ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಮಕ್ಕಳು ಪತ್ತೆ! ನಿಟ್ಟುಸಿರು ಬಿಟ್ಟ ಪೋಷಕರು: ಪತ್ತೆಯಾಗಿದ್ದು ಹೇಗೆ?

TV9 Digital Desk

| Edited By: ಸಾಧು ಶ್ರೀನಾಥ್​

Updated on:Oct 11, 2021 | 9:51 AM

ನಾಪತ್ತೆಯಾಗಿದ್ದ 7 ಮಕ್ಕಳ ಪೈಕಿ ಮೂವರು ಪತ್ತೆಯಾಗಿದ್ದಾರೆ. ಪರೀಕ್ಷಿತ್, ಕಿರಣ್ ಮತ್ತು ನಂದನ್ ಎಂಬ ಮಕ್ಕಳು ಪತ್ತೆಯಾಗಿದ್ದಾರೆ. ಸಧ್ಯಕ್ಕೆ ಅವರು ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿದ್ದಾರೆ. ಆದರೆ ತ್ತೊಂದು ಪ್ರಕರಣದಲ್ಲಿ ನಾಪತ್ತೆಯಾಗಿರುವ ಉಳಿದ ಮಕ್ಕಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಮಕ್ಕಳು ಪತ್ತೆ! ನಿಟ್ಟುಸಿರು ಬಿಟ್ಟ ಪೋಷಕರು: ಪತ್ತೆಯಾಗಿದ್ದು ಹೇಗೆ?
ಓದಿನಲ್ಲಿ ಆಸಕ್ತಿ ಇಲ್ಲವೆಂದು ಮನೆ ತೊರೆದಿದ್ದ ಮಕ್ಕಳು ಪತ್ತೆ! ನಿಟ್ಟುಸಿರು ಬಿಟ್ಟ ಪೋಷಕರು
Follow us


ಬೆಂಗಳೂರು: ಓದಿನಲ್ಲಿ ಆಸಕ್ತಿ ಇಲ್ಲ. ಹಾಗಾಗಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತೇವೆ ಎಂದು ಪರಸ್ಪರ ಮಾತನಾಡಿಕೊಂಡು, ಗುರಿ ಹಾಕಿಕೊಂಡು ರಾಜಧಾನಿ ಬೆಂಗಳೂರಿನಿಂದ ಮನೆ ತೊರೆದಿದ್ದ ಮಕ್ಕಳು ಪತ್ತೆಯಾಗಿದ್ದಾರೆ. ಇದರೊಂದಿಗೆ 2 ದಿನಗಳ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಪತ್ತೆಯಾಗಿದ್ದು ಹೇಗೆ?
ನಾಪತ್ತೆಯಾಗಿದ್ದ 7 ಮಕ್ಕಳ ಪೈಕಿ ಮೂವರು ಪತ್ತೆಯಾಗಿದ್ದಾರೆ. ಪರೀಕ್ಷಿತ್, ಕಿರಣ್ ಮತ್ತು ನಂದನ್ ಎಂಬ ಮಕ್ಕಳು ಪತ್ತೆಯಾಗಿದ್ದಾರೆ. ಸಧ್ಯಕ್ಕೆ ಅವರು ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿದ್ದಾರೆ. ಆದರೆ ತ್ತೊಂದು ಪ್ರಕರಣದಲ್ಲಿ ನಾಪತ್ತೆಯಾಗಿರುವ ಉಳಿದ ಮಕ್ಕಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಆಪತ್ಬಾಂಧವನಾದ ಪೇಪರ್ ಆಯುವ ವ್ಯಕ್ತಿ
ನಾಪತ್ತೆಯಾಗಿದ್ದ ಪರೀಕ್ಷಿತ್, ಕಿರಣ್ ಮತ್ತು ನಂದನ್ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸದ್ಯ ಪತ್ತೆಯಾಗಿದ್ದಾರೆ. ವ್ಆಯಸಂಗ ಇಷ್ಟವಿಲ್ಲ; ಕಬಡ್ಡಿಯಲ್ಲಿ ಆಸಕ್ತಿಯಿದೆ. ಕ್ರೀಡೆಯಲ್ಲೇ ಸಾಧನೆ ಮಾಡುತ್ತೇವೆ ಎಂದು ಮನೆ ಬಿಟ್ಟಿದ್ದ ಈ ಮೂವರೂ ಮಕ್ಕಳು ಆನಂದರಾವ್ ಸರ್ಕಲ್‌ ಬಳಿ ನಡೆದು ಹೋಗುತ್ತಿದ್ದರು. ಈ ವೇಳೆ ಪೇಪರ್ ಆಯುವ ವ್ಯಕ್ತಿಯಿಂದ ಮಾಹಿತಿ ಲಭ್ಯವಾಗಿದೆ.

ತಕ್ಷಣ ಆ ವ್ಯಕ್ತಿ ಉಪ್ಪಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದ. ವಿಷಯ ತಿಳಿದು ಬೀಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ಬಳಿಕ ಮಕ್ಕಳನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದ್ದಾರೆ. ಮಿಸ್ಸಂಗ್​ ಮಕ್ಕಳು ಇವರೇ ಎಂಬುದು ಖಾತರಿಯಾಗುತ್ತಿದ್ದಂತೆ, ಆ ಮಕ್ಕಳಿಂದ ಫೋನ್​ ನಂಬರ್ ತೆಗೆದುಕೊಂಡು ಅವರ ಪೋಷಕರಿಗೆ ಪೊಲೀಸರು ಕರೆ ಮಾಡಿದ್ದಾರೆ. ನಾಪತ್ತೆಯಾಗಿರುವ ನಿಮ್ಮ ಮಕ್ಕಳು ಪತ್ತೆಯಾಗಿದ್ದಾರೆ. ಸದ್ಯ ನಮ್ಮ ಠಾಣೆಯಲ್ಲಿ ಇದ್ದಾರೆ. ಬನ್ನೀ ಎಂದು ಉಪ್ಪಾರಪೇಟೆ ಪೊಲೀಸರು ಕರೆ ಮಾಡಿ, ಸಮಾಧಾನಕರ ಸುದ್ದಿಯನ್ನು ಪೋಷಕರಿಗೆ ತಲುಪಿಸಿದ್ದಾರೆ.

ಠಾಣೆಗೆ ಓಡೋಡಿ ಬಂದ ಪೋಷಕರು:
ವಿಷಯ ತಿಳಿದ ನಂದನ್ ಮತ್ತು ಪರೀಕ್ಷಿತ್ ಪೋಷಕರು ಉಪ್ಪಾರಪೇಟೆ ಠಾಣೆಗೆ ಓಡೋಡಿ ಬಂದಿದ್ದಾರೆ. ಪರೀಕ್ಷಿತ್ ತಂದೆ ವೇದಮೂರ್ತಿ ಮತ್ತು ನಂದನ್ ತಂದೆ ಮಂಜುನಾಥ್ ಠಾಣೆಯಲ್ಲಿ ಮಕ್ಕಳನ್ನು ಕಂಡು ಆನಂದಭಾಷ್ಪ ಸುರಿಸಿದ್ದಾರೆ.

ಮೈಸೂರಿನಲ್ಲಿ ದಸರಾ ನೋಡಿಕೊಂಡು ರಾತ್ರಿ ವಾಪಸ್ ಆಗಿದ್ದ ಮಕ್ಕಳು!
ಮೂವರೂ ಮಕ್ಕಳು ಶನಿವಾರ ಬೆಳಗ್ಗೆ 5.30ಕ್ಕೆ ಮನೆಯಿಂದ ಹೋಗಿದ್ದರು. ಜಾಗಿಂಗ್‌ಗೆ ಹೋಗಿಬರುವುದಾಗಿ ಮನೆಯಿಂದ ಹೊರಟಿದ್ದರು. ಮನೆಯಿಂದ ಬರುವಾಗ ತಲಾ 1,500 ರೂ. ತಂದಿದ್ದರು. ಮೊದಲು ಮಂಗಳೂರಿಗೆ ಹೋಗಲು ಪ್ಲ್ಯಾನ್ ಮಾಡಿದ್ದರು. ನಂತರ ಪ್ಲ್ಯಾನ್ ಬದಲಿಸಿ ಮೈಸೂರಿಗೆ ಹೋಗಿದ್ದರು. ಮೈಸೂರಿನಲ್ಲಿ ದಸರಾ ನೋಡಿಕೊಂಡು ನಿನ್ನೆ ರಾತ್ರಿ ವಾಪಸ್ ಆಗಿದ್ದಾರೆ. ನಿನ್ನೆ ರಾತ್ರಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಮಕ್ಕಳು ಬೆಳಗ್ಗೆ ಆನಂದರಾವ್ ಸರ್ಕಲ್‌ನಲ್ಲಿದ್ದಾಗ ಪತ್ತೆಯಾಗಿದ್ದಾರೆ.

ಆನಂದ್ ರಾವ್ ಸರ್ಕಲ್ ಬಳಿ ಪೇಪರ್ ಆಯುವ ವ್ಯಕ್ತಿ ಬಳಿ ಕೆಲಸ ಕೇಳಿದ್ದಾರೆ..
ಮೂವರೂ ಮಕ್ಕಳು ಮೈಸೂರು ಬಸ್ ಸ್ಟಾಪ್‌ನಲ್ಲಿ ಶನಿವಾರ ಇಡೀ ದಿನ ಉಳಿದುಕೊಂಡಿದ್ದಾರೆ. ಭಾನುವಾರ ಕೂಡ ಮೈಸೂರಿನಲ್ಲಿ ಕಾಲ ಕಳೆದಿದ್ದಾರೆ. ಮತ್ತೆ ಭಾನುವಾರ ರಾತ್ರಿ ಮೈಸೂರಿನಿಂದ ಟ್ರೈನ್ ಹತ್ತಿ, ಬೆಂಗಳೂರಿಗೆ ವಾಪಸಾಗಿದ್ದಾರೆ. ಬೆಳಗ್ಗೆ ಆನಂದ್ ರಾವ್ ಸರ್ಕಲ್ ಬಳಿ ಬಂದಿಳಿದಾಗ, ಪೇಪರ್ ಆಯುವ ವ್ಯಕ್ತಿಯ ಬಳಿ ಕೆಲಸ ಕೇಳಿದ್ದಾರೆ. ಆದರೆ ಆತ ಸಮಯಪ್ರಜ್ಞೆ ತೋರಿ ತಕ್ಷಣ ಪೊಲೀಸರಿಗೆ ಮಾಹಿತಿ‌ ನೀಡಿದ್ದಾನೆ.

ಆನಂದ್ ರಾವ್ ಸರ್ಕಲ್ ಗೆ ಬರುವ ಮುನ್ನ ಮೂವರೂ ಮಕ್ಕಳು ಕಂಠೀರವ ಸ್ಟೇಡಿಯಂ ಗೆ ಹೋಗಿದ್ದಾರೆ. ಅಲ್ಲಿನ ಸ್ಪೋರ್ಟ್ಸ್ ಎಲ್ಲವನ್ನು ನೋಡಿ ಬಂದಿದ್ದಾರೆ! ಅಲ್ಲಿ ಕಬಡ್ಡಿಗೆ ಸೇರಿಕೊಳ್ಳೋಣ ಎಂದೂ ಪರೀಕ್ಷಿತ್, ಕಿರಣ್, ನಂದನ್ ಮಾತುಕತೆ ನಡೆಸಿದ್ದಾರೆ. ಪ್ರಸ್ತುತ ಪತ್ತೆಯಾಗಿರುವ ಪರೀಕ್ಷಿತ್, ಕಿರಣ್ ಮತ್ತು ನಂದನ್ ಎಂಬ ಮಕ್ಕಳು ಬಾಗಲಗುಂಟೆ ನಿವಾಸಿಗಳು.

ಮತ್ತೊಂದು ಪ್ರಕರಣದಲ್ಲಿ ಆ ನಾಲ್ಕು ಮಕ್ಕಳು ಇನ್ನೂ ಪತ್ತೆಯಾಗಿಲ್ಲ:
ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದಾರೆ. ಸೋಲದೇವನಹಳ್ಳಿ ನಿವಾಸಿಗಳಾದ ರಾಯನ್, ವರ್ಷಿಣಿ, ಭೂಮಿ ಮತ್ತು ಚಿಂತನ್​ ಇನ್ನೂ ಪತ್ತೆಯಾಗಿಲ್ಲ. ಸೋಲದೇವನಹಳ್ಳಿ ಪೊಲೀಸರು ಇವರಿಗಾಗಿ ತಲಾಶೆ ನಡೆಸಿದ್ದಾರೆ. ಸೋಲದೇವನಹಳ್ಳಿ ಆಜುಬಾಜು ನಾಲ್ಕೂ ಮಕ್ಕಳ ಚಲನವಲನ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ರಾಯನ್, ವರ್ಷಿಣಿ, ಭೂಮಿ, ಚಿಂತನ್​ ಚಿಕ್ಕಬಾಣವರದ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ನಾಲ್ವರೂ ರೈಲಿನಲ್ಲಿ ಮಂಗಳೂರು ಕಡೆ ಪ್ರಯಾಣಿಸಿರುವುದಾಗಿ ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ.

Walking ಹೋಗಿ ಬರೋದಾಗಿ ಹೇಳಿ ಮನೆ ಬಿಟ್ಟಿದ್ದ ಮೂವರು ಮಕ್ಕಳು|Missing|Tv9Kannada

ಇದನ್ನೂ ಓದಿ:
ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಸ್ಪೋರ್ಟ್ಸ್​ನಲ್ಲಿ ಆಸಕ್ತಿಯಿದೆ ಎಂದು ಪತ್ರ ಬರೆದು ನಾಪತ್ತೆಯಾದ 7 ಮಕ್ಕಳು; ಪೊಲೀಸರಿಂದ ಶೋಧ

ಇದನ್ನೂ ಓದಿ:
ದೇವನಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ನಾಯಿಗಳ ದಾಳಿ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada