ನೀವು ಕುಡಿಯುವ ಹಾಲು ಶುದ್ಧವಾಗಿದೆಯೇ? ಈ ಸರಳ ಮಾರ್ಗಗಳಿಂದ ಹಾಲಿನ ಕಲಬೆರಕೆಯನ್ನು ಕಂಡುಕೊಳ್ಳಿ
ಹಾಲಿನ ಕಲಬೆರಕೆಯ ಬಗ್ಗೆ ನಾವು ಆಗಾಗ್ಗೆ ಸುದ್ದಿಗಳನ್ನು ಓದಿದ್ದೇವೆ. ಹಾಲನ್ನು ಹಲವು ವಿಧಗಳಲ್ಲಿ ಕಲಬೆರಕೆ ಮಾಡಲಾಗುತ್ತದೆ. ಹಾಲಿಗೆ ಹೆಚ್ಚು ನೀರು ಬೆರೆಸಿ ಮೋಸ ಮಾಡುವುದು ಒಂದು ಕಡೆಯಾದರೆ, ಇತರ ರಾಸಾಯನಿಕಗಳನ್ನು ಹಾಲಿಗೆ ಬೆರೆಸುವುದು ಕೂಡ ಚಾಲ್ತಿಯಲ್ಲಿದೆ.
ಚಹಾ, ಕಾಫಿ ಅಥವಾ ಹಾಲಿನೊಂದಿಗೆ ಅನೇಕರ ದಿನ ಆರಂಭವಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಚಹಾವನ್ನು ತಯಾರಿಸಲು ಹಾಲು ಬೇಕಾಗುತ್ತದೆ. ಹಾಲನ್ನು ಒಂದು ಪರಿಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ವೈದ್ಯಕೀಯ ತಜ್ಞರು ಪ್ರತಿದಿನ ಒಂದು ಲೋಟ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ. ಹಾಲಿನಲ್ಲಿ ಅನೇಕ ವಿಟಮಿನ್ಗಳು, ಕ್ಯಾಲ್ಸಿಯಂ, ಪ್ರೋಟೀನ್, ನಿಯಾಸಿನ್, ರಂಜಕ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ನಾವು ತಿನ್ನುವ ಆಹಾರ ಸೇರಿದಂತೆ ಎಲ್ಲವೂ ಕಲಬೆರಕೆಯಾಗಿದೆ. ವಿಶೇಷವಾಗಿ ಹಾಲಿನ ವಿಷಯಕ್ಕೆ ಬಂದಾಗ ಈ ಬಗ್ಗೆ ಗಮನಹರಿಸುವುದು ಅತ್ಯಾವಶ್ಯಕ.
ಹಾಲಿನ ಕಲಬೆರಕೆಯ ಬಗ್ಗೆ ನಾವು ಆಗಾಗ್ಗೆ ಸುದ್ದಿಗಳನ್ನು ಓದಿದ್ದೇವೆ. ಹಾಲನ್ನು ಹಲವು ವಿಧಗಳಲ್ಲಿ ಕಲಬೆರಕೆ ಮಾಡಲಾಗುತ್ತದೆ. ಹಾಲಿಗೆ ಹೆಚ್ಚು ನೀರು ಬೆರೆಸಿ ಮೋಸ ಮಾಡುವುದು ಒಂದು ಕಡೆಯಾದರೆ, ಇತರ ರಾಸಾಯನಿಕಗಳನ್ನು ಹಾಲಿಗೆ ಬೆರೆಸುವುದು ಕೂಡ ಚಾಲ್ತಿಯಲ್ಲಿದೆ. ಇನ್ನು ಹಾಲಿನಂತೆಯೇ ಕಾಣುವ ಪಾನೀಯವು ನಮ್ಮ ನಡುವೆ ಇದೆ. ಇಂತಹ ಹಾಲನ್ನು ಕುಡಿಯುವ ಜನರು ಗಂಭೀರ ಕಾಯಿಲೆಗೆ ಗುರಿಯಾಗುತ್ತಾರೆ. ಹೀಗಾಗಿ ಶುದ್ಧ ಹಾಲು ಯಾವುದು ಕಲಬೆರಕೆ ಹಾಲು ಯಾವುದು ಎಂದು ಪತ್ತೆ ಹಚ್ಚುವುದು ಸೂಕ್ತ.
ಕಲಬೆರಕೆ ಹಾಲು ಗುರುತಿಸಲು ಸರಳ ವಿಧಾನ ಹಾಲಿಗೆ ಅತಿಯಾಗಿ ನೀರು ಹಾಕಿದರೆ ಗುರುತಿಸುವುದು ಹೇಗೆ? ಹಾಲಿಗೆ ನೀರನ್ನು ಸೇರಿಸುವುದು ಒಂದು ಸಾಮಾನ್ಯ ವಿಧಾನವಾಗಿದೆ. ಆದರೆ, ಹಾಲಿನಲ್ಲಿ ನೀರು ಇದೆಯೇ? ಅಥವಾ ಇಲ್ಲವೇ? ಅದನ್ನು ಪರೀಕ್ಷಿಸಲು ನೆಲದ ಮೇಲೆ ಒಂದು ಹನಿ ಹಾಲನ್ನು ಹಾಕಿ. ಅದು ನೀರಿಲ್ಲದೆ ಶುದ್ಧ ಹಾಲಾಗಿದ್ದರೆ, ಹಾಲು ಬೇಗನೆ ಭೂಮಿಯಲ್ಲಿ ಇಂಗುವುದಿಲ್ಲ. ಹಾಲಿನೊಂದಿಗೆ ನೀರು ಬೆರೆಸಿದರೆ, ಅದು ತಕ್ಷಣವೇ ನೆಲದಲ್ಲಿ ಇಂಗಿಹೊಗುತ್ತದೆ.
ಹಾಲಿನ ಪುಡಿ ಬಳಸಲಾಗಿದೆಯೇ? ಲೋಡಿನಿಯಾ ರಾಸಾಯನಿಕ ದ್ರಾವಣಕ್ಕೆ ಒಂದು ಹನಿ ಹಾಲನ್ನು ಸೇರಿಸಿ. ಅದು ನೀಲಿ ಬಣ್ಣಕ್ಕೆ ತಿರುಗಿದರೆ, ಹಾಲನ್ನು ಪುಡಿಯಿಂದ ತಯಾರಿಸಲಾಗಿದೆ ಎಂದು ಅರ್ಥ. ಹಾಲಿನ ಪೌಡರ್ ಬಳಸಿ ಕೂಡ ಕೆಲವೊಮ್ಮೆ ಹಾಲು ತಯಾರಿಸಿ ಮಾರಾಟ ಮಾಡಲಾಗುತ್ತದೆ.
ಯೂರಿಯಾದಿಂದ ಮಾಡಿದ ಹಾಲನ್ನು ಈ ಕೆಳಗಿನಂತೆ ಗುರುತಿಸಿ ಒಂದು ಚಮಚ ಹಾಲಿಗೆ ಅರ್ಧ ಟೀ ಚಮಚ ಸೋಯಾಬೀನ್ ಪುಡಿಯನ್ನು ಮಿಶ್ರಣ ಮಾಡಿ. ಐದು ನಿಮಿಷಗಳ ನಂತರ, ಕೆಂಪು ಲಿಟ್ಮಸ್ ಪೇಪರ್ ಅನ್ನು ಮಿಶ್ರಣ ಮಾಡಿ. ಪೇಪರ್ ನೀಲಿ ಬಣ್ಣಕ್ಕೆ ತಿರುಗಿದರೆ ಹಾಲಿಗೆ ಯೂರಿಯಾ ಸೇರಿಸಲಾಗಿದೆ ಎಂದರ್ಥ.
ಹಾಲಿಗೆ ವಾಷಿಂಗ್ ಪೌಡರ್ ಮತ್ತು ಡಿಟರ್ಜೆಂಟ್ ಪೌಡರ್ ಸೇರಿಸಿದ್ದಾರೆಯೇ? ಐದರಿಂದ ಹತ್ತು ಮಿಲಿಲೀಟರ್ ಹಾಲನ್ನು ತೆಗೆದುಕೊಂಡು ಅದೇ ಪ್ರಮಾಣದಲ್ಲಿ ನೀರನ್ನು ಮಿಶ್ರಣ ಮಾಡಿ. ಹಾಲಿನಲ್ಲಿ ನೊರೆ ಕಂಡುಬಂದರೆ, ಹಾಲಿಗೆ ವಾಷಿಂಗ್ ಪೌಡರ್ ಮತ್ತು ಡಿಟರ್ಜೆಂಟ್ ಪೌಡರ್ ಸೇರಿಸಲಾಗಿದೆ ಎಂದರ್ಥ.
ಸಿಂಥೆಟಿಕ್ ಹಾಲು ಹಾಲು ನೈಸರ್ಗಿಕವಾಗಿ ಸ್ವಲ್ಪ ಸಿಹಿಯಾಗಿರುತ್ತದೆ. ಆದರೆ ಸಿಂಥೆಟಿಕ್ ಹಾಲು ಕಹಿಯಾಗಿರುತ್ತದೆ. ಹಾಗೆಯೇ, ಸಿಂಥೆಟಿಕ್ ಹಾಲಿನ ವಾಸನೆಯು ಸಾಬೂನಿನ ವಾಸನೆಯಿಂದ ಕೂಡಿರುತ್ತದೆ. ಬಿಸಿ ಮಾಡಿದಾಗ ಹಾಲು ಹಳದಿ ಬಣ್ಣಕ್ಕೆ ತಿರುಗುತ್ತದೆ. ಆ ಮೂಲಕ ಹಾಲಿನ ಕಲಬೆರಕೆ ಕಂಡುಕೊಳ್ಳಿ.
ಇದನ್ನೂ ಓದಿ: Health Tips: ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ; ನಿರ್ಲಕ್ಷ್ಯ ವಹಿಸದಿರುವುದು ಒಳಿತು
Edamame Beans: ದೈನಂದಿನ ಆಹಾರದಲ್ಲಿ ಸೋಯಾ ಬೀನ್ಸ್ ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ