ಬೆಂಗಳೂರಿನಲ್ಲಿ ಮಳೆ ಅವಾಂತರ; ಏರ್ಪೋರ್ಟ್ ರೋಡ್​ನಲ್ಲಿ ಕೆಟ್ಟು ನಿಂತ 20ಕ್ಕೂ ಹೆಚ್ಚು ಕಾರುಗಳು

ರಾತ್ರಿ ಸುರಿದ ಮಳೆಗೆ ಏರ್ಪೋರ್ಟ್ ಸುತ್ತಾಮುತ್ತ ಅವಾಂತರ ಸೃಷ್ಟಿಯಾಗಿತ್ತು. ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ.

ಬೆಂಗಳೂರಿನಲ್ಲಿ ಮಳೆ ಅವಾಂತರ; ಏರ್ಪೋರ್ಟ್ ರೋಡ್​ನಲ್ಲಿ ಕೆಟ್ಟು ನಿಂತ 20ಕ್ಕೂ ಹೆಚ್ಚು ಕಾರುಗಳು
More than 20 cars were damaged at Devanahalli Airport Road due to heavy rain

ದೇವನಹಳ್ಳಿ: ರಾತ್ರಿ ಸುರಿದ ಭಾರಿ ಮಳೆಯಿಂದ ಟ್ಯಾಕ್ಸಿ ಮತ್ತು ಕಾರುಗಳಿಗೆ ಹಾನಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಾಮುತ್ತ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಇಂಜಿನ್ಗಳಿಗೆ ನೀರು ನುಗ್ಗಿ ಸುಮಾರು 20ಕ್ಕೂ ಹೆಚ್ಚು ಕಾರುಗಳು ಕೆಟ್ಟು ನಿಂತಿವೆ. ಏರ್ಪೋರ್ಟ್ ರೋಡ್​ನಲ್ಲಿ ಕಾರುಗಳು ಕೆಟ್ಟು ನಿಂತಿವೆ. ಭಾರಿ ಮಳೆಯಿಂದ ಟರ್ಮಿನಲ್ ಮುಂಭಾಗ ನೀರು ನಿಂತಿತ್ತು. ಟರ್ಮಿನಲ್ ಬಳಿ 2 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು.

ಸಹಜ ಸ್ಥಿತಿಗೆ ಮರಳಿದ ವಿಮಾನ ನಿಲ್ದಾಣ
ರಾತ್ರಿ ಸುರಿದ ಮಳೆಗೆ ಏರ್ಪೋರ್ಟ್ ಸುತ್ತಾಮುತ್ತ ಅವಾಂತರ ಸೃಷ್ಟಿಯಾಗಿತ್ತು. ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ. ರಸ್ತೆಯಲ್ಲಿ ನಿಂತಿದ್ದ ಭಾರಿ ಪ್ರಮಾಣದ ನೀರು ಕಡಿಮೆಯಾಗಿದೆ. ರಾತ್ರಿ ಏರ್ಪೋಟ್ ಸಿಬ್ಬಂದಿ ನೀರು ಹರಿದು ಹೋಗಲು ಕಾಲುವೆ ಮಾಡಿ ನೀರು ಖಾಲಿ ಮಾಡಿದ್ದಾರೆ. ಇದೀಗ ವಾಹನ ಸವಾರರು ಸರಾಗವಾಗಿ ಏರ್ಪೋರ್ಟ್​ಗೆ ತೆರಳಬಹುದು.

ಮಣ್ಣು ಕುಸಿದು ಕ್ಯಾಂಟರ್ ಪಲ್ಟಿ
ಧಾರಾಕಾರ ಮಳೆಗೆ ಮಣ್ಣು ಕುಸಿದು ಕ್ಯಾಂಟರ್ ಪಲ್ಟಿಯಾಗಿದೆ. ಈ ಘಟನೆ ದೇವನಹಳ್ಳಿ ಹೊರವಲಯ ಸೂಲಿಬೆಲೆ ರಸ್ತೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಕ್ಯಾಂಟರ್ನಲ್ಲಿದ್ದ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಮಳೆಗೆ ಕುಸಿದ ಕಾಂಪೌಂಡ್
ನಿರಂತರ ಮಳೆಯಿಂದ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಕಾಂಪೌಂಡ್ ಕುಸಿದಿದೆ. ರಸ್ತೆಗೆ ಅಡ್ಡಲಾಗಿ ಮಣ್ಣು, ಕಲ್ಲು ಕುಸಿದು ಬೀಳುವುದನ್ನು ತಡೆಯಲು ಸಪೋರ್ಟ್ಗೆ ಮಣ್ಣಿನ ಚೀಲ ಇಡಲಾಗಿದೆ. ಕಾಂಪೌಂಡ್​ಗೆ ಹೊಂದಿಕೊಂಡ ಮನೆ ಕುಸಿಯುವ ಸಾಧ್ಯತೆಯಿದೆ. ಯಾವುದೇ ಸಮಯದಲ್ಲಾದರೂ ಮನೆ ಕುಸಿಯುವ ಆತಂಕ ಇದೆ. ಹೀಗಾಗಿ ನಿವಾಸಿಗಳು ಲಗೇಜ್ ಸಮೇತ ಮನೆ ಖಾಲಿ ಮಾಡಿದ್ದಾರೆ.

ಮಳೆ ಅವಾಂತರಕ್ಕೆ ವ್ಯಕ್ತಿ ಬಲಿ
ಬೆಂಗಳೂರು ನಗರದಲ್ಲಿ ಮಳೆ ಅವಾಂತರಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ. ವಿದ್ಯುತ್ ಪ್ರವಹಿಸಿ ವೆಂಕಟೇಶ್(56) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ನೀರು ಮನೆಗೆ ನುಗ್ಗಿದೆ. ವೆಂಕಟೇಶ್ ಮನೆಯಲ್ಲಿದ್ದ ನೀರನ್ನು ಹೊರಹಾಕುತ್ತಿದ್ದರು. ಈ ವೇಳೆ ಸ್ವಿಚ್ ಬೋರ್ಡ್ ಮುಟ್ಟಿದ್ದ ವೆಂಕಟೇಶ್ ಮೃತಪಟ್ಟಿದ್ದಾರೆ.

20 ವರ್ಷದ ಬಳಿಕ ವಿಮಾನ ನಿಲ್ದಾಣ ಹಿಂಭಾಗದ ಕೆರೆ ಭರ್ತಿ
ಇನ್ನು ಮಳೆಯಿಂದ ವಿಮಾನ ನಿಲ್ದಾಣ ಹಿಂಭಾಗದ ಕೆರೆ ಭರ್ತಿಯಾಗಿದೆ. 20 ವರ್ಷದ ಬಳಿಕ ತುಂಬಿ ಬೆಟ್ಟಕೋಟೆ ಕೆರೆ ಕೋಡಿ ಹರಿದಿದೆ. ಕೆರೆ ತುಂಬಿ ಅಕ್ಕಪಕ್ಕದ ಹೂ ತೋಟಗಳಿಗೆ ನೀರು ನುಗ್ಗಿದೆ.

ಇದನ್ನೂ ಓದಿ

Bengaluru Rain: ಬೆಂಗಳೂರಿನಲ್ಲಿ ಭಾರಿ ಮಳೆ; ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

Shopian Encounter: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

Read Full Article

Click on your DTH Provider to Add TV9 Kannada