ಲಖಿಂಪುರ ಖೇರಿ ಹಿಂಸಾಚಾರ: ಮೃತ ರೈತರಿಗೆ ಅಂತಿಮ ನಮನ ಸಲ್ಲಿಸಲು ಇಂದು ಶಹೀದ್​ ರೈತರ ದಿನ ಆಚರಣೆ

ಶಾಹೀದ್​ ಕಿಸಾನ್​ ದಿವಸ್​ ನಿಮಿತ್ತ, ಲಖಿಂಪುರ ಖೇರಿಯ ಸಾಹೀಬ್​ಜಾದಾ ಇಂಟರ್​ ಕಾಲೇಜಿನ ಎದುರು ಮೃತ ರೈತರಿಗೆ ಅಂತಿಮ್​ ಅರದಾಸ್​ ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ.

ಲಖಿಂಪುರ ಖೇರಿ ಹಿಂಸಾಚಾರ: ಮೃತ ರೈತರಿಗೆ ಅಂತಿಮ ನಮನ ಸಲ್ಲಿಸಲು ಇಂದು ಶಹೀದ್​ ರೈತರ ದಿನ ಆಚರಣೆ
ರೈತರ ಪ್ರತಿಭಟನೆ

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇಂದು ಹುತಾತ್ಮ ರೈತರ ದಿನವನ್ನು ಆಚರಿಸಲು ನಿರ್ಧರಿಸಿವೆ. ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಇಂದು ಶಹೀದ್​ ಕಿಸಾನ್​ ದಿವಸ್​ ಆಚರಣೆ ಮಾಡುತ್ತಿರುವುದಾಗಿ ಸಂಯುಕ್ತ ಕಿಸಾನ್​ ಮೋರ್ಚಾ ತಿಳಿಸಿದೆ.  ಈ ದಿನ ದೇಶಾದ್ಯಂತ ಇರುವ ವಿವಿಧ ರೈತ ಸಂಘಟನೆಗಳು, ಪ್ರಾರ್ಥನೆ, ಗೌರವ ಅರ್ಪಣೆ ಸಭೆಗಳನ್ನು ನಡೆಸಬೇಕು. ಸಂಜೆ ಕ್ಯಾಂಡಲ್​ ಲೈಟ್​ ಮೆರವಣಿಗೆ (ಮೇಣದ ಬತ್ತಿ ಹಿಡಿದು ಮೆರವಣಿಗೆ) ನಡೆಸಬೇಕು ಎಂದು ಕಿಸಾನ್​ ಮೋರ್ಚಾ ರೈತರಿಗೆ ಸೂಚಿಸಿದೆ. 

ಇಂದು ಶಹೀದ್​ ಕಿಸಾನ್​ ದಿವಸ್​ ನಿಮಿತ್ತ, ಲಖಿಂಪುರ ಖೇರಿಯ ಸಾಹೀಬ್​ಜಾದಾ ಇಂಟರ್​ ಕಾಲೇಜಿನ ಎದುರು ಮೃತ ರೈತರಿಗೆ ಅಂತಿಮ್​ ಅರದಾಸ್​(ಕೊನೇ ಪ್ರಾರ್ಥನೆ) ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ. ಈ ಪ್ರಾರ್ಥನೆಯಲ್ಲಿ ಸುಮಾರು 10 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದೂ ಸಂಯುಕ್ತ ಕಿಸಾನ್​ ಮೋರ್ಚಾ ತಿಳಿಸಿದೆ.  ಅದರಾಚೆಗೆ, ದೇಶದ ಪ್ರತಿಯೊಬ್ಬರೂ ಇಂದು ಸಂಜೆ 8 ಗಂಟೆಗೆ ತಮ್ಮ ಮನೆಯ ಹೊರಗೆ 5 ಮೇಣದ ಬತ್ತಿಗಳನ್ನು ಹಚ್ಚಬೇಕು ಎಂದು ಮನವಿ ಮಾಡಿದೆ.

ಇನ್ನು ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಆಶಿಶ್​ ಮಿಶ್ರಾರ ಪಾತ್ರವಿದೆ ಎಂದು ಅವರನ್ನು ಬಂಧಿಸಲಾಗಿದೆ. ಆದರೆ ಬೆಂಗಾವಲು ವಾಹನ ಕೇಂದ್ರ ಸಚಿವ ಅಜಯ್​ ಮಿಶ್ರಾರದ್ದು. ಅಷ್ಟಾದರೂ ಅಜಯ್​ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಅವರನ್ನು ಹುದ್ದೆಯಿಂದ ವಜಾಗೊಳಿಸಲಿಲ್ಲ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಅಜಯ್​ ಮಿಶ್ರಾ ತೇನಿಯವರನ್ನು ವಜಾಗೊಳಿಸದೆ ಇರುವುದು ಮೋದಿ ಸರ್ಕಾರಕ್ಕೆ ನಾಚಿಕೆಗೇಡು ಎಂದೂ ಹೇಳಿವೆ. ಅಕ್ಟೋಬರ್​ 15ರಂದು ಅಂದರೆ ವಿಜಯದಶಮಿಯಂದು ಬಿಜೆಪಿ ನಾಯಕರ ಪ್ರತಿಕೃತಿ ದಹನ ಮಾಡುವುದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ: ನೀವು ಕುಡಿಯುವ ಹಾಲು ಶುದ್ಧವಾಗಿದೆಯೇ? ಈ ಸರಳ ಮಾರ್ಗಗಳಿಂದ ಹಾಲಿನ ಕಲಬೆರಕೆಯನ್ನು ಕಂಡುಕೊಳ್ಳಿ

ಬೆಂಗಳೂರಿನಲ್ಲಿ ಮಳೆ ಅವಾಂತರ; ಏರ್ಪೋರ್ಟ್ ರೋಡ್​ನಲ್ಲಿ ಕೆಟ್ಟು ನಿಂತ 20ಕ್ಕೂ ಹೆಚ್ಚು ಕಾರುಗಳು

Read Full Article

Click on your DTH Provider to Add TV9 Kannada