Updated on: Oct 05, 2021 | 2:05 PM
You must know the health benefits of Edamame Beans
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ - ಸೋಯಾ ಬೀನ್ಸ್ ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಕಡಿಮೆ ಕಂಡುಬರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರ ಹೊರತಾಗಿ, ಪ್ರೋಟೀನ್ ಸಮೃದ್ಧವಾಗಿದೆ. ಸೋಯಾ ಬೀನ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ - ಅಧ್ಯಯನದ ಪ್ರಕಾರ, ಸೋಯಾ ಬೀನ್ಸ್ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸೋಯಾ ಬೀನ್ಸ್ ನಿಯಮಿತವಾಗಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ - ಅಧ್ಯಯನದ ಪ್ರಕಾರ, ಸೋಯಾ ಬೀನ್ಸ್ನಲ್ಲಿ ಕಂಡುಬರುವ ಪ್ರೋಟೀನ್ ಪ್ರಮಾಣವು ಬೊಜ್ಜಿನ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಆರೋಗ್ಯಕರ ಆಹಾರ ತಯಾರಿ- 1 ಕಪ್ ಸೋಯಾ ಬೀನ್ಸ್ ಬೀಜಗಳನ್ನು ಕುದಿಸಿ. ನಂತರ ಅದಕ್ಕೆ 4 ಬೆಳ್ಳುಳ್ಳಿ, ಲವಂಗ, 2 ಟೊಮ್ಯಾಟೊ, 1 ಚಮಚ ನಿಂಬೆ ರಸ, ರುಚಿಗೆ ಉಪ್ಪು, 3-5 ತಾಜಾ ಕರಿಬೇವು ಎಲೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸೋಯಾ ಬೀನ್ಸ್ ಪಲ್ಯ ಸವಿಯಲು ಸಿದ್ಧ.