೆಯಿಂದ ರಾತ್ರಿಯಿಡಿ ಕಂಬಳ ವೀಕ್ಷಣೆ ಮಾಡಿದ್ದಾರೆ.
ಮಧ್ಯರಾತ್ರಿ 12 ಗಂಟೆ ನಂತರವೂ ನಡೆದ ಕಂಬಳ ಕ್ರೀಡೆಯನ್ನು ವೀಕ್ಷಿಸಲು ಸಾವಿರಾರು ಜನರು ನೆರೆದಿದ್ದು ಅಚ್ಚರಿಯೇ ಸರಿ. ರಾತ್ರಿಪೂರ್ತಿ ಕಂಬಳದ ಅಭಿಮಾನಿಗಳು ಕಂಬಳ ನೋಡಿದ್ದು, ಪುಡ್ ಕಾರ್ನರ್ ಹೌಸ್ ಪುಲ್ ಆಗಿದ್ದವು. ಕೋಣ ಕಟ್ಟುವ ಸ್ಥಳದಲ್ಲೂ ಜನಸಂದಣಿ ಉಂಟಾಗಿತ್ತು.
ಕಂಬಳ ಗದ್ದೆಯ ಬಳಿಯೂ ಜನ ಜಂಗುಳಿ ಇತ್ತು. ಇಂದು ಕೂಡ 3 ಲಕ್ಷ ಜನಕ್ಕೂ ಹೆಚ್ಚು ಜನ ಕಂಬಳಕ್ಕೆ ಬರುವ ಸಾಧ್ಯತೆ ಇದೆ ಎಂದು ಬೆಂಗಳೂರು ಕಂಬಳ ಸಮಿತಿ ಗೌರವಧ್ಯಕ್ಷ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ