Shopian Encounter: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

Jammu and Kashmir: ಶೋಪಿಯಾನ್ ಜಿಲ್ಲೆಯ ತಲ್ರಾನ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಈ ಕುರಿತು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

Shopian Encounter: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Oct 12, 2021 | 7:47 AM

ಶೋಪಿಯಾನ್: ಜಮ್ಮು-ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ತಲ್ರಾನ್ ಗ್ರಾಮದಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಇಂದು ಮುಂಜಾನೆ ಹೊಡೆದುರುಳಿಸಿವೆ. ಇದರೊಂದಿಗೆ ಉಗ್ರರ ಬಳಿಯಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. CRPF, ಜಮ್ಮು & ಕಾಶ್ಮೀರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಮೃತಪಟ್ಟ ಮೂವರು ಉಗ್ರರಲ್ಲಿ ಒಬ್ಬ ಗಂದರ್‌ಬಾಲ್‌ನ ಮುಖ್ತಾರ್ ಶಾ ಎಂದು ಗುರುತಿಸಲಾಗಿದ್ದು, ಆತ ಬಿಹಾರದ ವ್ಯಾಪಾರಿ ವೀರೇಂದ್ರ ಪಾಸ್ವಾನ್‌ನನ್ನು ಹತ್ಯೆಗೈದು ಶೋಪಿಯಾನ್‌ಗೆ ಬಂದಿದ್ದ ಎಂದು ಕಾಶ್ಮೀರ ಐಜಿಪಿ ವಿಜಯ್‌ಕುಮಾರ್ ಮಾಹಿತಿ ನೀಡಿದ್ದಾರೆ.

ಎಎನ್​ಐ ಹಂಚಿಕೊಂಡ ಮಾಹಿತಿ ಇಲ್ಲಿದೆ:

ಈ ಕುರಿತು ಆಲ್​ ಇಂಡಿಯಾ ರೇಡಿಯೋ (ಎಐಆರ್​) ಮಾಹಿತಿ ಹಂಚಿಕೊಂಡಿದ್ದು, ಶೋಪಿಯಾನ್ ಜಿಲ್ಲೆಯ ಇಮಾಮ್​ಸಾಹೇಬ್ ಪ್ರದೇಶದ ತಲ್ರಾನ್ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿರುವುದು ಲಷ್ಕರ್ ಎ ತಯ್ಯಬಾ ಸಂಘಟನೆಯ ಉಗ್ರರು ಎಂದು ತಿಳಿಸಿದೆ. ಈ ಕುರಿತ ಟ್ವೀಟ್ ಇಲ್ಲಿದೆ.

ಎಐಆರ್​ ಹಂಚಿಕೊಂಡಿರುವ ಟ್ವೀಟ್:

ಶೋಪಿಯಾನ್ ಜಿಲ್ಲೆಯ ಇಮಾಮ್ ಸಾಹೇಬ್ ಪ್ರದೇಶದ ತಲ್ರಾನ್ ಗ್ರಾಮದಲ್ಲಿ ಸೋಮವಾರ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.

ಇದನ್ನೂ ಓದಿ:

Poonch Encounter: ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಉಗ್ರರ ಗುಂಡೇಟಿನಿಂದ ಸೇನಾ ಅಧಿಕಾರಿ, ನಾಲ್ವರು ಯೋಧರು ಸಾವು

ಬೆಂಗಳೂರು: ಕಂಪೌಂಡ್ ಗೋಡೆ ಕುಸಿದು ಅದಕ್ಕೆ ಅಂಟಿಕೊಂಡಿರುವ ಮನೆಗಳಿಗೆ ಅಪಾಯ, ಮನೆಯಲ್ಲಿದ್ದವರ ಬದುಕು ಅತಂತ್ರ

Published On - 7:44 am, Tue, 12 October 21