Bengaluru Rain: ಬೆಂಗಳೂರಿನಲ್ಲಿ ಭಾರಿ ಮಳೆ; ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

ಒಂದು ವಾರದಿಂದ ಸಿಲಿಕಾನ್‌ ಸಿಟಿಯಲ್ಲಿ ಆರ್ಭಟಿಸುತ್ತಿರೋ ವರುಣ ನಿನ್ನೆ ಸಹ ಅಬ್ಬರಿಸಿದ್ದಾನೆ. ಸಂಜೆ ವೇಳೆಗೆ ಸಣ್ಣಗೆ ಆರಂಭವಾಗಿ ತಡರಾತ್ರಿವರೆಗೂ ಸುರಿದ ಮಳೆಯಿಂದಾಗಿ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ.

Bengaluru Rain: ಬೆಂಗಳೂರಿನಲ್ಲಿ ಭಾರಿ ಮಳೆ; ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು
ಬೆಂಗಳೂರಿನಲ್ಲಿ ಭಾರಿ ಮಳೆ; ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆ ಅವಾಂತರಕ್ಕೆ ಕಾರಣವಾಗಿದೆ. ಭಾರಿ ಮಳೆ ಹಿನ್ನೆಲೆ ಮನೆಗೆ ನೀರು ನುಗ್ಗಿ ವ್ಯಕ್ತಿ ಬಲಿಯಾಗಿದ್ದಾರೆ. ವಿದ್ಯುತ್ ಪ್ರವಹಿಸಿ ವೆಂಕಟೇಶ್(56) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆ.ಪಿ.ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭಾರಿ ಮಳೆಗೆ ನೀರು ಮನೆಗೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ನೀರನ್ನು ಹೊರಹಾಕುತ್ತಿದ್ದ ವೇಳೆ ವೆಂಕಟೇಶ್ ಸ್ವಿಚ್ ಬೋರ್ಡ್ ಮುಟ್ಟಿದ್ದಾರೆ. ಆಗ ಸ್ವಿಚ್ ಬೋರ್ಡ್‌ನಲ್ಲಿ ವಿದ್ಯುತ್ ಪ್ರವಹಿಸ್ತಿದ್ದ ಹಿನ್ನೆಲೆ ವೆಂಕಟೇಶ್ ಮೃತಪಟ್ಟಿದ್ದಾರೆ.

ಸಿಡಿಲು ಬಡಿದು ರೈತ ಸಾವು
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಸೈದಾಪುರ ಗ್ರಾಮದ ಬಳಿ ಸಿಡಿಲು ಬಡಿದು ರೈತ ಮೃತಪಟ್ಟ ಘಟನೆ ನಡೆದಿದೆ. ಸಿಡಿಲಿಗೆ ರೈತ ಸಂಗಪ್ಪ ಫಕೀರಪ್ಪ ವಾರದ(45) ಬಲಿಯಾಗಿದ್ದಾರೆ. ಹೊಲದಿಂದ ಮನೆಗೆ ಬರುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಲ್ಲಿ ವರುಣನ ಮಹಾಪ್ರತಾಪ
ಒಂದು ವಾರದಿಂದ ಸಿಲಿಕಾನ್‌ ಸಿಟಿಯಲ್ಲಿ ಆರ್ಭಟಿಸುತ್ತಿರೋ ವರುಣ ನಿನ್ನೆ ಸಹ ಅಬ್ಬರಿಸಿದ್ದಾನೆ. ಸಂಜೆ ವೇಳೆಗೆ ಸಣ್ಣಗೆ ಆರಂಭವಾಗಿ ತಡರಾತ್ರಿವರೆಗೂ ಸುರಿದ ಮಳೆಯಿಂದಾಗಿ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಬೆಳಗ್ಗೆಯಿಂದಲೂ ಇದ್ದ ಮೋಡ ಕವಿದ ವಾತಾವರಣ ಸಂಜೆ ವೇಳೆಗೆ ಜನರಿಗೆ ಬಿಗ್ ಶಾಕ್ ನೀಡಿತ್ತು. ಸಂಜೆ ಟೈಂನಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಸಿಲಿಕಾನ್ ಸಿಟಿ ವಾಹನ ಸವಾರರು ತತ್ತರಿಸಿ ಹೋಗಿದ್ರು. ಕೆ.ಆರ್‌.ಮಾರುಕಟ್ಟೆ, ಟೌನ್‌ಹಾಲ್‌ ಮುಂಭಾಗ, ಕೆ.ಆರ್‌.ವೃತ್ತ, ಶಿವಾಜಿನಗರ, ರಾಜಾಜಿನಗರ, ಮೈಸೂರು ರಸ್ತೆ, ತುಮಕೂರು ರಸ್ತೆ, ಓಕಳಿಪುರಂ ರಸ್ತೆ ಅಂಡರ್‌ಪಾಸ್‌, ಮೇಖ್ರಿ ವೃತ್ತ ಸೇರಿದಂತೆ ಹಲವು ರಸ್ತೆಗಳ ಮೇಲೆ ಮಳೆ ನೀರು ಹೊಳೆಯಂತೆ ಹರಿಯುತ್ತಿತ್ತು. ಇದರಿಂದ ವಾಹನ ಸವಾರು ಸರ್ಕಸ್ ಮಾಡುತ್ತಲೇ ಸಂಚಾರ ಮಾಡಿದ್ರು. ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲಿ ಮಳೆಯಲ್ಲೇ ಸಂಚರಿಸಿದ್ರು.

ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆಗೆ ಶೇಷಾದ್ರಿಪುರಂನ ಶಿರೂರು ಪಾರ್ಕ್ ರಸ್ತೆಯಲ್ಲಿ ಮರವೊಂದು ಧರೆಗುರುಳಿತ್ತು. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ರಿಂದ ಮಂತ್ರಿಮಾಲ್ ಕಡೆಗೆ ಸಾಗುವ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆಯಿಂದಾಗಿ ಕೆ.ಹೆಚ್.ಬಿ ಕಾಲೋನಿ ಬಳಿ ಆರೋಗ್ಯ ಇಲಾಖೆಯ ಕಾಂಪೌಂಡ್ ಕುಸಿದು ಬಸ್ ಸ್ಟಾಂಡ್‌ಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಕಾಫಿನಾಡಿನಲ್ಲಿ ನಿಲ್ಲದ ಮಳೆ, ಸಾಮಾನ್ಯ ಜನಜೀವನ ಅಸ್ತವ್ಯಸ್ತ, ಕಾಫಿ ಬೆಳೆಗಾರರಲ್ಲಿ ಆತಂಕ

Read Full Article

Click on your DTH Provider to Add TV9 Kannada