Bengaluru: ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಪೊಲೀಸರ ಬಲೆಗೆ
Crime News: ಟೆಕ್ಕಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರು. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಇದೀಗ ಹನಿಟ್ರ್ಯಾಪ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ.
ಬೆಂಗಳೂರು: ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್ ಗ್ಯಾಂಗ್ ಒಂದು ಬೆಂಗಳೂರಿನಲ್ಲಿ ಖಾಕಿ ಬಲೆಗೆ ಬಿದ್ದಿದೆ. ಈ ಸಂಬಂಧ ಐವರು ಮೈಕೋ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗಾರೆಪಾಳ್ಯ ನಿವಾಸಿಯನ್ನು ಗ್ಯಾಂಗ್ ಹನಿಟ್ರ್ಯಾಪ್ ಮಾಡಿತ್ತು. ಟೆಕ್ಕಿಯೋರ್ವನ ಬಳಿ ಕಾರು, ಮೊಬೈಲ್, ಹಣ ಸುಲಿಗೆ ಮಾಡಿತ್ತು. ಟೆಕ್ಕಿ, ಸೂಪರ್ ಮಾರ್ಕೆಟ್ಗೆ ತರಕಾರಿ ತರಲು ಹೋಗಿದ್ದಾಗ ಗ್ಯಾಂಗ್ನ ಮಹಿಳೆ ಟೆಕ್ಕಿಗೆ ಪರಿಚಯವಾಗಿದ್ದಳು. ಬಳಿಕ, ಕುಟುಂಬಸ್ಥರನ್ನ ಪರಿಚಯಿಸಲು ಮಹಿಳೆ ಕರೆದೊಯ್ದಿದ್ದಳು.
ಟೆಕ್ಕಿಯನ್ನು ಮನೆಗೆ ಕರೆದೊಯ್ದಿದ್ದ ಆರೋಪಿ ಮಹಿಳೆ, ಬಳಿಕ ಟೆಕ್ಕಿ ಮನೆಯ ರೂಮ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಯೋಜನೆಯಂತೆ ಮನೆಗೆ ನುಗ್ಗಿದ ನಾಲ್ವರು ಆರೋಪಿಗಳು ರೂಮ್ನಲ್ಲಿದ್ದ ಟೆಕ್ಕಿ ಫೋಟೋ ತೆಗೆದು ಬ್ಲ್ಯಾಕ್ಮೇಲ್ ಮಾಡಲು ತೊಡಗಿದ್ದರು. 10 ಲಕ್ಷ ರೂಪಾಯಿ ನೀಡುವಂತೆ ಯುವಕರು ಧಮ್ಕಿ ಹಾಕಿದ್ದರು. ಹಣ ನೀಡಲು ಒಪ್ಪದಿದ್ದ ವೇಳೆ ಗ್ಯಾಂಗ್ ಸುಲಿಗೆ ಮಾಡಿತ್ತು. ಟೆಕ್ಕಿ ಬಳಿ ಇದ್ದ ಐಷಾರಾಮಿ ಕಾರು, 37 ಸಾವಿರ ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಆರೋಪಿಗಳ ಗ್ಯಾಂಗ್ ಪರಾರಿಯಾಗಿತ್ತು. ಈ ಬಗ್ಗೆ ಟೆಕ್ಕಿ ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದರು. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿತ್ತು. ಇದೀಗ ಹನಿಟ್ರ್ಯಾಪ್ ಗ್ಯಾಂಗ್ ಖಾಕಿ ಬಲೆಗೆ ಬಿದ್ದಿದೆ.
ವಿಜಯಪುರ: ನಕಲಿ ಬಯೋ ಡೀಸೆಲ್ ಅಡ್ಡೆ ಮೇಲೆ ದಾಳಿ ನಕಲಿ ಬಯೋ ಡೀಸೆಲ್ ಮಾರಾಟ ಅಡ್ಡೆ ಮೇಲೆ ದಾಳಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಝಳಕಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದೆ. ಶೆಡ್ನಲ್ಲಿ ನಕಲಿ ಬಯೋ ಡೀಸೆಲ್ ಮಾರುತ್ತಿದ್ದ ತಂಡದ ಮೇಲೆ ದಾಳಿ ಮಾಡಲಾಗಿದೆ. ದಾಳಿ ನಡೆಯುತ್ತಲೇ ಸ್ಥಳದಿಂದ ಆರೋಪಿಗಳು ಪರಾರಿ ಆಗಿದ್ದಾರೆ. ನಕಲಿ ಬಯೋ ಡೀಸೆಲ್ ತಯಾರಿಕೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ನಾಪತ್ತೆ ಆಗಿರುವ 4 ಮಕ್ಕಳು ಮಂಗಳೂರಿನತ್ತ ಪ್ರಯಾಣಿಸಿರುವ ಶಂಕೆ; ಏನೇನು ತರಬೇಕು ಎಂದು ಮಾಡಿದ್ದ ಪಟ್ಟಿ ಲಭ್ಯ
ಇದನ್ನೂ ಓದಿ: Bengaluru: ಪಿಎಸ್ಐ ಕೆಲಸ ಕೊಡಿಸುವುದಾಗಿ ನಂಬಿಸಿ 18 ಲಕ್ಷ ರೂಪಾಯಿ ವಂಚನೆ
Published On - 5:01 pm, Mon, 11 October 21