Tomato Rate: ಟೊಮೆಟೊ ದರದಲ್ಲಿ ಮತ್ತೆ ಏರಿಕೆ! ರೇಟ್ ಹೀಗಿದೆ
ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ರೈತರು ಬೆಳೆದ ತರಕಾರಿ ನಾಶವಾಗುತ್ತಿದೆ. ಅಲ್ಲದೇ ಹೊರ ರಾಜ್ಯಗಳಿಂದ ಬರುತ್ತಿದ್ದ ಟೊಮೆಟೊ ಸದ್ಯ ಬರುತ್ತಿಲ್ಲ.
ಬೆಂಗಳೂರು: ಟೊಮೆಟೊ ದರ (Tomato Rate) ಮತ್ತೆ ಏರಿಕೆಯಾಗಿದ್ದು, ಜನ ಸಾಮಾನ್ಯರಿಗೆ ಹೊಡೆತ ಬಿದ್ದಿದೆ. ನಿನ್ನೆಗಿಂತ ಇಂದಿನ ದರದಲ್ಲಿ ಏರಿಕೆ ಕಂಡಿದೆ. ನಿನ್ನೆ 1 ಕೆ.ಜಿ ಟೊಮೆಟೊ ಬೆಲೆ 60 ರಿಂದ 70 ರೂ ವರೆಗೆ ಇತ್ತು. ಇಂದು ಮತ್ತೆ ದರ ಹೆಚ್ಚಳವಾಗಿದೆ. ಒಂದು ಕೆ.ಜಿ ಟೊಮೆಟೊ ಬೆಲೆ 70ರೂ. ನಿಂದ 80ರೂ.ಗೆ ಏರಿಕೆಯಾಗಿದೆ. ಪ್ರತಿ ತರಕಾರಿ ಮೇಲೂ ಕೆ.ಜಿಗೆ 10 ರಿಂದ 20 ರೂಪಾಯಿ ಏರಿಕೆಯಾಗಿದೆ. ಕೆ ಆರ್ ಮಾರ್ಕೆಟ್ನಲ್ಲಿ ಸುನಾಮಿ ಟೊಮೆಟೊ ದರ 30 ರಿಂದ 40 ರೂ. ಇದೆ. ಮಳೆ ಹೀಗೆ ಮುಂದುವರೆದರೆ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗುತ್ತದೆ.
ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ರೈತರು ಬೆಳೆದ ತರಕಾರಿ ನಾಶವಾಗುತ್ತಿದೆ. ಅಲ್ಲದೇ ಹೊರ ರಾಜ್ಯಗಳಿಂದ ಬರುತ್ತಿದ್ದ ಟೊಮೆಟೊ ಸದ್ಯ ಬರುತ್ತಿಲ್ಲ. ಹೀಗಾಗಿ ಒಂದು ಕೆ.ಜಿಗೆ 10ರಿಂದ 15 ರೂ. ಇದ್ದ ಟೊಮೆಟೊ ದರ ದಿಢೀರನೆ ಏರಿಕೆಯಾಗಿದೆ. ಯಶವಂತಪುರ ಎಪಿಎಂಸಿಯಲ್ಲಿ 20-22 ಕೆ.ಜಿಯ ಒಂದು ಬಾಕ್ಸ್ ಟೊಮೆಟೊ ದರ 1,200 ರಿಂದ 1,400ಕ್ಕೆ ಹೆಚ್ಚಳವಾಗಿದೆ.
ಆನ್ಲೈನ್ನಲ್ಲೂ ಒಂದು ಕೆ.ಜಿ ಟೊಮೆಟೊ ದರ 90 ರೂ. ದಾಟಿದೆ. ಉತ್ತಮ ಕ್ವಾಲಿಟಿಯ ಟೊಮೆಟೊ ಕೆಲವೆಡೆ ಮಾತ್ರ ಲಭ್ಯವಾಗಿದೆ. ಟೊಮೆಟೊ ಜೊತೆಗೆ ಕೆಲ ತರಕಾರಿ ಬೆಲೆಯೂ ಹೆಚ್ಚಳವಾಗಿದೆ. ಹೂವುಗಳ ದರದಲ್ಲೂ ಏರಿಕೆ ಕಂಡಿದೆ.
ನಿನ್ನೆ ತರಕಾರಿಗಿದ್ದ ದರ ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 30 ರಿಂದ 40 ರೂ ಹಸಿ ಮೆಣಸಿನಕಾಯಿ ಕೆ.ಜಿ 50 ರಿಂದ 70 ರೂ ಬೆಂಡೇಕಾಯಿ 40 ರಿಂದ 60 ರೂ ಹೂಕೋಸು ಕೆಜಿ 30 ರಿಂದ 40 ರೂ ಬದನೆಕಾಯಿ 30 ರಿಂದ 40 ರೂ ಹಾಗಲಕಾಯಿ 40 ರಿಂದ 50 ರೂ
ಇದನ್ನೂ ಓದಿ
Tomato Rate Increase: ದಿಢೀರ್ ಏರಿಕೆ ಕಂಡ ಟೊಮೆಟೊ; ಕೆ.ಜಿಗೆ 60 ರಿಂದ 70 ರೂ