ಲಾಕಪ್ ಚಿಲಕ ತೆಗೆದು ಅತ್ಯಾಚಾರ ಆರೋಪಿ ಪರಾರಿ! ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಘಟನೆ
ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇದನ್ನು ಪೊಲೀಸರ ಬೇಜವಾಬ್ದಾರಿ ಅನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ. 26 ವರ್ಷದ ಆರೋಪಿಯೊಬ್ಬ ತಾನು ಬಂಧಿಯಾಗಿದ್ದ ಲಾಕಪ್ನ ಚಿಲಕವನ್ನು ತೆಗೆದು ಹೊರಬಂದು ಸಲೀಸಾಗಿ ಪರಾರಿಯಾಗಿದ್ದಾನೆ!
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇದನ್ನು ಪೊಲೀಸರ ಬೇಜವಾಬ್ದಾರಿ ಅನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ. 26 ವರ್ಷದ ಆರೋಪಿಯೊಬ್ಬ ತಾನು ಬಂಧಿಯಾಗಿದ್ದ ಲಾಕಪ್ನ ಚಿಲಕವನ್ನು ತೆಗೆದು ಹೊರಬಂದು ಸಲೀಸಾಗಿ ಪರಾರಿಯಾಗಿದ್ದಾನೆ!
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನದ ಆರೋಪದ ಮೇಲೆ ಯುವಕನನ್ನು ಬಂಧಿಸಿ, ಬಾಳೆಹೊನ್ನೂರು ಪೊಲೀಸ್ ಠಾಣೆಯ ಲಾಕಪ್ ನಲ್ಲಿರಿಸಲಾಗಿತ್ತು. ಪ್ರಕರಣ ಸಂಬಂಧ ಆರೋಪಿ ನಿಜಾಮ್ (26) ಬಂಧನಕ್ಕೀಡಾಗಿ, ಠಾಣೆಯ ಲಾಕಪ್ ನಲ್ಲಿದ್ದ. ಸಿಬ್ಬಂದಿ ಇಲ್ಲದ ಸಮಯ ನೋಡಿ ಚಾಕಚತ್ಯೆಯಿಂದ ಲಾಕಪ್ ಬೀಗ ತೆಗೆದು ಪರಾರಿಯಾಗಿದ್ದಾನೆ. ಒಟ್ಟಿನಲ್ಲಿ, ಪೋಸ್ಕೋ ಆರೋಪಿ ಬಾಳೆಹೊನ್ನೂರು ಪೊಲೀಸರಿಗೆ ಮುಳುಗುನೀರು ತಂದಿಟ್ಟಿದ್ದಾನೆ.
ಲಾಕಪ್ ಚಿಲಕ ತೆಗೆದು ಪರಾರಿಯಾಗಿದ್ದ ಆರೋಪಿ ಬಂಧನ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆಯ ಲಾಕಪ್ನಲ್ಲಿದ ಆರೋಪಿ ನಿನ್ನೆ ಪರಾರಿಯಾಗಿದ್ದ. 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನದ ಆರೋಪದ ಮೇಲೆ ಪ್ರಕರಣ ಸಂಬಂಧ ಆರೋಪಿ ನಿಜಾಮ್(26) ನನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಪರಾರಿಯಾಗಿದ್ದ ಆರೋಪಿಯನ್ನು ಕೊಪ್ಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಿಬ್ಬಂದಿ ಇಲ್ಲದ ಸಮಯ ನೋಡಿ ಲಾಕಪ್ನಿಂದ ಪರಾರಿಯಾಗಿರುವ ಆರೋಪಿ ಮತ್ತೆ ಜೈಲು ಸೇರಿದ್ದಾನೆ.
ಇದನ್ನೂ ಓದಿ: ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಮಕ್ಕಳು ಪತ್ತೆ! ನಿಟ್ಟುಸಿರು ಬಿಟ್ಟ ಪೋಷಕರು: ಪತ್ತೆಯಾಗಿದ್ದು ಹೇಗೆ? ಇದನ್ನೂ ಓದಿ: ವಿವಾಹಿತ ಗ್ರಾಮ ಲೆಕ್ಕಿಗನೊಂದಿಗೆ ತಹಶೀಲ್ದಾರ್ ಮದುವೆ; ಚಿಕ್ಕಮಗಳೂರು ಡಿಸಿಯಿಂದ ಗೀತಾಗೆ ನೋಟಿಸ್
Published On - 9:04 am, Mon, 11 October 21