ಬೆಂಗಳೂರು: ಜೋರಾದ ಮಳೆಯ ನಡುವೆ ಸುಲಿಗೆ ಪ್ರಕರಣದ ಆರೋಪಿಗಳನ್ನು ಹಿಡಿಯಲು ಯಲಹಂಕ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕತ್ತಲಲ್ಲಿ ಓಡಿಹೋಗಿ ಪಾಳು ಬಾವಿಗೆ ಓರ್ವ ಆರೋಪಿ ಬಿದ್ದ ಘಟನೆ ನಡೆದಿದೆ. ಬಾವಿಗೆ ಬಿದ್ದ ಆರೋಪಿಯನ್ನು ಸುರಿಯುತ್ತಿರುವ ಧಾರಾಕಾರ ಮಳೆಯನ್ನೂ ಲೆಕ್ಕಿಸದೇ ಪೊಲೀಸರು ರಕ್ಷಿಸಿದ್ದಾರೆ. ಬಾವಿಗೆ ಇಳಿಯಲು ಮೆಟ್ಟಿಲು ಇಲ್ಲದಿದ್ದರೂ ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಗಿಳಿದು ಕಾನ್ಸ್ ಟೇಬಲ್ ಶಿವಕುಮಾರ್ ಆರೋಪಿಯನ್ನು ರಕ್ಷಿಸಿದ್ದಾರೆ. ಬಳಿಕ ಆರೋಪಿಗೆ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಇಮ್ರಾನ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಿಂದ 65 ಸಾವಿರ ರೂ ಬೆಲೆಬಾಳುವ ಚಿನ್ನದ ಚೈನ್, ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಜಫ್ತಿಗೊಳಿಸಲಾಗಿದೆ.
ಕಳೆದ 3ನೇ ತಾರೀಕು ಮಧ್ಯಾಹ್ನ 3:50 ರ ವೇಳೆರೆಡ್ಡಿ ಶೇಖರ್ ಎಂಬುವವರು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಮಾರುತಿ ನಗರದ ಬಳಿ ಹಿಂಬಾಲಿಸಿಕೊಂಡು ಬಂದು ಆರೋಪಿಗಳು ಅಡ್ಡಗಟ್ಟಿ ಹೊಡೆದು ಸುಲಿಗೆ ಮಾಡಿದ್ದರು. ಕತ್ತಿನಲ್ಲಿದ್ದ ಚಿನ್ನದ ಸರ, ಮೊಬೈಲ್, 3 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆಂದು ಯಲಹಂಕ ಠಾಣೆಗೆ ರೆಡ್ಡಿ ಶೇಖರ್ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಹೊಸ ತಂಡ ರಚಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಘಟನಾ ಸ್ಥಳದ ಸುತ್ತಮುತ್ತ ಸಿಸಿಟಿವಿಯಲ್ಲಿ ಆರೋಪಿಗಳ ಓಡಾಟ ಸೆರೆಯಾಗಿತ್ತು. ಇದೇ ಸಿಸಿಟಿವಿಗಳ ಆಧರಿಸಿ ಆರೋಪಿಗಳ ಹೆಜ್ಜೆ ಗುರುತು ಪತ್ತೆಹಚ್ಚಲಾಗಿದ್ದು ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ:
ಲಾಕಪ್ ಚಿಲಕ ತೆಗೆದು ಅತ್ಯಾಚಾರ ಆರೋಪಿ ಪರಾರಿ! ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಘಟನೆ
Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?