ಬೆಂಗಳೂರು: ಕೆ.ಆರ್.ಪುರಂನ ಗಂಗಶೆಟ್ಟಿ ಕೆರೆ ಸಮೀಪ ಅಕ್ರಮವಾಗಿ ಲೇಔಟ್ ನಿರ್ಮಾಣಕ್ಕೆ ಯತ್ನಿಸಲಾಗುತ್ತದೆ ಎಂದು ದೂರಿ ಸ್ಥಳೀಯರು ಪ್ರತಿಭಟನೆ ನಡೆಸಿ ನಿರ್ಮಿಸಿದ್ದ ಲೇಔಟ್ನ್ನು ಧ್ವಂಸಗೊಳಿಸಿದ್ದಾರೆ. ಕಂಡೂ ಕಾಣದಂತಿರುವ ಅಧಿಕಾರಿಗಳು ಕೆ.ಆರ್.ಪುರ ತಾಲ್ಲೂಕು ಕಚೇರಿ ಎದುರೇ ಇರುವ ಗಂಗಶೆಟ್ಟಿ ಕೆರೆಯಿದ್ದು, ಕೆರೆ ಸುತ್ತ 150 ಮೀಟರ್ ಲೇಔಟ್ ನಿರ್ಮಿಸುವಂತಿಲ್ಲ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಲೇಔಟ್ ನಿರ್ಮಾಣ ಮಾಡಲಾಗಿದೆ. ಸುಮಾರು 23.8 ಎಕರೆ ವಿಸ್ತೀರ್ಣವಿರುವ ಗಂಗಶೆಟ್ಟಿ ಕೆರೆಯಿದೆ. ಸಾರ್ವಜನಿಕರ ಎದುರೇ ಸರ್ವೇ ಮಾಡುತ್ತೇನೆಂದು ಭರವಸೆ ನೀಡಿದ್ದ ಅಧಿಕಾರಿಗಳು ಇದುವರೆಗೂ ಸರ್ವೆ ಮಾಡಿಲ್ಲ. ಅಧಿಕಾರಿಗಳ ಕುಮ್ಮಕ್ಕಿನಿಂದ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯ ಪ್ರತಿಭಟನಾಕಾರರು ಆರೋಪಿಸಿದ್ದಾರೆ.s
ಲೇಔಟ್ ನಿರ್ಮಿಸುತ್ತಿರುವ ಪಕ್ಕದ ಜಾಗದಲ್ಲಿ ಬಿಎಂಟಿಸಿ ಅಧ್ಯಕ್ಷರ ಸೈಟ್ ಇದೆ. ಅಕ್ರಮವಾಗಿ ಕೆರೆಯ ಜಾಗ ಒತ್ತುವರಿ ಮಾಡಿಕೊಳ್ಳಲು ಸಂಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸರ್ವೆ ಮಾಡಿ ಕೆರೆ ಉಳಿಸಲು ಸಾರ್ವಜನಿಕರು ಒತ್ತಾಯಿಸಿದ್ದು, ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್, ಮಹಿಳಾ ಸಂಘಟನೆ ಗೌರಮ್ಮ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಕಳೆದ 15 ದಿನಗಳ ಹಿಂದೆ ಇದೇ ವಿಚಾರವಾಗಿ ಪ್ರತಿಭಟನೆ ನಡೆಸಲಾಗಿದೆ.
ಇದನ್ನೂ ಓದಿ:
ಮಳೆ ಬಂದರೆ ಬೆಂಗಳೂರು ಜನರಿಗೆ ಸ್ವಿಮ್ಮಿಂಗ್ ಪೂಲ್ ಭಾಗ್ಯ
Breast Cancer: ಯುವತಿಯರಲ್ಲಿ ಹೆಚ್ಚಾಗುತ್ತಿದೆ ಸ್ತನ ಕ್ಯಾನ್ಸರ್, ಇಡೀ ದೇಶದಲ್ಲಿಯೇ ಬೆಂಗಳೂರು ನಂ2