Breast Cancer: ಯುವತಿಯರಲ್ಲಿ ಹೆಚ್ಚಾಗುತ್ತಿದೆ ಸ್ತನ ಕ್ಯಾನ್ಸರ್, ಇಡೀ ದೇಶದಲ್ಲಿಯೇ ಬೆಂಗಳೂರು ನಂ2
ಮದ್ಯಪಾನ ಹಾಗೂ ಧೂಮಪಾನ ಏರಿಸಿಕೊಳ್ಳುವ ಯುವತಿಯರಲ್ಲೇ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ಲೇಟ್ ಆಗಿ ಮದುವೆ ಮಾಡಿಕೊಳ್ಳುವ ಪ್ಲಾನ್, ಮಾರ್ಡನ್ ಜೀವನ ಶೈಲಿ, ಯಂಗ್ ಆ್ಯಂಡ್ ಬ್ಯೂಟಿಪುಲ್ ಆಗಿ ಕಾಣಲು ಪಾಶ್ಚಿಮಾತ್ಯ ಡಯಟ್ ಪ್ಲಾನ್, ಮಾರ್ಡನ್ ಡೈಯಟ್ ಪ್ಲಾನ್ಗಳು ಸ್ತನ ಕ್ಯಾನ್ಸರ್ಗೆ ಕಾರಣವಾಗುತ್ತಿದೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಟಿನೇಜ್ ಹುಡಗಿಯರ ಜೀವ ತಗೆಯುತ್ತಿದೆ. ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಏರಿಕೆ ಕಂಡಿವೆ. ರಾಜ್ಯದಲ್ಲಿ ವಾರ್ಷಿಕ 9,800ಕ್ಕೂ ಹೆಚ್ಚು ಸ್ತನ ಕ್ಯಾನ್ಸರ್ನ ಹೊಸ ಪ್ರಕರಣಗಳು ದಾಖಲಾಗುತ್ತಿವೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಅಚ್ಚರಿಯ ವಿಷಯ ಎಂದರೆ ಸ್ತನ ಕ್ಯಾನ್ಸರ್ ಪ್ರಕರಣದ ಏರಿಕೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಇಡೀ ದೇಶದಲ್ಲಿಯೇ ನಂ2 ಸ್ಥಾನ ಪಡೆದಿದೆ.
ಮದ್ಯಪಾನ ಧೂಮಪಾನ ಏರಿಸಿಕೊಳ್ಳುವ ಯುವತಿಯರೇ ಹುಷಾರ್ ಮದ್ಯಪಾನ ಹಾಗೂ ಧೂಮಪಾನ ಏರಿಸಿಕೊಳ್ಳುವ ಯುವತಿಯರಲ್ಲೇ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದೆ. ಲೇಟ್ ಆಗಿ ಮದುವೆ ಮಾಡಿಕೊಳ್ಳುವ ಪ್ಲಾನ್, ಮಾರ್ಡನ್ ಜೀವನ ಶೈಲಿ, ಯಂಗ್ ಆ್ಯಂಡ್ ಬ್ಯೂಟಿಪುಲ್ ಆಗಿ ಕಾಣಲು ಪಾಶ್ಚಿಮಾತ್ಯ ಡಯಟ್ ಪ್ಲಾನ್, ಮಾರ್ಡನ್ ಡೈಯಟ್ ಪ್ಲಾನ್ಗಳು ಸ್ತನ ಕ್ಯಾನ್ಸರ್ಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ಅಂಶ ಕಿದ್ವಾಯ ಆಸ್ಪತ್ರೆಯ ಸ್ತನ ಕ್ಯಾನ್ಸರ್ ಕುರಿತು ನಡೆಸಿರುವ ಅಧ್ಯಯನದಲ್ಲಿ ಬಯಲಾಗಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 9 ರಿಂದ 10 ಸಾವಿರ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಸದ್ಯ 26 ರಿಂದ 30 ಸಾವಿರ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಸಿಲಿಕಾನ್ ಸಿಟಿಯಲ್ಲಿ 1,688 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗಿದೆ. 4500 ರೋಗಿಗಳು ಚಿಕಿತ್ಸೆ ಪಡಯುತ್ತಿದ್ದಾರೆ. ಸರಾಸರಿ ರಾಜ್ಯದಲ್ಲಿ ಒಂದು ಲಕ್ಷ ಮಹಿಳೆಯರಲ್ಲಿ 24 ರಿಂದ 26 ಜನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿಯೇ 2018 ರಲ್ಲಿ ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ 34 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿತ್ತು. ಸದ್ಯ ಸಿಲಿಕಾನ್ ಸಿಟಿಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳವಾಗಿದೆ. ಪ್ರತಿ ಒಂದು ಲಕ್ಷ ಮಹಿಳೆಯರಲ್ಲಿ 40 ಮಂದಿಯಲ್ಲಿ ಈ ಕ್ಯಾನ್ಸರ್ ಪತ್ತೆಯಾಗುತ್ತಿದೆ. ದೇಶದ ಮಹಾನಗರಗಳ ಪೈಕಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ಸ್ತನ ಕ್ಯಾನ್ಸರ್ಗೆ ಅಪಾಯಕಾರಿ ಅಂಶಗಳು ಯಾವವು? -ಮಹಿಳೆಯರಲ್ಲಿ ಹೆಚ್ಚಾದ ಮದ್ಯಪಾನ ಹಾಗೂ ಧೂಮಪಾನ. ತಡವಾಗಿ ಮದುವೆಯಾಗುವುದು ಸ್ತನ ಕ್ಯಾನ್ಸರ್ಗೆ ಕಾರಣವಾಗಬಹುದು. -ಪಾಶ್ಚಿಮಾತ್ಯ ಜೀವನ ಶೈಲಿ ಹಾಗೂ ಡಯಟ್ ಪ್ಲಾನ್ -ಅತಿ ಬೇಗನೇ ಋತುಸ್ರಾವ -ತಡವಾದ ಋತುಬಂಧ -ಸಂತಾನೋತ್ಪತ್ತಿ ಅಂಶಗಳು -ಗರ್ಭನಿರೋಧಕ ಬಳಕೆ -ಹಾರ್ಮೋನು ಬದಲಾವಣೆಯ ಚಿಕಿತ್ಸೆ -ಬೊಜ್ಜು, ತೂಕ ಹೆಚ್ಚಾಗುವುದು ಹಾಗೂ ಕೊಬ್ಬಿನ ಅಂಶ ಸ್ತನ ಕ್ಯಾನ್ಸರ್ಗೆ ಕಾರಣ
ಕರ್ನಾಟಕದಲ್ಲಿ ಕ್ಯಾನ್ಸರ್ ಪ್ರಕರಣ ಅಂಕಿ ಅಂಶ ಹೊಸ ಕ್ಯಾನ್ಸರ್ ಪ್ರಕರಣಗಳು -78,384 ಪ್ರಚಲಿತ ಕ್ಯಾನ್ಸರ್ ಪ್ರಕರಣಗಳು -1,74,000 ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳು -43,640 ಸ್ತನ ಕ್ಯಾನ್ಸರ್ ಪ್ರಕರಣಗಳು (ಒಟ್ಟಾರೆ ಮಹಿಳೆಯರ ಕ್ಯಾನ್ಸರ್ ಪ್ರಕರಣಗಳಲ್ಲಿ 22%) -9,837 ಪ್ರಚಲಿತ ಸ್ತನ ಕ್ಯಾನ್ಸರ್ ಪ್ರಕರಣಗಳು -26,560
ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಅಭಿಮಾನಿಗೆ ಅತ್ಯಮೂಲ್ಯ ಕ್ಷಣಗಳನ್ನು ನೀಡಿದ ಪ್ರಭಾಸ್; ನಟನ ದೊಡ್ಡತನಕ್ಕೆ ಮೆಚ್ಚುಗೆ